ಕಾಗವಾಡ

ಪಂಚಮಸಾಲಿ ಸಮಾಜ 2ಎ ಪ್ರವರ್ಗಕ್ಕೆ ಸೇರಿಸುವಂತೆ ಆಗ್ರಹಿಸಿ ಸರಕಾರಕ್ಕೆ ಮನವಿ

ಪಂಚಮಸಾಲಿ ಸಮಾಜ 2ಎ ಪ್ರವರ್ಗಕ್ಕೆ ಸೇರಿಸುವಂತೆ ಆಗ್ರಹಿಸಿ ಸರಕಾರಕ್ಕೆ ಮನವಿ
ಕಾಗವಾಡ ಉಪತಹಶೀಲ್ದಾರ ಅಣ್ಣಾಸಾಹೇಬ ಕೋರೆ ಇವರಿಗೆ ತಾಲೂಕಾ ಮಟ್ಟದ ವೀರಶೈವ ಪಂಚಮಸಾಲಿ ಸಮಾಜ ಸೇವಾ ಸಂಘದ ಸಂಚಾಲಕ ಪ್ರಕಾಶ

ಕಾಗವಾಡ 03: ತಾಲೂಕಿನ ಪಂಚಮಸಾಲಿ ಲಿಂಗಾಯತ ಸಮಾಜದ ವತಿಯಿಂದ ರಾಜ್ಯ ಸರಕಾರಕ್ಕೆ ಹಿಂದೂಳಿದ ವರ್ಗಗಳ ಪಟ್ಟಿಯ ಪ್ರವರ್ಗ-2 ಎ ದಲ್ಲಿ ಹಾಗೂ ಕೇಂದ್ರ ಸರಕಾರದಲ್ಲಿ ಓಬಿಸಿಗೆ ಸೇರ್ಪಡೆಗೊಳಿಸಲು ಸರಕಾರಕ್ಕೆ ಸೂಕ್ತ ನಿರ್ದೇಶನೆ ನೀಡುವಂತೆ ಸಮಾಜದ ಮುಖಂಡರಿಂದ ಮನವಿ ಅರ್ಪಿಸಲಾಯಿತು.

ಕರ್ನಾಟಕ ರಾಜ್ಯದಲ್ಲಿ ಕೃಷಿಯನ್ನು ಕುಲ-ಕಸಬ ಮಾಡುತ್ತಿರುವ ಸಮಾಜ ಹಾಗೂ ಕೃಷಿ ಕೂಲಿಗಾರರಾಗಿ ಲಿಂಗಾಯತ ಸಮಾಜ ಅವಲಂಬಿತವಿದೆ. ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ ಕ್ಷೇತ್ರದಲ್ಲಿ ಅಂಶತ ಹಿಂದೂಳಿದ ಸಮಾಜವಾಗಿದೆ. ಈ ಬಗ್ಗೆ 20 ವರ್ಷಗಳಿಂದ ಸರಕಾರಕ್ಕೆ ಮನವಿ ಮಾಡುತ್ತಾ ಬಂದಿದ್ದರೂ ಸಹ ಯಾವುದೇ ಸರಕಾರಗಳು ಸೂಕ್ತವಾಗಿ ಸ್ಪಂದಿಸಿಲ್ಲಾ. ಆದ್ದರಿಂದ ನಮ್ಮ ಸಮಾಜ ಕುಡಲಸಂಗಮ ಪಂಚಮಸಾಲಿ ಜಗದ್ಗುರು ಮಹಾಪೀಠದ ಪ್ರಥಮ ಜಗದ್ಗುರು ಚೆನ್ನಬಸವಂಜಯ್ಯಮೃತ್ಯುಂಜಯ ಸ್ವಾಮೀಜಿ ಇವರು ಸಮಾಜದ ವತಿಯಿಂದ 2012 ರಿಂದ 4 ಹಂತದ ವಿವಿಧ ಹೋರಾಟಗಳನ್ನು ಮಾಡುತ್ತಾ ಬಂದಿದ್ದಾರೆ. ಈ ವರ್ಷದ ಜನೇವರಿ 14 ರಿಂದ ಕುಡಲಸಂಗಮದಿಂದ ಬೆಂಗಳೂರು ವರೆಗೆ 712 ಕಿ.ಮೀ ಅಂತರ ವರೆಗೆ ಕಾಲುನಡುಗೆ ಮುಖಾಂತರ ಬಂದು ನಿರಂತರವಾಗಿ ಪ್ರತಿಭಟಣೆ ಕೈಗೊಂಡಿದ್ದಾರೆ. ಸರಕಾರ ಸೂಕ್ತ ನಿರ್ಣಯ ಕೈಗೊಳ್ಳದೆಯಿದ್ದರೆ ಉಗ್ರವಾಗಿ ಪ್ರತಿಭಟಣೆ ಕೈಗೊಳ್ಳುವದಾಗಿ ಸಮಾಜದ ಮುಖಂಡರು ತಹಶೀಲ್ದಾರ ಮುಖಾಂತರ ಮನವಿ ಅರ್ಪಿಸಿ ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಮನವಿ ಅರ್ಪಿಸುವಾಗ ಕಾಗವಾಡ ತಾಲೂಕಾ ವೀರಶೈವ್ ಪಂಚಮಸಾಲಿ ಸಮಾಜ ಸೇವಾ ಸಂಘದ ಸಂಚಾಲಕರಾದ ಪ್ರಕಾಶ ಬಾಬಾಗೌಡ ಪಾಟೀಲ ಇವರ ನೇತೃತ್ವದಲ್ಲಿ ಉಪತಹಶೀಲ್ದಾರ ಅಣ್ಣಾಸಾಹೇಬ ಕೋರೆ ಇವರಿಗೆ ಮನವಿ ಅರ್ಪಿಸಿದರು.

ಈ ವೇಳೆ ಕೆ.ಎಲ್.ಇ ಪದವಿಪೂರ್ವ ಮಹಾವಿದ್ಯಾಲಯ, ಶಿರಗುಪ್ಪಿಯ ಪ್ರಾಚಾರ್ಯ ಅಶೋಕ ಪಾಟೀಲ ಮನವಿ ಓದಿ ಹೇಳಿದರು. ಅವರೊಂದಿಗೆ ಸಮಾಜದ ಮುಖಂಡರಾದ ಜ್ಯೋತಿಕುಮಾರ ಪಾಟೀಲ, ಚೇತನ ಪಾಟೀಲ, ವಿನಾಯಕ ಚೌಗುಲೆ, ಚಿದಾನಂದ ಅವಟಿ, ಸಚಿನ ಚೌಗುಲೆ, ಸೇರಿದಂತೆ ಅನೇಕ ಯುವಕರು ಪಾಲ್ಗೊಂಡಿದ್ದರು.

ಸುದ್ದಿ ಓದಿ