ಕಾಗವಾಡ

7 ಗಂಟೆಗಳ ಕಾಲ ವಿದ್ಯುತ್ ಪೂರೈಕೆಗೆ ಒತ್ತಾಯಿಸಿ ಪ್ರತಿಭಟನೆ

7 ಗಂಟೆಗಳ ಕಾಲ ವಿದ್ಯುತ್ ಪೂರೈಕೆಗೆ ಒತ್ತಾಯಿಸಿ ಪ್ರತಿಭಟನೆ

ಹೆಸ್ಕಾಂ ಇಲಾಖೆಯ ಯಕ್ಕಂಚಿ ಭರವಸೆ ಮೇರೆಗೆ ಹಿಂದಕ್ಕೆ 

ಶೇಡಬಾಳ 02: ತಾಲೂಕಿನ ಶಿರಗುಪ್ಪಿ, ಕಾಗವಾಡ ಮೊದಲಾದ ಗ್ರಾಮಗಳ ಯಾತ ನೀರಾವರಿ ಸಂಘಗಳ ವಿದ್ಯುತ್ ಪಂಪ್‌ಸೆಟ್‌ಗಳಿಗೆ ಆರು ಗಂಟೆಗಳ ಕಾಲ ತ್ರಿಫೆಸ್ ವಿದ್ಯುತ್ ಪೂರೈಸಲಾಗುತ್ತಿದ್ದು, ಅದನ್ನು 7 ಗಂಟೆಯ ವರೆಗೆ ನೀಡುವಂತೆ ಒತ್ತಾಯಿಸಿ, ರೈತ ಮುಖಂಡ ಸುರೇಶ ಚೌಗುಲಾ ಅವರ ನೇತೃತ್ವದಲ್ಲಿ ಗುರುವಾರ ದಿ. 01 ರಂದು ನುರಾರು ರೈತರು ಉಗಾರ ಖುರ್ದ ಹೆಸ್ಮಾಂ ಇಲಾಖೆಗೆ ಮನವಿ ಪತ್ರ ಅರ​‍್ಿಸಿ, ಪ್ರತಿಭಟನೆ ಕೈಗೊಂಡರು. ಇದಕ್ಕೆ ಸ್ಪಂದಿಸಿದ ಹೆಸ್ಕಾಂ ಇಲಾಖೆ ನಾಳೆಯಿಂದ 7 ಗಂಟೆಗಳ ಕಾಲ ವಿದ್ಯುತ್ತ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ. 

ಈ ಸಮಯದಲ್ಲಿ ಸುರೇಶ ಚೌಗುಲಾ ಮಾತನಾಡಿ, ರಾಜ್ಯ ಇಂಧನ ಸಚಿವರು ದಿನಾಲು 7 ಗಂಟೆಗಳ ಕಾಲ ತ್ರಿಫೆಸ್ ವಿದ್ಯುತ್ ನೀಡುವಂತೆ ವಿಧಾನ ಸಭೆಯಲ್ಲಿಯೇ ಸದಸ್ಯರಿಗೆ ತಿಳಿಸಿದ್ದರೂ ಕೂಡಾ ಇಲ್ಲಿಯ ಹೆಸ್ಕಾಂ ಇಲಾಖೆಯ ಅಧಿಕಾರಿಗಳು ಆರು ಗಂಟೆಗಳ ಕಾಲ ಮಾತ್ರ ವಿದ್ಯುತ್ ಪೂರೈಸುತ್ತಿದ್ದು, ಇದರಿಂದ ರೈತರಿಗೆ ಸಾಕಷ್ಟು ತೊಂದರೆ ಉಂಟಾಗುತ್ತಿದ್ದು, ಕೂಡಲೇ ಏಳು ಗಂಟೆಗಳ ವರೆಗೆ ತ್ರಿಫೆಸ್ ವಿದ್ಯುತ್ ಪೂರೈಸುವಂತೆ ಒತ್ತಾಯಿಸಿದರು. ಇದಕ್ಕೆ ಸ್ಪಂದಿಸಿದ ಸ್ಥಳೀಯ ಹಾಗೂ ಅಥಣಿ ಹೆಸ್ಮಾಂ ಇಲಾಖೆಯ ಎಇಇ ಸಿ.ಪಿ. ಯಕ್ಕಂಚಿ ರೈತರ ಈ ಬೇಡಿಕೆ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತಂದು, ನಾಳೆಯಿಂದ 7 ಗಂಟೆಗಳ ಕಾಲ ತ್ರಿಫೆಸ್ ವಿದ್ಯುತ್ ನೀಡಲಾಗುವುದು ಎಂದು ಹೇಳಿದರು. ಹೆಸ್ಕಾಂ ಇಲಾಖೆ 7 ಗಂಟೆ ವಿದ್ಯುತ ನೀಡುವುದಾಗಿ ಭರವಸೆ ನೀಡಿದ ನಂತರ ರೈತರು ತಮ್ಮ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು. 

ಈ ಸಮಯದಲ್ಲಿ ಮಾಜಿ ಶಾಸಕ ರಾಜು ಕಾಗೆ, ಶಿವಗೌಡಾ ಕಾಗೆ, ಸುರೇಶ ಚೌಗುಲಾ, ಭೀಮು ಭೋಲೆ, ರಾಜೇಂದ್ರ ಚೌಗುಲಾ, ಪ್ರಕಾಶ ಹೆಮಗೀರೆ, ವಿಜಯ ಅಕಿವಾಟೆ, ಜಗದೀಶ ಕುಸನಾಳೆ, ಪೋಪಟ ಕಾಟಕರ, ಅಣ್ಣಾಸಾಬ ಅವಟಿ, ಪದ್ಮಕುಮಾರ ಆಳಪ್ಪನವರ, ಆದಿನಾಥ ಬಿಂದಗೆ ಸೇರಿದಂತೆ ಹಲವಾರು ರೈತ ಮುಖಂಡರು ಉಪಸ್ಥಿತರಿದ್ದರು. 


ಸುದ್ದಿ ಓದಿ