ಮನರಂಜನೆ

ನಿರ್ಮಾಪಕ ಎಸ್‍‍ ಕೆ ಕೃಷ್ಣಕಾಂತ್ ವಿಧಿವಶ

ನಿರ್ಮಾಪಕ ಎಸ್‍‍ ಕೆ ಕೃಷ್ಣಕಾಂತ್ ವಿಧಿವಶ

ಚೆನ್ನೈ, ಅಕ್ಟೋಬರ್ 01: ತಮಿಳು ಸಿನಿರಂಗದ ಖ್ಯಾತ ನಿರ್ಮಾಪಕ ಎಸ್‍ ಕೆ ಕೃಷ್ಣಕಾಂತ್ ನಿಧನರಾಗಿದ್ದಾರೆ.  ಅವರಿಗೆ 52 ವರ್ಷ ವಯಸ್ಸಾಗಿತ್ತು.

ಹೃದಯಾಘಾತದಿಂದಾಗಿ ಸೆಪ್ಟೆಂಬರ್ 30 ರಾತ್ರಿ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. 

ಧನುಶ್, ಸೂರ್ಯಾ, ಚಿಯಾನ್ ವಿಕ್ರಂ, ಸಿಂಭು  ಸೇರಿದಂತೆ ಹಲವು ಖ್ಯಾತ ನಟರುಗಳ ಸಿನಿಮಾಗಳನ್ನು ನಿರ್ಮಿಸಿದ್ದ ಎಸ್‌ಕೆ ಕೃಷ್ಣಕಾಂತ್ ಅವರ ಹಠಾತ್ ನಿಧನಕ್ಕೆ ತಮಿಳು ಚಿತ್ರರಂಗ ಸಂತಾಪ ವ್ಯಕ್ತಪಡಿಸಿದೆ.

ಧನುಶ್ ನಟಿಸಿದ್ದ ತಿರುಡಾ-ತಿರುಡಿ, ಚಿಯಾನ್ ವಿಕ್ರಂ ನಟನೆಯ 'ಕಿಂಗ್', ಸಿಂಭು ನಟನೆಯ 'ಮನ್ಮಥನ್' ಸೇರಿದಮತೆ ಇನ್ನೂ ಹಲವು ಸಿನಿಮಾಗಳನ್ನು ಎಸ್‌ಕೆ ಕೃಷ್ಣಕಾಂತ್ ನಿರ್ಮಾಣ ಮಾಡಿದ್ದರು.

ಕೆಲವು ವಾರಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆಚಿಕಿತ್ಸೆ ಫಲಕಾರಿಯಾಗದೆ ಬುಧವಾರ ರಾತ್ರಿ ಅವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

ಸುದ್ದಿ ಓದಿ