ಕಾಳು ಮಸಾಲೆ ಬೆಳೆಗಳ ಉತ್ಪಾದನಾ ತಾಂತ್ರಿಕತೆ ತರಬೇತಿ
ಇಂಡಿ: ಅಜೈವನ್ ಅಪಿಯಾಸಿ ಕುಟುಂಬ ವರ್ಗಕ್ಕೆ ಸೇರಿದ್ದು ಇದು ಒಂದು ಪ್ರಮುಖ ಕಾಳು ಮಸಾಲೆ ಬೆಳೆಯಾಗಿದೆ. ಉತ್ತರ ಪ್ರದೇಶ, ತಮಿಳನಾಡು ಮತ್ತು ಕರ್ನಾಟಕದಲ್ಲಿ ಬೆಳೆಯಲಾಗುತ್ತಿದೆ ಎಂದು ವಿಜಯಪುರ ಕೃ.ವಿ.ಶಿ.ಕೇ ವಿಸ್ತರಣಾ ನಿರ್ದೇಶಕ ಡಾ. ಆರ್.ಬಿ. ಬೆಳ್ಳಿ ಹೇಳಿದರು.
ಶನಿವಾರ ತಾಲೂಕಿನ ಅಥರ್ಗಾ ಗ್ರಾಮದ ಕುಲಾಂಕರೇಶ್ವರ ದೇವಾಲಯದ ಹತ್ತಿರ ಕೃಷಿ ವಿಜ್ಞಾನ ಕೇಂದ್ರ, ಇಂಡಿ ಹಾಗೂ ಎಂ.ಐ.ಡಿ.ಹೆಚ್ ಯೋಜನೆ ಅಡಿಯಲ್ಲಿ ಅಜೈವನ್ ಮತ್ತು ಕಾಳು ಮಸಾಲೆ ಬೆಳೆಗಳ ಉತ್ಪಾದನಾ ತಾಂತ್ರಿಕತೆ ತರಬೇತಿ ಕಾರ‌್ಯಕ್ರಮದಲ್ಲಿ ಮಾತನಾಡಿದರು.
ಇಂಡಿ ತಾಲೂಕಿನಾಧ್ಯಂತ ಒಣ ಬೇಸಾಯದಲ್ಲಿ ಅಜವೈನ್ ಬೆಳೆ ಬೆಳೆಯಲು ರೈತರು ಆಸಕ್ತಿ ವಹಿಸುತ್ತಿದ್ದಾರೆ. ಆದರೆ ಕ್ರಮೇಣವಾಗಿ ಬೆಳೆ ವಿಸ್ತ್ರೀಣ ಹೆಚ್ಚಾಗುತ್ತಿದೆ. ಇಂಡಿ ತಾಲೂಕಿನ ಖೇಡಗಿ, ರೋಡಗಿ, ಲಾಳಸಂಗಿ, ನಾದ ಕೆ.ಡಿ, ಸಾಲೋಟಗಿ, ಅಥರ್ಗಾ ಗ್ರಾಮಗಳಲ್ಲಿ ಈ ಬೆಳೆಯನ್ನು ಬೆಳೆಯಲಾಗುತ್ತಿದೆ. ರೈತರು ಈ ಬೆಳೆಯ ಕಡೆ ಮುಖ ಮಾಡಿದ್ದಾರೆ. ಆದರೆ ರೈತರಿಗೆ ಈ ಬೆಳೆಯ ಕುರಿತು ಸಮಗ್ರ ಮಾಹಿತಿ ಕೊರತೆಯಿದೆ. ಮುಖ್ಯವಾಗಿ ರೈತರಿಗೆ ಬೆಳೆಗಳ ತಳಿ ಆಯ್ಕೆ, ಬೀಜ, ಬಿತ್ತನೆ ಕಾಲ, ಬಿತ್ತನೆ ಆಳ, ಅಂತರ, ಸಂಸ್ಕರಣೆ ಹಾಗೂ ಮಾರುಕಟ್ಟೆ ಕೊರತೆ ಇದೆ. ಹಾಗಾಗಿ ಇಂದು ತರಬೇತಿ ಆಯೋಜಿಸಿದ್ದು ಒಳ್ಳೆಯದು ಎಂದರು.
