ಗುಳೇಗುಡ್ಡ

ಹಕ್ಕು ಪತ್ರಕ್ಕಾಗಿ ಒತ್ತಾಯಿಸಿ ಪ್ರತಿಭಟನೆ

ಹಕ್ಕು ಪತ್ರಕ್ಕಾಗಿ ಒತ್ತಾಯಿಸಿ ಪ್ರತಿಭಟನೆ
ತಾಲೂಕಿನ ಮಂಗಳಗುಡ್ಡ ಗ್ರಾಮದಲ್ಲಿ ಪ್ರವಾಹ ಸಂತ್ರಸ್ತ ಮನೆಗಳ ದಲಿತರಿಗೆ ಹಕ್ಕುಪತ್ರ ನೀಡಲು ಒತ್ತಾಯಿಸಿ ಕರ್ನಾಟಕ ಬಹುಜನ

ಗುಳೇದಗುಡ್ಡ 23 :  ತಾಲೂಕಿನ ಮಂಗಳಗುಡ್ಡ ಗ್ರಾಮದಲ್ಲಿನ ದಲಿತ ಸಮಾಜದ  ಪ್ರವಾಹ ಸಂತ್ರಸ್ತರಿಗೆ  ಮನೆಗಳ ಹಕ್ಕು ಪತ್ರಗಳನ್ನು ನೀಡಬೇಕೆಂದು ಕರ್ನಾಟಕ ಬಹುಜನ ಚಳುವಳಿ ಸಂಘದ ಜಿಲ್ಲಾಧ್ಯಕ್ಷ ಹಿರಿಯಪ್ಪ ಮಾದರ ಅವರು ಆಗ್ರಹಿಸಿದ್ದಾರೆ. 

ಈ ಕುರಿತು ಈಚೆಗೆ ಮಂಗಳಗುಡ್ಡ ಗ್ರಾಮದಲ್ಲಿ ಗ್ರಾಪಂ ಕಚೇರಿಯ ಎದುರು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ಭಗತ್‌ಸಿಂಗ್ ಅವರ ಭಾವಚಿತ್ರಗಳನ್ನು ಇಟ್ಟು  ಪ್ರತಿಭಟನೆ ನಡೆಸಿ ಮಾತನಾಡಿ, ಮಂಗಳಗುಡ್ಡ ಗ್ರಾಮದಲ್ಲಿನ ದಲಿತ ಜನಾಂಗದವರ ಆಶ್ರಯ ಮನೆಗಳಲ್ಲಿ ಈಗ ಬೇರೆ ಬೇರೆ ಜನರು ವಾಸ ಮಾಡುತ್ತಿದ್ದಾರೆ. ಅವರನ್ನು ಅಲ್ಲಿಂದ ತೆರವುಗೊಳಿಸಿ ನಮ್ಮ ಜನಾಂಗದ ಜನರಿಗೆ ಮನೆಗಳನ್ನು ಒದಗಿಸಬೇಕು. ಈಗ ಮನೆಗಳಲ್ಲಿ ವಾಸ ಮಾಡುತ್ತಿರುವ ಜನರು ಸಹ ಮನೆಗಳನ್ನು ಖಾಲಿ ಮಾಡುವ ಭರವಸೆ ನೀಡಿದ್ದಾರೆ. ಮಂಗಳಗುಡ್ಡ ಗ್ರಾಮದ ಸುಮಾರು 74 ಜನರಿಗೆ ಹಕ್ಕು ಪತ್ರಗಳನ್ನು ಅಧಿಕಾರಿಗಳು ಕೂಡಲೇ ನೀಡಬೇಕು. ಮತ್ತು ಆಶ್ರಯ ಯೋಜನೆಯ ಪ್ಲಾಟ್‌ಗಳಲ್ಲಿ ಮಕ್ಕಳ ಶಿಕ್ಷಣಕ್ಕೆ ಶಾಲೆಯನ್ನು ತೆರೆಯಬೇಕೆಂದು ಜಿಲ್ಲಾಧ್ಯಕ್ಷ ಹಿರಿಯಪ್ಪ ಮಾದರ ಅವರು ಅಧಿಕಾರಿಗಳನ್ನು ಆಗ್ರಹಿಸಿದರು. 

ಅಧಿಕಾರಿಗಳು ಸಹ ಮಂಗಳಗುಡ್ಡ ಗ್ರಾಮದ ಸುಮಾರು 74 ಜನರಿಗೆ ಈ ಶನಿವಾರದೊಳಗೆ ಹಕ್ಕು ಪತ್ರಗಳನ್ನು ನೀಡುವ ಭರವಸೆಯನ್ನು ನೀಡಿದ್ದಾರೆ. ನೀಡದಿದ್ದರೆ ಮತ್ತೆ ತಹಸೀಲ್ದಾರ ಕಚೇರಿ ಎದುರು ಪ್ರತಿಭಟನೆ ಮಾಡಬೇಕಾಗುತ್ತದೆಂದು ಎಂದು ಅವರು ಎಚ್ಚರಿಸಿದ್ದಾರೆ. 

ಫಕೀರಪ್ಪ ತಳವಾರ, ಭೀಮಸಿ ಪರ್ವತಿ, ಹನಮಂತ ತಳವಾರ, ಬೈಲಪ್ಪ ಆಸಂಗಿ, ರಾಜು ಮಾದರ, ಗದಗ ಜಿಲ್ಲಾಧ್ಯಕ್ಷ ಮುತ್ತು ನಂದಿ, ಮಾದಿಗ ಸಮಾಜದ ಮುಖಂಡರು, ಗ್ರಾಮದ ಹಿರಿಯರು ಇದ್ದರು. 

ಸುದ್ದಿ ಓದಿ