ಸಿಂಧಗಿ

ರೈತ ವಿರೋಧಿ ಕಾನೂನುಗಳ ರದ್ದತಿಗೆ ಆಗ್ರಹಿಸಿ ಪ್ರತಿಭಟನೆ

ರೈತ ವಿರೋಧಿ ಕಾನೂನುಗಳ ರದ್ದತಿಗೆ ಆಗ್ರಹಿಸಿ ಪ್ರತಿಭಟನೆ

ಸಿಂದಗಿ 11: ಮೂರು ರೈತ ವಿರೋಧಿ ಕರಾಳ ಕಾನೂನು ಜಾರಿ ಹಾಗೂ ತೈಲಬೆಲೆ ಏರಿಕೆ ಖಂಡಿಸಿ ಬ್ಲಾಕ್ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸಿಂದಗಿ ಪಟ್ಟಣದ ಮಹಾತ್ಮಾ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಪಾದಯಾತ್ರೆ ಮೂಲಕ ಪಟ್ಟಣದ ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. 

ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿಠ್ಠಲ ಜಿ. ಕೊಳ್ಳೂರ ಮಾತನಾಡಿ, ಕೇಂದ್ರ ಬಿಜೆಪಿ ಸರ್ಕಾರ ರೈತ ವಿರೋಧಿ, ಜನಸಾಮಾನ್ಯರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಸಿ ಬಡವರ ಹೊಟ್ಟೆ ಮೇಲೆ ಬರೆ ಎಳೆಯುತ್ತಿದೆ. ಮೂರು ರೈತ ವಿರೋಧಿ ಕಾಯಿದೆಗಳ ವಿರುದ್ಧ 75 ದಿನಗಳಿಂದ ಲಕ್ಷಾಂತರ ರೈತರು ದೆಹಲಿಯ ಗಡಿಗಳಲ್ಲಿ ಚಳುವಳಿ ನಿರತರಾಗಿದ್ದಾರೆ. ತನ್ನ ಹಠಮಾರಿ ಹಾಗೂ ಅಮಾನವೀಯ ಧೋರಣೆ ಬಿಟ್ಟು ರೈತರ ಬೇಡಿಕೆಗಳಿಗೆ ಸ್ಪಂದಿಸಬೇಕೆಂದು ಆಗ್ರಹಿಸಿದರು. 

ಮಲ್ಲಣ್ಣ ಸಾಲಿ, ಮುಸ್ತಾಕ ಮುಲ್ಲಾ, ಸಂತೋಷ ಹರನಾಳ, ಎಮ್.ಎ. ಖತಿಬ, ಬಿ.ಸಿ. ಕೊಣ್ಣೂರ, ಗೊಲ್ಲಾಳಪ್ಪಗೌಡ ರೂಗಿ, ಶಿವನಗೌಡ ಬಿರಾದಾರ, ನಿಂಗಣ್ಣ ಛಟ್ಟಿ, ಶ್ಯಾಮರಾವ ಚವ್ಹಾಣ, ವಿಠ್ಠಲ ಖೇಡಗಿ, ಭೀಮು ವಾಲಿಕಾರ, ರಾಮಚಂದ್ರ ರಾಠೋಡ, ಸಿದ್ದಣ್ಣ ಹಿರೇಕುರಬರ, ಯುವ ಕಾಂಗ್ರೆಸ ಅಧ್ಯಕ್ಷ ಇರ್ಪಾನ ಆಳಂದ, ಹಾಸಿಂ ಆಳಂದ, ಮಡ್ಡೆಪ್ಪ ಸೊನ್ನದ, ಮಹಿಳಾ ಅಧ್ಯಕ್ಷೆ ಶಾರದಾ ಬಟಗೇರಿ, ಪೈಗಂಬರ್ ಹಚ್ಯಾಳ, ಎಮ್ ಕೆ ಬಿರಾದಾರ,  ಯಲ್ಲು ಕೆರಕಿ, ವಿಠ್ಠಲ ರೇವೂರ, ಮಹಾದೇವ ಕೊಂಡಗೂಳಿ, ನಿಂಗಣ್ಣ ಸುಂಗಠಾಣ, ಅಮೋಘಿ ಮಳ್ಳಿ, ಸಂಜನಾ ಭಜಂತ್ರಿ ಹಾಗೂ ಕಾರ್ಯಕರ್ತರು, ರೈತರು, ಅಭಿಮಾನಿಗಳು ಇನ್ನಿತರರು ಇದ್ದರು. 

ಸುದ್ದಿ ಓದಿ