ಕಾಗವಾಡ

ತೈಲ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

ತೈಲ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ
ಕಾಗವಾಡ ಪಟ್ಟಣದಲ್ಲಿ ಕೇಂದ್ರ ಸರಕಾರದ ತೈಲ ಬೆಲೆ ಏರಿಕೆ ಖಂಡಿಸಿ ಮಾಜಿ ಸಚಿವ ವೀರಕುಮಾರ ಪಾಟೀಲ ಮತ್ತಿತರರು ಸೈಕಲ್ ಹತ್ತಿ

ಶೇಡಬಾಳ 14: ಪೆಟ್ರೋಲ್, ಡಿಸೆಲ್, ಅಡುಗೆ ಅನೀಲ ಹಾಗೂ ಅಗತ್ಯ ವಸ್ತುಗಳ ಬೆಲೆ  ಏರಿಕೆ ಖಂಡಿಸಿ ಕಾಗವಾಡ ತಾಲೂಕಾ ಕಾಂಗ್ರಸ್ ಮತ್ತು ವಿವಿಧ ಘಟಕಗಳಿಂದ ಕಾಂಗ್ರಸ್ ಕಾರ್ಯಕರ್ತರು ಹಾಗೂ ಮುಖಂಡರು ಪ್ರತಿಭಟನೆ ನಡೆಸಿ ಕೇಂದ್ರ ಸರಕಾರದ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿ ಮೋದಿ ಹಠಾವೋ ದೇಶ ಬಚಾವೋ ಎಂಬ ಘೋಷಣೆಗಳನ್ನು ಕೂಗುತ್ತ  ಮಾಜಿ ಸಚಿವ ವೀರಕುಮಾರ ಪಾಟೀಲ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ ಅಕಿವಾಟೆಯವರ ನೇತೃತ್ವದಲ್ಲಿ ಕಾಗವಾಡ ಪೆಟ್ರೋಲ್ ಬಂಕ್ ಮುಂದೆ ಸೈಕಲ್ ಹತ್ತಿ ಕೇಂದ್ರ ಸರಕಾರವನ್ನು ವ್ಯಂಗ್ಯವಾಡಿದರು. 

ಸೋಮವಾರ ದಿ.14 ರಂದು ಕಾಗವಾಡ ಪಟ್ಟಣದ ಕಾಗವಾಡ ಅಥಣಿ ಮಾರ್ಗದ ಪೆಟ್ರೋಲ್ ಬಂಕನಲ್ಲಿ  ಪ್ರತಿಭಟನೆ ನಡೆಸಿದರು. ಈ ವೇಳೆ ಮಾಜಿ ಸಚಿವ ವೀರಕುಮಾರ ಪಾಟೀಲ ಮಾತನಾಡಿ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಜನಸಾಮಾನ್ಯರ, ಬಡವರ ಪರ ಇರುವ ಸರಕಾರವಲ್ಲ. ಬಡವರ ರಕ್ತ ಹೀರುವ ಸರಕಾರ. ಜನ ಕೊರೋನಾ ಸಂಕಷ್ಟದಿಂದ ಸಾವು-ನೋವುಗಳಿಂದ ಆರ್ಥಿಕ ಸಮಸ್ಯೆಯಿಂದ ಸಾಯುತ್ತಿದ್ದಾರೆ. ಅಂತಹ ಸಂದರ್ಭದಲ್ಲಿ ಜನಸಾಮಾನ್ಯರ ಗಾಯದ ಮೇಲೆ ಬರೆ  ಎಳೆದಂತೆ ಪೆಟ್ರೋಲ್, ಡಿಸೇಲ್ ದರ ಈ ರೀತಿ ದಿನದಿಂದ ದಿನಕ್ಕೆ ಹೆಚ್ಚಿಸಿದರೆ ಬಡವರು ಬದುಕುವುದು ಹೇಗೆ ಎಂದು ಪ್ರಶ್ನಿಸಿದರು.? ಜನ ಬಿಜೆಪಿ ಆಡಳಿತಕ್ಕೆ ರೋಷಿ ಹೋಗಿದ್ದು ಮುಂದಿನ ದಿನಮಾನಗಳಲ್ಲಿ ಮೋದಿ ಹಠಾವೋ ದೇಶ ಬಚಾವೋ ಅತ್ತ ಹೆಜ್ಜೆ ಹಾಕುತ್ತಿದ್ದಾರೆ. ಇಂಥವರಿಗೆ ಮುಂದಿನ ದಿನಮಾನಗಳಲ್ಲಿ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದರು. 

