ಜಾಕವೇಲ್ನಿಂದ ಕಾಲುವೆಗೆ ನೀರು ಬಿಡುವಂತೆ ಒತ್ತಾಯಿಸಿ ಪ್ರತಿಭಟನೆ
ಜಮಖಂಡಿ : 13-2ಜನ, ಜಾನುವಾರುಗಳಿಗೆ ಕುಡಿಯಲು ನೀರು ಜಾಕವೇಲ್ನಿಂದ ಕಾಲುವೆಗೆ ನೀರು ಬಿಡಬೇಕೆಂದು ಒತ್ತಾಯಿಸಿ. ಅಥಣಿ ಹಾಗೂ ಜಮಖಂಡಿ ಮಾರ್ಗದ ರಸ್ತೆ ಸಂಚಾರವನ್ನು ತಡೆದು ಪ್ರತಿಭಟನೆ ನಡೆಸಿದರು. ನೀರಾವರಿ ಇಲಾಖೆಯ ಎಇಇ ಹಾಗೂ ಇಂಜೀನೀಯರ ಅವರಿಗೆ ತುಂಗಳ ಗ್ರಾಮಸ್ಥರು ಹಿಗ್ಗಾ-ಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ಜರುಗಿತು.
ತಾಲೂಕಿನ ತುಂಗಳ ಗ್ರಾಮದ ಗ್ರಾಮಸ್ಥರಿಗೆ ನೀರಾವರಿ ಇಲಾಖೆಯ ಅಧಿಕಾರಿಯಾದ ರಾಠೋಡ ಅವರು ಕಳೆದ ಹತ್ತು ವರ್ಷದಿಂದ ಜಾಕವೇಲ್ನಿಂದ ಜನ-ಜಾನುವಾರುಗಳಿಗೆ ನೀರು ಬಿಡಬೇಕೆಂದು ಒತ್ತಾಯಿಸಿ ಸಾಕಷ್ಟು ಬಾರಿ ಮನವಿ ಸಲಿಸಿದರು ಪ್ರಯೋಜನವಾಗಿಲ್ಲ. ನೀರಾವರಿ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿ ತನದಿಂದ ದನ,ಕರುಗಳಿಗೆ ಹಾಗೂ ಜನರಿಗೆ ಕುಡಿಯಲು ನೀರಿಗಾಗಿ ಪರದಾಡುವ ಪರಿಸ್ಥಿತಿ ಬಂದಿದೆ. ಬೇಸಿಗೆ ಕಾಲದಲ್ಲಿ ಬೋರವೇಲ್ಗಳು ಸಂಪೂರ್ಣವಾಗಿ ಬತ್ತಿ ಹೋಗಿದರಿಂದ ನೀರಿಗಾಗಿ ಆಹಾಕಾರ ಉಂಟಾಗಿದೆ. ಅಧಿಕಾರಿಗಳು ರೈತರಿಗೆ ಸುಳ್ಳು ಹೇಳುತ್ತಿದ್ದಾರೆ. ರಾಠೋಡ ಎಂಬ ಅಧಿಕಾರಿಯು ಸ್ಥಳಕ್ಕೆ ಬರುವವರೆಗೆ ರಸ್ತೆ ಸಂಚಾರವನ್ನು ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದು. ರೈತರಿಗೆ ಮೋಸ, ಸುಳ್ಳು ಹೇಳುತ್ತಾ ಯಾವದೊಂದು ಕೆಲಸ ಮಾಡದೆ. ಬೆಂಗಳೂರಿಗೆ ಹೋಗಿದ್ದೇನೆಂದು ರೈತರನ್ನು ಸುಳ್ಳು ಹೇಳಿ ದಾರಿ ತಪ್ಪಿಸುತ್ತಿದ್ದಾರೆಂದು ಆರೋಪಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ನೀರಾವರಿ ಇಲಾಖೆಯ ಎಇಇ ಶಿವಮೂರ್ತಿ ಮತ್ತು ಇಂಜೀನೀಯರ ನಾಯಕ ಅವರಿಗೆ ಹಿಗ್ಗಾ-ಮುಗ್ಗಾ ತರಾಟೆಗೆ ತೆಗೆದುಕೊಂಡು. ರಾಠೋಡ ಅವರು ಸ್ಥಳಕ್ಕೆ ಬರುವವರೆಗೆ ನಿಮ್ಮನ್ನು ಬಿಡುವುದಿಲ್ಲವೆಂದು ಪಟ್ಟು ಹಿಡಿದರು. ಜಮಖಂಡಿ ಸಿಪಿಐ ಗುರುನಾಥ ಚವ್ಹಾಣ ಹಾಗೂ ಪೋಲಿಸ ಸಿಬ್ಬಂದಿಗಳು ಪ್ರತಿಭಟನಾಕರರನ್ನು ಮನವಲಿಸಲು ಸಾಕಷ್ಟು ಪ್ರಯತ್ನ ಪಟ್ಟರು. ನೀರು ಬಿಡುವವರೆಗೆ ಪ್ರತಿಭಟನೆ ಹಿಂಪಡೆಯುವುದಿಲ್ಲ. ಮುಂದೆ ಉಗ್ರವಾದ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ಕಲ್ಲಪ್ಪ ಗಿರಡ್ಡಿ, ಬಸಗೌಡ ಕನ್ನಾಳ, ರವಿ ಹೊಸೂರ, ರಾವಸಾಬ ಬಿರಾದರ, ಮಲ್ಲಪ್ಪ ಹೊನಗೌಡ, ಅಶೋಕ ನ್ಯಾಮಗೌಡ, ಸದಾಶಿವ ಹೊನವಾಡ, ಹನಮಂತ ಗಣಿ, ಶಿವಾಪ್ಪ ಕರೋಶಿ, ಬಸು ಗಣಿ, ಸದಾಶಿವ ನ್ಯಾಮಗೌಡ, ಕಲ್ಲಪ್ಪ ಮನಗೂಳಿ, ಅಪ್ಪು ಬುದ್ನಿ, ಹನಮಂತ ತೇಲಿ, ಸಂದೀಪ ಲಿಂಗನೂರ, ಪಂಡಿತ ಗಿರಡ್ಡಿ, ಶ್ರೀವಾಸ ಹೊಸೂರ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗಿಯಾಗಿದರು.
ಅಥಣಿ ಮತ್ತು ಜಮಖಂಡಿ ರಸ್ತೆ ಸಂಚಾರಕ್ಕೆ ಮುಳ್ಳಿನ ಕಂಟಿಯನ್ನು ಬಡಿದ್ದು. ಸಂಪೂರ್ಣ ಬಂದ ಮಾಡಲಾಗಿದ ಕಾರಣ ವಾಹನ ಸವಾರರು. ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತು. ರಸ್ತೆ ಸಂಚಾರದಲ್ಲಿ ಪ್ರತಿಭಟನಾಕಾರರು ಅಡುಗೆಯನ್ನು ಮಾಡುವ ದೃಶ್ಯ ಸಾಮಾನ್ಯವಾಗಿತ್ತು.