ಕಾಗವಾಡ

ಐಸಿಡಿಎಸ್ ಯೋಜನೆ ಅನುದಾನ ಕಡಿತ ವಿರೋಧಿಸಿ ಪ್ರತಿಭಟನೆ

ಐಸಿಡಿಎಸ್ ಯೋಜನೆ ಅನುದಾನ ಕಡಿತ ವಿರೋಧಿಸಿ ಪ್ರತಿಭಟನೆ
ಕಾಗವಾಡ ಉಪತಹಶೀಲ್ದಾರ ಎ.ಎಚ್.ತಗಾರೆ, ಅಣ್ಣಾಸಾಹೇಬ ಕೋರೆ ಇವರಿಗೆ ಸಿಐಟಿಯು ಕಾರ್ಯಕರ್ತೆಯರು ಮನವಿ ಅರ್ಪಿಸುತ್ತಿರುವಾಗ.

ಕಾಗವಾಡ ೦೩: ತಾಲೂಕಿನ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ, ಸಿಐಟಿಯು ತಾಲೂಕಾ ಘಟಕದಿಂದ ಕಾಗವಾಡ ತಹಶೀಲ್ದಾರರಿಗೆ ಐಸಿಡಿಎಸ್ ಯೋಜನೆಗೆ ಅನುದಾನ ಕಡಿತ ಮಾಡಿರುವ ಕುರಿತು ಪ್ರತಿಭಟಿಸಿ ಮನವಿ ಅರ್ಪಿಸಿದರು.

ಬುಧವಾರರಂದು ಕಾಗವಾಡ ತಹಶೀಲ್ದಾರ ಕಚೇರಿ ಎದುರು ಸಿಐಟಿಯು ನೌಕರ ಸಂಘದ ಕಾರ್ಯಕರ್ತೆಯ ಸವಿತಾ ಹಿರೇಮಠ ಇವರು ಮನವಿ ಅರ್ಪಿಸುತ್ತಿರುವಾಗ, ಕೇಂದ್ರ ಸರಕಾರ ಕೈಗೊಂಡ ನಿರ್ಣಯಗಳು ಅಂಗನವಾಡಿ ಕಾರ್ಯಕರ್ತೆಯರಿಗೆ ಅನೇಕ ತೊಂದರೆಗಳು ಆಗುತ್ತಿವೆ ಎಂದು ಆರೋಪಿಸಿದರು.

ಕಾರ್ಯಕರ್ತೆಯ ಸವಿತಾ ಹಿರೇಮಠ, ಸಾವಿತ್ರಿ ಕಾಂಬಳೆ, ವಂದನಾ ಕಾಂಬಳೆ, ಅರ್ಚನಾ ಢಾಲೆ, ಶಾಂತಾ ವಡ್ಡರ, ತಾರಾಬಾಯಿ ಪಾಟೀಲ, ಶಶಿಕಲಾ ಧಳವಾಯಿ, ಆಕಾಶಣಿ ಗುಂಜಾಳೆ ಸೇರಿದಂತೆ ಅನೇಕ ಕಾರ್ಯಕರ್ತೆಯರು ಪ್ರತಿಭಟಣೆಯಲ್ಲಿ ಪಾಲ್ಗೊಂಡಿದ್ದರು.

ಉಪತಹಸೀಲ್ದಾರ ಎ.ಎಚ್.ತಗಾರೆ ಇವರು ಮನವಿ ಸ್ವೀಕರಿಸಿದರು. ಈ ವೇಳೆ ಗ್ರೇಡ್-2 ತಹಶೀಲ್ದಾರ ಅಣ್ಣಾಸಾಹೇಬ ಕೋರೆ, ಬಸವರಾಜ ಬೋರಗಲ್ಲ, ಸೇರಿದಂತೆ ಅನೇಕರು ಇದ್ದರು.

ಸುದ್ದಿ ಓದಿ