ಗ್ರಾ.ಪಂ ಕಟ್ಟಡದ ಜಾಗೆ ಬಿಟ್ಟುಕೊಡಲು ಆಗ್ರಹಿಸಿ ಪ್ರತಿಭಟನೆ
ಬೈಲಹೊಂಗಲ 07: ಗ್ರಾ.ಪಂ ಕಟ್ಟಡದ ಜಾಗೆ ತಮಗೆ ಸೇರಿದ್ದು ಅದನ್ನು ಬಿಟ್ಟುಕೊಡಬೇಕೆಂದು ಪಟ್ಟು ಹಿಡಿದ ಓರ್ವ ತಾಲೂಕಿನ ನಾಗನೂರ ಗ್ರಾ.ಪಂ ಕಟ್ಟಡದಲ್ಲಿ ಎಮ್ಮೆ ಕಟ್ಟಿಹಾಕಿ ಓರ್ವ ಪ್ರತಿಭಟನೆ ನಡೆಸುತ್ತಿದ್ದಾನೆ
ನಾಗನೂರ ಗ್ರಾಮದ ಸಿದ್ದರಾಮ ಹೊಸಮನಿ ಪ್ರತಿಭಟನೆ ಮಾಡುತ್ತಿದ್ದಾನೆ. ಗ್ರಾಮದ ಸರ್ವೆ ನಂ. 418/10 ರಲ್ಲಿ 5 ಗುಂಟೆ ಜಾಗೆಯಲ್ಲಿ ಗ್ರಾಮ ಪಂಚಾಯತಿ ನಿರ್ಮಾಣಗೊಂಡಿದ್ದು ಈ ಬಗ್ಗೆ ತಾ.ಪಂ ಕಾರ್ಯನಿರ್ವಾಹಕರು, ಜಿ.ಪಂ ಕಾರ್ಯನಿರ್ವಾಹಕರಿಗೂ ಪತ್ರ ಬರೆದು ಜಾಗೆ ಬಿಟ್ಟುಕೊಡಲು ಜಮೀನು ಮಾಲೀಕ ಸಿದ್ದರಾಮ ಹೊಸಮನಿ ಪತ್ರ ಬರೆದಾಗ ನ್ಯಾಯ ಸಿಗದ ಕಾರಣ ಪ್ರತಿಭಟನೆ ನಡೆಸುತ್ತಿದ್ದಾನೆ.
ಪ್ರತಿ ದಿನ ದನ ಕಟ್ಟಿ ಪ್ರತಿಭಟಿಸಿ ಸಿದ್ದರಾಮ ಸಂಜೆಯಾದೊಡನೆ ಮನೆಗೆ ದನ ಹೊಡೆದುಕೊಂಡು ಹೋಗುತ್ತಿದ್ದು ಮಾರನೆ ದಿನ ಪಂಚಾಯತಿ ಪ್ರಾರಂಭವಾದೊಡನೆ ಎಮ್ಮೆ ಕಟ್ಟಿ ಹಾಕಿ ಧರಣಿ ನಡೆಸುತ್ತಾನೆ.
ತಾ.ಪಂ ಕಾರ್ಯನಿರ್ವಾಹಕ ಅನಿಸಿಕೆ-
ಸಿದ್ದರಾಮ ಹೊಸಮನಿ 25.8.2009 ರಂದು ಗ್ರಾ. ಪಂ ಗೆ ದಾನಪತ್ರ ಮಾಡಿಸಿ ಕೊಟ್ಟಿದ್ದಾರೆ. ಹೀಗಾಗಿ ಜಾಗೆ ಪತ್ರ ಬಿಟ್ಟು ಕೊಡುವ ಪ್ರಮೇಯ ಉದ್ಭವಿಸುವದಿಲ್ಲ
ಅಧ್ಯಕ್ಷರ ಅನಿಸಿಕೆ-
ಸಿದ್ದರಾಮ ಹೊಸಮನಿ ತಮ್ಮ ಜಾಗೆಯನ್ನು ಗ್ರಾ. ಪಂಗೆ ದಾನಪತ್ರ ಕೊಟ್ಟ ಬಗ್ಗೆ ದಾಖಲೆ ಇದೆ. ದಿನಾಲೂ ದನ ಕಟ್ಟಿ ಪ್ರತಿಭಟನೆ ನಡೆಸುತ್ತಿರುವುದರಿಂದ ನಾಗರಿಕರಿಗೆ ತೊಂದರೆಯಾಗುತ್ತಿದೆ.
ಬಸವರಾಜ ತಲ್ಲೂರ. ಗ್ರಾ.ಪಂ ಅಧ್ಯಕ್ಷ ನಾಗನೂರ