ಜಿಲ್ಲಾ ಕಾಂಗ್ರಸ್  ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಮಾತನಾಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ್ ಬೆಲೆ ಕಡಿಮೆ ಇದ್ದರೂ  ಪೆಟ್ರೋಲ್, ಡಿಸೇಲ್, ದರ ಏರಿಕೆ ಮಾಡಿ ಬಡವರ ಬದುಕಿನ ಮೇಲೆ ಕೇಂದ್ರ ಸರಕಾರ ಬರೆ ಎಳೆದಿದೆ ಎಂದ ಅವರು ವಿದ್ಯೂತ್, ಗ್ಯಾಸ್, ಅಡುಗೆ ಎಣ್ಣೆ, ಮತ್ತು ಅಗತ್ಯ ವಸ್ತುಗಳ ದರ ಏರಿಕೆ ಮಾಡಿ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ ಎಂದು ಆರೋಪಿಸಿದರು. 

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ ಅಕಿವಾಟೆ ಮಾತನಾಡಿ ಲಾಕ್‌ಡೌನ್‌ನಿಂದ ಜನರು ಸಂಕಷ್ಟದ ಸ್ಥಿತಿ ಎದುರಿಸುತ್ತಿದ್ದಾರೆ. ಇಂಥಹ ಪರಿಸ್ಥಿತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ಹೆಚ್ಚಿನ ತೆರಿಗೆ  ವಿಧಿಸಿ ಜನವಿರೋಧಿ ನೀತಿಯನ್ನು ವಿಜಯಕುಮಾರ ಅಕಿವಾಟೆ ಖಂಡಿಸಿದರು. 

 ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರಸ್ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ ಅಕಿವಾಟೆ, ಚಂದ್ರಕಾಂತ ಇಮ್ಮಡಿ, ಮುಖಂಡರಾದ ಗಜಾನನ ಯರಂಡೋಲಿ, ಪುರಸಭೆ ಸದಸ್ಯ ಬಾಳಕೃಷ್ಣ ಪಾಟೀಲ, ಸತೀಶ ಯರಂಡೋಳಿ, ಕುಮಾರ ಬರಗಾಲೆ, ವಿಫುಲ ಪಾಟೀಲ, ಜ್ಯೋತಿಕುಮಾರ ಪಾಟೀಲ, ರಾಜು ಕುಸನಾಳೆ, ರಾಘವೇಂದ್ರ ಜಾಯಗೊಂಡೆ,  ಆಧಿನಾಥ ದಾನೊಳ್ಳಿ, ಸಂಜಯ ಭಿರಡಿ, ಗುರುರಾಜ ಮಡಿವಾಳರ ಸೇರಿದಂತೆ ಅನೇಕರು ಇದ್ದರು.  

ಸೈಕಲ್ ಏರಿ ಪ್ರತಿಭಟನೆ;- ರಾಜ್ಯ ಹಾಗೂ ಕೇಂದ್ರ ಸರಕಾರ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಮಾಜಿ ಸಚಿವ ವೀರಕುಮಾರ ಪಾಟೀಲ ಹಾಗೂ  ಜಿಲ್ಲಾ ಕಾಂಗ್ರಸ್ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಸೈಕಲ್ ಹತ್ತಿ ಕೇಂದ್ರ ಸರಕಾರದ ವಿರುದ್ದ ಪ್ರತಿಭಟನೆ ನಡೆಸಿದರು.  

ಸುದ್ದಿ ಓದಿ