ವೈದ್ಯ ವಿದ್ಯಾರ್ಥಿನಿ ಹತ್ಯೆ ಖಂಡಿಸಿ ಪ್ರತಿಭಟನೆ
ಹೂವಿನಹಡಗಲಿ 22: ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದಲ್ಲಿ ದಲಿತ ಯುವಕ ಈರ್ಪ ಬಂಡಿಹಾಳ್ ಇವರ ಕ್ಷೌರ ನಿರಾಕರಿಸಿ ಜಾತಿ ವಿರೋಧಿಸಿ ಮತ್ತು ಬಿಹಾರದ 14ವರ್ಷದ ದಲಿತ ಬಾಲಕಿ ಅಪಹರಣ ಮಾಡಿ ಅತ್ಯಾಚಾರ ಮಾಡಿ.ಬರ್ಬರ ಹತ್ಯೆ ಖಂಡಿಸಿ ಹಾಗೂ ಕೋಲ್ಕತ್ತಾ ವೈದ್ಯ ವಿದ್ಯಾರ್ಥಿನಿ ಹತ್ಯೆ ಮಾಡಿದವರಿಗೆ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ ತಾಲೂಕು ಮಂಡಳಿ ಹೂವಿನಹಡಗಲಿ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ.ಅಖಂಡ ಕರ್ನಾಟಕ ರಾಜ್ಯ ರೈತ ಸಂಘ ಎಐಟಿಯುಸಿ ಇತರೆ ಪ್ರಗತಿ ಪರ ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆಸಿ ತಹಶಿಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಹಾಗೂ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು ಸಂಘಟನೆಯ ರಾಜ್ಯ ಸಂಚಾಲಕ ಹಲಗಿ ಸುರೇಶ ಮಾತನಾಡಿ ದೇಶದಲ್ಲಿ ರಾಜ್ಯದಲ್ಲಿ ಅನಾದಿ ಕಾಲದಿಂದಲೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಜನಾಂಗಕ್ಕೆ ರಕ್ಷಣೆ ಇಲ್ಲದಂತಾಗಿದೆ ನಮಗೆ ಸ್ವಾತಂತ್ರ್ಯ ಸಿಕ್ಕು 78ವರ್ಷ ಕಳೆದರು ಇನ್ನೂ ದೇಶದಲ್ಲಿ ಬ್ರಿಟಿಷ್ ಆಡಳಿತನೆ ನಡೆಯುತ್ತಿದೆ ಏನೋ ಅನಿಸುತ್ತದೆ.?ಇನ್ನೂ ಯಾವಾಗ ದಲಿತ ಮಹಿಳೆಯರಿಗೆ ದಲಿತ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ಸಿಗೋದು.ಆದ್ದರಿಂದ ನಮ್ಮನ್ನಾಳುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇಂತಹ ಕದಿಮರಿಗೆ ಕಠಿಣಾ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.
ಸಂದರ್ಭದಲ್ಲಿ ಎಐವೈಎಪ್ ತಾಲೂಕು ಸಂಚಾಲಕ ಬಸವರಾಜ ಸಂಸಿ ಮಾತನಾಡಿರು. ಪ್ರತಿಭಟನೆಯಲ್ಲಿ.ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಮಹೆಬುಬು ಭಾಷಾ.ಇಟಗಿ ರಮೇಶ್.ಎಐಕೆಎಸ್.ಅಧ್ಯಕ್ಷ ಡಿ.ಮುಕುಂದಗೌಡ. ಅಖಂಡ ಕರ್ನಾಟಕ ರೈತ ಸಂಘದ ಅಧ್ಯಕ್ಷ ಹೋಸಮನಿ ಸಿದ್ದಪ್ಪ. ಹಡಗಲಿ ತಾಲೂಕು ದಲಿತ ಮುಖಂಡ ಆನಂದ. ಮೈಲಾರದ ಪ್ರಕಾಶ್.ಶಿವರಾಜ್.ಹೊಳಗುಂದಿ. ನಾಗರಾಜ್ ಕೋಟಿಹಾಳ್. ಇತರರು ಮಾತನಾಡಿದರು ಪ್ರತಿಭಟನೆಯಲ್ಲಿ ಡಿ.ಸುರೇಶ ಮಾಗಳ ಎಂ . ವಿನೋದ್.ಹಿರೇಹಡಗಲಿ.ಶಿವಪುತ್ರ ಹೋಸಳ್ಳಿ .ಹೆಚ್.ದಂಡೆಮ್ಮ.ಎಂಟಮನಿ ಭರಮಪ್ಪ.ಮರಿಸ್ವಾಮಿ.ಎಲ್.ಮುತ್ತು.ಕಾಳಿಂಗ. ನೂರಾರು ಸಾಮೂಹಿಕ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು ಮಾನ್ಯ ತಹಶೀಲ್ದಾರಾದ ಸಂತೋಷ ರವರಿಗೆ ಮನವಿ ಸಲ್ಲಿಸಲಾಯಿತು.