ಇಂಡಿ

ಏ.18ರಂದು ಬಿಜೆಪಿ ಪಕ್ಷದ ವಿರುದ್ಧ ಪ್ರತಿಭಟನೆ

ಏ.18ರಂದು ಬಿಜೆಪಿ ಪಕ್ಷದ ವಿರುದ್ಧ ಪ್ರತಿಭಟನೆ


ಇಂಡಿ: ತಳವಾರ ಪರಿವಾರ ಸಮುದಾಯಕ್ಕೆ ಪರಿಶಿಷ್ಠ ಜಾತಿ ಪ್ರಮಾಣಪತ್ರ ನೀಡುವಂತೆ ಆಗ್ರಹಿಸಿ ಏ. 18 ಸೋಮವಾರರಂದು ಸಿಂದಗಿ ಪಟ್ಟಣದಲ್ಲಿ ಬಿಜೆಪಿ ಪಕ್ಷದ ವಿರುದ್ಧ ನಡೆಯುವ ಪ್ರತಿಭಟನೆಯಲ್ಲಿ ಇಂಡಿ ತಾಲ್ಲೂಕಿನಿಂದ 5 ಸಾವಿರ ಜನ ಸಮಾಜ ಬಾಂಧವರು ಭಾಗಿಯಾಗಿ ಹೋರಾಟಕ್ಕೆ ಬೆಂಬಲಿಸುತ್ತಿದ್ದೇವೆ ಎಂದು ತಳವಾರ ಸಮಾಜದ ಮುಖಂಡರಾದ ಧರ್ಮರಾಜ ವಾಲೀಕಾರ, ಭೀಮಣ್ಣ ಕವಲಗಿ ಹುಚ್ಚಪ್ಪ ತಳವಾರ ಹೇಳಿದರು. 

ಅವರು ಶುಕ್ರವಾರ ನಿಜಶರಣ ಅಂಬಿಗರ ಚೌಡಯ್ಯನವರ ಸಭಾಭವನದಲ್ಲಿ ಹಮ್ಮಿಕೊಂಡ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. 

ಸಿಂದಗಿ ಮತಕ್ಷೇತ್ರದಲ್ಲಿ ನಡೆದ ಉಪಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿಗಳನ್ನೊಳಗೊಂಡ ಹಲವು ಸಚಿವರು ತಳವಾರ, ಪರಿವಾರ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ನೀಡುವುದಾಗಿ ಘೋಷಿಸಿದ್ದರು, ಆದರೆ ಇದುವರೆಗೂ ನಮ್ಮ ಸಮುದಾಯದವರಿಗೆ ಜಾತಿ ಪ್ರಮಾಣ ಪತ್ರ ಸಿಗುತ್ತಿಲ್ಲ. ಅಧಿಕಾರಿಗಳು ನಮಗೆ ಸ್ಪಷ್ಠತೆ ನೀಡುತ್ತಿಲ್ಲ. ಕೇಂದ್ರ ಸರಕಾರ ನಮ್ಮ ಸಮುದಾಯಕ್ಕೆ ಪ.ಜಾ. ಪ್ರಮಾಣ ಪತ್ರ ನೀಡುವಂತೆ ಆದೇಶ ಹೊರಡಿಸಿದರೂ ರಾಜ್ಯ ಸರಕಾರ ಹಾಗೂ ಅಧಿಕಾರಿಗಳು ಪ್ರಮಾಣ ಪತ್ರ ನೀಡದೆ ನಮ್ಮ ಸಮಾಜಕ್ಕೆ ಅನ್ಯಾಯ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಕುಂಬಾರ ಸಮಾಜದ ಅಧ್ಯಕ್ಷ ಸತೀಶ ಕುಂಬಾರ, ಡಿಎಸ್‌ಎಸ್ ಸಂಚಾಲಕ ಶಿವಾನಂದ ಮೂರಮನ್, ಮರಾಠಾ ಸಮಾಜದ ಮುಖಂಡ ಆನಂದ ಪವಾರ್ ಅವರು ತಳವಾರ ಸಮುದಾಯಕ್ಕೆ ತಮ್ಮ ಬೆಂಬಲ ಘೋಷಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ಎಸ್‌.ಜೆ. ವಾಲೀಕಾರ, ಸುನೀಲ ಕೋಳಿ, ಭೀಮ ತಳವಾರ, ಎಸ್‌.ಎಂ. ಕೊಳಿ, ಕಾಂತು ಲಿಂಗದಳ್ಳಿ, ಪ್ರವೀಣ ಕೋರಳ್ಳಿ ಮತ್ತಿತರರು ಇದ್ದರು. 


ಸುದ್ದಿ ಓದಿ