ಗುಳೇಗುಡ್ಡ

ಪಡೆಮ್ಮದೇವಿ ಮೂರ್ತಿ ಮೆರವಣಿಗೆ

ಪಡೆಮ್ಮದೇವಿ ಮೂರ್ತಿ ಮೆರವಣಿಗೆ
-ಗುಳೇದಗುಡ್ಡ ತಿಪ್ಪಾ ಪೇಟೆಯ ಪಡೆಮ್ಮದೇವಿ ಮೂರ್ತಿ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು.

ಗುಳೇದಗುಡ್ಡ,ಆ.20:   ಪಟ್ಟಣದ ತಿಪ್ಪಾ ಪೇಟೆಯಲ್ಲಿನ ಪಡೆಮ್ಮದೇವಿ ದೇವಸ್ಥಾನದಲ್ಲಿ  ನೂತನ ಪಡೆಮ್ಮದೇವಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಜರುಗಿತು. 

ಪಡೆಮ್ಮದೇವಿ ಮೂರ್ತಿ ಪ್ರತಿಷ್ಠಾಪನೆಯ ಅಂಗವಾಗಿ ಕಮತಗಿ ಗ್ರಾಮದಿಂದ ತಂದಿರುವ ಪಡೆಮ್ಮದೇವಿ ಮೂರ್ತಿಯನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ವೈಭವದಿಂದ ಮೆರವಣಿಗೆ ಮಾಡಲಾಯಿತು. ಪಟ್ಟಣದ ಅರಳಿಕಟ್ಟೆಯಿಂದ ನಡೆದ ಮೆರವಣಿಗೆ ಚೌಬಜಾರ ಮೂಲಕ ಪಡೆಮ್ಮದೇವಿ ದೇವಸ್ಥಾನ ತಲುಪಿತು. 

ಪಡೆಮ್ಮದೇವಿ ಮೂರ್ತಿ ಮೆರವಣಿಗೆಯಲ್ಲಿ ಸುಮಂಗಲೆಯರ ಕುಂಭಮೇಳ ಹಾಗೂ ಕರಡಿ ಮಜಲು ವಾದ್ಯಮೇಳ ಮೆರವಣಿಗೆಗೆ ವಿಶೇಷ ಕಳೆ ತಂದಿತು. ದೇವಸ್ಥಾನಕ್ಕೆ ಆಗಮಿಸಿದ ಬಳಿಕ ಪಡೆಮ್ಮದೇವಿ ಮೂರ್ತಿಗೆ ವಿಶೇಷ ಪೂಜೆ-ಪುನಸ್ಕಾರ ಹಾಗೂ ಅಭಿಷೇಕ ನೆರವೇರಿಸಲಾಯಿತು. ನಂತರ ಅನ್ನ ಸಂತರೆ​‍್ಣ  ನಡೆಯಿತು. 

ಮೆರವಣಿಗೆ ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯ ಉಮೇಶ ಹುನಗುಂದ, ತಿಪ್ಪಾಪೇಟೆಯ ಹಿರಿಯರಾದ ಚನ್ನಪ್ಪ ಚಿಂದಿ, ಅಶೋಕ ರೋಜಿ, ಮಹಾಗುಂಡಪ್ಪ ಚಿಂದಿ, ಮಲ್ಲಪ್ಪ ಅರುಟಗಿ, ಸಂಗನಬಸಪ್ಪ ಮಾಮಣ್ಣಿ, ಶೇಖಣ್ಣ ಅರುಟಗಿ, ಸಂಗಪ್ಪ ಹುನಗುಂದ, ರವಿ ರೋಜಿ, ಸಂತೋಷ ತಿಪ್ಪಾ, ಹುಚ್ಚಪ್ಪ ಸಿಂದಗಿ, ವಿರುಪಾಕ್ಷ ಮೆಂತೆದ, ಸುರೇಶ ಶಿವರಾತ್ರಿ, ಸುರೇಶ ಮೆಂತೆದ, ಪ್ರದೀಪ ಕಂಚಾಣಿ, ಭದ್ರು ಹಂಡಿ, ಪ್ರಕಾಶ ರೋಜಿ, ರಾಜು ಮುರನಾಳ, ಚಿದಾನಂದ ಮೂರ್ತಿ, ಈರಣ್ಣ ಚಾರಕಾನಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು. 


ಸುದ್ದಿ ಓದಿ