ಕೃಷಿ ವಿಜ್ಞಾನ ಕೇಂದ್ರ, ಇಂಡಿಯ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾ. ಪ್ರೇಮಾ ಬಿ. ಪಾಟೀಲ ಮಾತನಾಡಿ, ಅಜವೈನ್ ಬೆಳೆಯು ಅತಿ ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ಕೊಡುವ ಬೆಳೆ. ಈ ಬೆಳೆಯು ನಮ್ಮ ಭಾಗದ ಒಣ ಬೇಸಾಯ ಮಾಡುವ ರೈತರಿಗೆ ಅತಿ ಸೂಕ್ತವಾಗಿದೆ ಎಂದು ಹೇಳಿದರು.
ಡಾ. ಹೀನಾ ಎಂ.ಎಸ್. ವಿಜ್ಞಾನಿ (ತೋಟಗಾರಿಕೆ) ಮಾತನಾಡಿ, ಅಜೈವನ್ ಮತ್ತು ಕಾಳು ಮಸಾಲೆ ಬೆಳೆಗಳಲ್ಲಿ ಕೀಟ ಮತ್ತು ರೋಗ ನಿರ್ವಹಣೆ ಕುರಿತು ರೈತರಿಗೆ ತಿಳಿಸಿದರು.
ಡಾ. ಸವಿತಾ ಬಿ ವಿಜ್ಞಾನಿ (ಮಣ್ಣು ವಿಜ್ಞಾನ) ಮಾತನಾಡಿ, ಅಜೈವನ್ ಮತ್ತು ಕಾಳು ಮಸಾಲೆ ಬೆಳೆಗಳಲ್ಲಿ ಮಣ್ಣು ಮತ್ತು ನೀರು ಪರೀಕ್ಷೆಯ ಮಹತ್ವದ ಕುರಿತು ತಿಳಿಸಿದರು.
ಸಿದ್ದಪ್ಪ ಶಿವಲಿಂಗಪ್ಪ ಭೂಸಗೊಂಡ ಪ್ರಗತಿಪರ ರೈತರ (ಅಜವೈನ ಬೆಳೆಗಾರರು) ಅಜವೈನ್ ಬೆಳೆಯ ಉತ್ಪಾದನೆ ಹಾಗೂ ಮಾರುಕಟ್ಟೆ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು. ಇದೇ ಸಂದರ್ಭದಲ್ಲಿ ರೈತರಿಗೆ ವಿವಿಧ ತಾಂತ್ರಿಕತೆಗಳ ಕುರಿತು ವಸ್ತು ಪ್ರದರ್ಶನ ಆಯೋಜನೆ ಮಾಡಲಾಗಿತ್ತು.
ಕಾರ‌್ಯಕ್ರಮದಲ್ಲಿ ಗ್ರಾ. ಪಂ ಅಧ್ಯಕ್ಷೆ ಸುವರ್ಣ ಕುಲಪ್ಪ ಸೂಲಿ, ನಾಗರಾಜಗೌಡ ಪಾಟೀಲ್, ಅಶೋಕಗೌಡ ಬಿರಾದಾರ, ಎಸ್. ಕೆ.ಲೊಣಿ, ಎಸ್.ಟಿ. ಪಾಟೀಲ್, ಡಾ. ಎ.ಎಸ್. ಬಗಲಿ, ಕೃಷಿ ವಿಜ್ಞಾನ ಕೇಂದ್ರದ ಅರ್ಜುನ ಆರ್. ಎಸ್. ವಿಜ್ಞಾನಿ (ಸಸ್ಯ ಸಂರಕ್ಷಣೆ) ಇದ್ದರು.
ಕಾರ‌್ಯಕ್ರಮದಲ್ಲಿ ಸುಮಾರು 100 ಕ್ಕೂ ಹೆಚ್ಚು ರೈತರು ಪಾಲ್ಗೊಂಡಿದರು,
ಶಿಲ್ಪಾರಾಣಿ ಸಹಾಯಕ ಲೆಕ್ಕಿಗರು ಕೃಷಿ ವಿಜ್ಞಾನ ಕೇಂದ್ರ, ಇಂಡಿ ಇವರು ನಿರೂಪಿಸಿ ವಂದಿಸಿದರು.