ಹೂವಿನ ಹಡಗಲಿ

ವಿದ್ಯುತ್ ಗುತ್ತಿಗೆದಾರರಿಂದ ಬೇಡಿಕೆಗೆ ಒತ್ತಾಯಿಸಿ ಧರಣಿ

ವಿದ್ಯುತ್ ಗುತ್ತಿಗೆದಾರರಿಂದ ಬೇಡಿಕೆಗೆ ಒತ್ತಾಯಿಸಿ ಧರಣಿ

ಹೂವಿನಹಡಗಲಿ ಆ.05- ಇಲ್ಲಿನ ವಿದ್ಯುತ್ ಗುತ್ತಿಗೆದಾರರಿಂದ ವಿದ್ಯುತ್ ಕಾಮಗಾರಿಗಳ ತುಂಡು ಗುತ್ತಿಗೆ ನೀಡುವುದು ಸೇರಿದಂತೆ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಈಚೆಗೆ ಪಟ್ಟಣದ ಜೇಸ್ಕಾಂ ಉಪವಿಭಾಗದ ಕಚೇರಿ ಎದುರು ಧರಣಿ ನಡೆಸಿದರು.

ಕೃಷಿ ಪಂಪ್ಸೆಟ್ಗಳಿಗೆ ವಿದ್ಯುತ್ ಪರಿವರ್ತಕಗಳನ್ನು ತುತರ್ಾಗಿ ಪೂರೈಸಬೇಕು. 1ಲಕ್ಷದಿಂದ 5 ಲಕ್ಷದವರಿಗಿನ ಕಾಮಗಾರಿಗಳನ್ನು ಸ್ಥಳೀಯ ಗುತ್ತಿಗೆದಾರರಿಗೆ ತುಂಡು ಗುತ್ತಿಗೆ ನೀಡಬೇಕು. ಗೃಹ,ವಾಣಿಜ್ಯ ಬಳಕೆ ಸಂಪರ್ಕಗಳನ್ನು ಶೀಘ್ರ ಮೀಟರ್ಗಳನ್ನು ಅಳವಡಿಸಬೇಕು. ಬೆಳಕು ಯೋಜನೆಯ ಹಾಗೂ ಕಾಮರ್ಿಕರ ಬಿಲ್ಗಳನ್ನು ಸಕಾಲದಲ್ಲಿ ಪಾವತಿಸಬೇಕು ಎಂದು ಒತ್ತಾಯಿಸಿದರು.

ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಬಿ.ಕೆ.ಎಸ್.ರಾಜು,ಸದಸ್ಯರಾದ ಎಸ್.ಎಸ್.ಹರೀಶ, ಕೆ.ಎಚ್.ದುಶ್ಯಂತಪ್ಪ,ಟಿ.ವೀರಣ್ಣ,ಗಂಗಾಧರ, ಜಿ.ಸಿದ್ದೇಶ,ಎಲ್.ದೀಪಾ ಇದ್ದರು. 

 

ಸುದ್ದಿ ಓದಿ