ಶ್ರೀ ಭಕ್ತ ಕುಂಬಾರ ಪತ್ತಿನ ಸಂಘಕ್ಕೆ ಲಾಭ
ಶೇಡಬಾಳ 21: ಸಮೀಪದ ಶ್ರೀ ಭಕ್ತ ಕುಂಬಾರ ಪಟ್ಟಣ ಪತ್ತಿನ ಸಹಕಾರಿ ಸಂಘವು ಪ್ರಸಕ್ತ ಸಾಲಿನಲ್ಲಿ 27 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷರಾದ ಸುಭಾಷ ಗುಂಡು ಕುಂಬಾರ ಹೇಳಿದರು.
ಅವರು ಉಗಾರ ಖುರ್ದ ಪಟ್ಟಣದ ಮಹಾದೇವ ಮಂದಿರದಲ್ಲಿ ಜರುಗಿದ 20 ನೇ ವಾರ್ಷಿಕ ಸರ್ವ ಸಾಧಾರಣ ಸಭೆಯನ್ನುದ್ದೇಶಿಸಿ ಮಾತನಾಡಿದರು. 2020-21 ನೇ ಸಾಲಿನಲ್ಲಿ 1423 ಸದಸ್ಯರನ್ನು ಹೊಂದಿರುವ ಸಂಸ್ಥೆಯು 22 ಲಕ್ಷ 18 ಸಾವಿರ ರೂ. ಶೇರು ಬಂಡವಾಳ ಹೊಂದಿದೆ. ಇದುವರೆಗೆ 8 ಕೋಟಿ 49 ಲಕ್ಷ ರೂ. ಠೇವು ಸಂಗ್ರಹಿಸಿದ್ದು ಸುಮಾರು 7 ಕೋಟಿ 58 ಲಕ್ಷ ರೂ. ಸಾಲ ವಿತರಿಸಲಾಗಿದೆ. ಸಂಸ್ಥೆಯ ಒಟ್ಟು ದುಡಿಯುವ ಬಂಡವಾಳ 10 ಕೋಟಿ 5 ಲಕ್ಷ ರೂ. ಆಗಿದೆ. ಆಡಳಿತ ಮಂಡಳಿ ಸದಸ್ಯರಾದ ಗುರುರಾಜ ಬಸಪ್ಪ ಕುಂಬಾರ ಇವರು ಸಂಘದ ಏಳಿಗೆಗಾಗಿ ಸದಸ್ಯರು ಸರಿಯಾದ ಸಮಯದಲ್ಲಿ ಸಾಲ ಮರುಪಾವತಿ ಮಾಡಿ ಸಂಘದ ಅಭಿವೃದ್ಧಿಗೆ ಸಹಕರಿಸುತ್ತಿರುವುದು ಅಭಿನಂದನೀಯ. ಅವರ ಸಹಾಯ ಸಹಕಾರ ಪ್ರೋತ್ಸಾಹ ಇದೆ ರೀತಿ ಇರಲಿ ಎಂದು ಹೇಳಿದರು. ಸಂಘದ ಪ್ರಧಾನ ಕಾರ್ಯದರ್ಶಿ ಸುಜಾತಾ ಅಣ್ಣಪ್ಪ ಕುಂಬಾರ ಹಿಂದಿನ ಸರ್ವ ಸಾಧಾರಣ ಸಭೆಯ ನಡುವಳಿಕೆಗಳನ್ನು ಓದಿದರು.
ಈ ಸಮಯದಲ್ಲಿ ಸಂಸ್ಥೆಯ ಅಧ್ಯಕ್ಷ ಸುಭಾಷ ಕುಂಬಾರ, ಉಪಾಧ್ಯಕ್ಷ ರಾಮಪ್ಪ ಕುಂಬಾರ, ಆಡಳಿತ ಮಂಡಳಿಯ ಸದಸ್ಯರುಗಳಾದ ಅಪ್ಪಾಸಾಹೇಬ ಕುಂಬಾರ, ಬಾಳಪ್ಪ ಕುಂಬಾರ, ನಿಂಗಪ್ಪ ಕುಂಬಾರ, ಅರುಣ ಕುಂಬಾರ, ಬಸಪ್ಪ ಕುಂಬಾರ, ಶಿವಾನಂದ ಕುಂಬಾರ, ಸುನೀತಾ ಕುಂಬಾರ, ಸನ್ಮತಿ ಕುಂಬಾರ, ಸುನೀತಾ ನಾಯಿಕ, ಶಂಕರ ನಡೋಣಿ ಹಾಗೂ ಸ್ಥಾನಿಕ ಕಮಿಟಿಯ ಸದಸ್ಯರು, ಅಥಣಿಯ ಗುರುಪಾದ ಕುಂಬಾರ, ಶಂಕರ ಕುಂಬಾರ, ಚನ್ನಪ್ಪ ಕುಂಬಾರ, ಈರ್ಪ ಕುಂಬಾರ, ಶಾಂತವ್ವ ಕುಂಬಾರ, ಅಣ್ಣಾಸಾಹೇಬ ಕುಂಬಾರ, ಬಸವರಾಜ ಕೌಜಲಗಿ, ಶಂಕರ ಕುಂಬಾರ, ಸದಾಶಿವ ಕುಂಬಾರ, ರವೀಂದ್ರ ಕುಂಬಾರ ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.