ಜಮಖಂಡಿ

ಸನಾತನ ಧರ್ಮ ರಕ್ಷಣೆ ನಮ್ಮೆಲ್ಲರ ಹೊಣೆ: ಜೋಶಿ

ಸನಾತನ ಧರ್ಮ ರಕ್ಷಣೆ ನಮ್ಮೆಲ್ಲರ ಹೊಣೆ: ಜೋಶಿ

ಜಮಖಂಡಿ 14: ಸನಾತನ ಧರ್ಮ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು, ಈ ನಿಟ್ಟಿನಲ್ಲಿ ಧರ್ಮ ರಕ್ಷಣ ಯುವ ಸೇನೆ ದಾಪುಗಾಲು ಹಾಕುತ್ತಿರುವುದು ಹೆಮ್ಮೆಯ ಸಂಗತಿ. ಧರ್ಮೋ ರಕ್ಷತಿ ರಕ್ಷಿತಃ ಎಂಬ ಗೀತಾ ವಾಕ್ಯವನ್ನು ನಾವೆಲ್ಲರೂ ಜೀವನದಲ್ಲಿ ಪಾಲಿಸಿಕೊಂಡು ನಡೆದರೆ ಯಶಸ್ಸು ಕಟ್ಟಿಟ್ಟಬುತ್ತಿ ಎಂದು ಪಂಡಿತ ರಂಗಾಚಾರ್ಯ ಜೋಶಿ ಹೇಳಿದರು.  

ನಗರದ ಸಾಬಡೆಗಲ್ಲಿಯ ಶ್ರೀ ಗಣಪತಿ ಮಂಗಲ ಕಾರ್ಯಾಲಯದಲ್ಲಿ ಶ್ರೀ ಧರ್ಮ ರಕ್ಷಣ ಯುವ ಸೇನೆ ವತಿಯಿಂದ 100 ನೇ ಶ್ರೀಹರಿವಾಯುಸ್ತುತಿ ಪುರಶ್ಚರಣ ಹಾಗೂ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ನಮ್ಮ ದೇಶ, ಸಮಾಜ ಸಂಪತ್ಭರಿತವಾಗಿ ಮುಂದುವರೆಯಬೇಕಾದರೆ ಧರ್ಮದ ರಕ್ಷಣೆ ಬೇಕೆಬೇಕು. ಶ್ರೀ ಧರ್ಮ ರಕ್ಷಣ ಯುವ ಸೇನೆಯು ಉತ್ತರೋತ್ತರ ಅಭಿ ವೃದ್ಧಿಯಾಗಿ ಶ್ರೀಹರಿವಾಯುಸ್ತುತಿ ಪುರಶ್ಚರಣ ನಿರಂತರವಾಗಿ ಮುಂದುವರೆಯಲಿ ಎಂದು ಶುಭ ಹಾರೈಸಿದರು. 

ಬೆಳಗಾವಿ ಜಿಲ್ಲೆ ಅಧಣಿ ತಾಲೂಕಿನ ಐನಾಪೂರದ ಪಂಡಿತ ಶ್ರೀನಿವಾಸಾಚಾರ್ಯ ಉಮರ್ಜಿ ಮಾತನಾಡಿ, ಶ್ರೀಹರಿವಾಯುಸ್ತುತಿ ಸ್ತೋತ್ರದಲ್ಲಿ ಅಘಾದವಾದ ಶಕ್ತಿ ಅಡಗಿದೆ. ಇದನ್ನು ಎಲ್ಲರೂ ನಿತ್ಯ ಪಠಿಸಿ ಜೀವನವನ್ನು ಪಾವನಗೊಳಿಸಿಕೊಳ್ಳಿರಿ. ಶ್ರೀಧರ್ಮ ರಕ್ಷಣ ಯುವ ಸೇನೆ ಕಳೆದ 2 ವರ್ಷಗಳಿಂದ ಜಮಖಂಡಿ ಸುತ್ತಮುತ್ತಲಿನ ದೇವಸ್ಥಾನ, ಮಠಗಳು ಅಲ್ಲದೇ ಮನೆಗಳಲ್ಲಿ ಶ್ರೀಹರಿವಾಯುಸ್ತುತಿ ಪುರಶ್ಚರಣ ಕಾರ್ಯಕ್ರಮ ನೆರವೇರಿಸಿ, ಈಗ 100 ನೇ ಶ್ರೀ ಹರಿವಾಯುಸ್ತುತಿ ಪುರಶ್ಚರಣ ಕಾರ್ಯಕ್ರಮ ಹಮ್ಮಿಕೊಂಡಿದ್ದು ಶ್ಲಾಘನೀಯ ಎಂದರು. 

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯ ನೀತೀನ ಹುಲ್ಯಾಳಕರ, ಪ್ರೊ.ಪ್ರವೀಣ ಕುಲಕರ್ಣಿ ಅತಿಥಿಗಳಾಗಿದ್ದರು.  

ಇದೇ ಸಂದರ್ಭದಲ್ಲಿ 2023ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 80ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರಗ ಳಲ್ಲಿ ಗಣನೀಯ ಸೇವೆ ಸಲ್ಲಿಸಿದ ವಿಪ್ರ ಸಮಾಜದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ವೇಂಕಣ್ಣಾಚಾರ್ಯ ಅಧ್ಯಾಪಕ ವೇದಘೋಷ ನೆರವೇರಿಸಿದರು. ಶುಭಶ್ರೀ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಅವಿನಾಶ ಪಂಢರಿ ಸ್ವಾಗತಿಸಿದರು. ಅನಿರುದ್ಧಾಚಾರ್ಯ ಮೈಗೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಣೇಶ ದೇಸಾಯಿ ವಂದಿಸಿದರು. ರಾಜೇಂದ್ರ ಹುಲ್ಯಾಳಕರ ನಿರೂಪಿಸಿದರು. 


ಸುದ್ದಿ ಓದಿ