ಇಂಡಿ

ನಿಂಬಾಳ ಗ್ರಾಮಕ್ಕೆ ಬಸ್ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ಪ್ರತಿಭಟನೆ

ನಿಂಬಾಳ ಗ್ರಾಮಕ್ಕೆ ಬಸ್ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ಪ್ರತಿಭಟನೆ

ಇಂಡಿ: ಪಿ.ಯು.ಸಿ ದ್ವೀತಿಯ ವರ್ಗದ ಪರೀಕ್ಷೆ ಮುಗಿದ ನಂತರ ತಾಲೂಕಿನ ನಿಂಬಾಳ ಗ್ರಾಮಕ್ಕೆ ಹೋಗಲು ಬಸ್ಸಿನ ಸೌಕರ್ಯ ಒದಗಿಸಲು ಆಗ್ರಹಿಸಿ ವಿದ್ಯಾರ್ಥಿಗಳು ಮಂಗಳವಾರ ವಿದ್ಯಾರ್ಥಿಗಳು ಬಸವೇಶ್ವರ ವೃತ್ತದಲ್ಲಿ ಬಸ್ಸು ನಿಲ್ಲಿಸಿ ಸೋಮವಾರ ಪ್ರತಿಭಟನೆ ನಡೆಸಿದರು.  

ಇಂಡಿ ಪಟ್ಟಣದಿಂದ ನಿಂಬಾಳ ಗ್ರಾಮಕ್ಕೆ ಹೋಗಲು ಮಧ್ಯಾಹ್ನ 2 ಗಂಟೆಗೆ ಬಸ್ಸು ಇತ್ತು. ಆ ಬಸ್ಸು ಬೇರೆ ಕಡೆಯಿಂದ ಇಂಡಿಗೆ ಬಂದು ನಂತರ ನಿಂಬಾಳಕ್ಕೆ ಹೋಗಬೆಕಾಗಿತ್ತು.  ಆದರೆ ಎರಡು ಗಂಟೆಗೆ ಬರಬೇಕಾದ ಬಸ್ಸು 3 ಗಂಟೆಯಾದರೂ ಬರಲೇ ಇಲ್ಲ. ಇದರಿಂದ ಕೋಪಗೊಂಡ ವಿದ್ಯಾರ್ಥಿಗಳು ಬೆಳಗ್ಗೆ ಪರೀಕ್ಷೆಗಾಗಿ 7 ಗಂಟೆಗೆ ನಿಂಬಾಳ ಬಿಟ್ಟಿದ್ದೇವೆ. ಈಗ ಮೂರು ಗಂಟೆಯಾದರೂ ಹೋಗಲು ಯಾವ ಬಸ್ಸು ಇಲ್ಲ. ವಿದ್ಯಾರ್ಥಿಗಳಿಗೆ ಹಸಿವು ಆಗಿದೆ. ಹೋಗಲು ಬೇರೆ ಬಸ್ಸಿನ ವ್ಯವಸ್ಥೆ ಮಾಡಬೇಕೇಂದು ಆಗ್ರಹಿಸಿ  ಪ್ರತಿಭಟನೆಯಲ್ಲಿ ನಡೆಸಿದರು. 

ಆದರೆ ಕೆಎಸ್‌ಆರ್‌ಸಿ ಯವರು ಒಪ್ಪಲಿಲ್ಲ. ಕೊನೆಗೆ ವಿದ್ಯಾರ್ಥಿಗಳು ಯಾವ ಬಸ್ಸು ನಿಲ್ದಾಣ ಹೊರಗೆ ಬಿಡುವದಿಲ್ಲ ಎಂದು ಬಸ್ಸು ಮುಂದೆ ನಿಂತು ಪ್ರತಿಭಟನೆ ನಡೆಸಿ ವ್ಯವಸ್ಥಾಪಕರ ವಿರುದ್ಧ ಘೋಷಣೆ ಕೂಗತೊಡಗಿದರು. 

ಘಟನಾ ಸ್ಥಳಕ್ಕೆ ಆಗಮಿಸಿದ ಘಟಕ ವ್ಯವಸ್ಥಾಪಕರು ಮತ್ತು ಪೊಲೀಸ್ ಸಿಬ್ಬಂದಿ ಬೇರೆ ಬಸ್ಸಿನ ಅನುಕೂಲ ಮಾಡಿದ ನಂತರ ಪ್ರತಿಭಟನೆಯಿಂದ ವಿದ್ಯಾರ್ಥಿಗಳು ಹಿಂದೆಕ್ಕೆ ಸರಿದರು. 

ಪ್ರತಿಭಟನೆಯಲ್ಲಿ ಬಸವರಾಜ ಹೊಸಮನಿ, ರಾಜು ಪಾಟೀಲ, ಶ್ರೀಮಂತ ಹೂಗಾರ, ಶರಣು ಕಟ್ಟಮನಿ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. 


ಸುದ್ದಿ ಓದಿ