ಧಾರವಾಡ - ಹುಬ್ಬಳ್ಳಿ

ಸಾಧನೆಯ ಹಾದಿಯಲ್ಲಿ ಸಮಸ್ಯೆ ಸಹಜ: ದಿವ್ಯ ಪ್ರಭು

ಸಾಧನೆಯ ಹಾದಿಯಲ್ಲಿ ಸಮಸ್ಯೆ ಸಹಜ: ದಿವ್ಯ ಪ್ರಭು

ಧಾರವಾಡ 22 ; ಸಾಧನೆಗೆ ಗುರಿ ಅತಿ ಮುಖ್ಯ ಗುರಿ ಸಾಧನೆಯ ಸಮಯದಲ್ಲಿ ಸಮಸ್ಯೆ ಸಹಜ. ಆದರೆ ಗುರಿ ಅಚಲವಾದರೆ ಅಸಾಧಾರಣವಾದ ಸಾಧನೆ ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು. ಇಂದು ಬೆಳಿಗ್ಗೆ ನಗರದ ಅಂಜುಮನ್ ಕಲಾವಿಜ್ಞಾನ ಹಾಗೂ ಸ್ನಾತಕೋತ್ತರ ಮಹಾವಿದ್ಯಾಲಯ ಧಾರವಾಡ ಮಹಿಳಾ ಸಬಲೀಕರಣ ಕೋಶ ಹಾಗೂ ಇತಿಹಾಸ ವಿಭಾಗ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಿತ್ತೂರು ರಾಣಿ ಚನ್ನಮ್ಮ 19ನೇ ಶತಮಾನದ ಪೌರಾಣಿಕ ರಾಣಿ ವಿಚಾರ ಸಂಕೀರ್ಣ ಉದ್ಘಾಟಿಸಿ ಮಾತನಾಡಿದರು.  

ಸ್ತ್ರಿಯರಿಗೆ ಮುಕ್ತ ಅವಕಾಶ ನೀಡಿದಾಗ ಪ್ರತಿಭೆ ಹೊರಬರಲು ಸಾಧ್ಯ. ಅದೇ ರೀತಿ ಮಾನಸಿಕ ಚಂಚಲತೆಯಿಂದ ಮುಕ್ತರಾಗಬೇಕು ಹಾಗೂ ಮಹಿಳೆ ಸ್ವಯಂ ಅರಿವು ಬೆಳೆಸಿಕೊಳ್ಳುವುದು ಅತಿ ಮುಖ್ಯ ಎಂದರು.ಸಾಧಕ ಮಹಿಳೆಯರ ಕುರಿತು ಹಲವಾರು ನೈಜ ಸರಳ ಹಾಗೂ ಸಹಜ ಉದಾಹರಣೆಗಳ ಮೂಲಕ ಪರಿಣಾಮಕಾರಿಯಾಗಿ ಮಕ್ಕಳ ಮನಮುಟ್ಟುವಂತೆ ತಮ್ಮ ವಿಚಾರವನ್ನು ಜಿಲ್ಲಾಧಿಕಾರಿಗಳು ಮಾತನಾಡಿದರು.   

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಜುಮನ್ ಈ ಇಸ್ಲಾಂ ಉಪಾಧ್ಯಕ್ಷರಾದ ಜನಾಬ್ ಬಶೀರ್ ಅಹಮದ್ ಜಾಗೀರದಾರ ಮಾತನಾಡಿ ರಾಣಿ ಚೆನ್ನಮ್ಮ ಸಾಧನೆಯನ್ನು ಮುಕ್ತ ಕಂಠದಿಂದ ಪ್ರಶಂಶಿಸಿದರು. ಕಾರ್ಯಕ್ರಮದ ಅಂಗವಾಗಿ ಬಿತ್ತಿ ಚಿತ್ರ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು.    ಕಾರ್ಯಕ್ರಮದಲ್ಲಿ ಅಂಜುಮನ್‌-ಇ-ಇಸ್ಲಾಂ ಸಂಸ್ಥೆಯ ಆಡಳಿತ ಮಂಡಳಿಯ ಕಾರ್ಯದರ್ಶಿ ಡಾ. ಎಸ್‌. ಎ.ಸರ್ಗಿರೋ, ಖಜಾಂಚಿ ಮಹಮ್ಮದ್ ರಫಿಕ್ ಶಿರಹಟ್ಟಿ, ಪ್ರಾಚಾರ್ಯ ಡಾ. ಎನ್‌.ಎಂ.ಮಕಾಂದಾರ್ ಹಾಗೂ ಐ.ಕ್ಯೂ. ಏ.ಸಿ ಸಂಯೋಜಕ ಡಾ. ಎನ್‌. ಬಿ.ನಲತವಾಡ, ಪತ್ರಗಾರ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಡಾ.ಮಂಜುಳಾ ಎಲಿಗಾರ ವೇದಿಕೆಯಲ್ಲಿ ಇದ್ದರು.     

ಕಾರ್ಯಕ್ರಮದಲ್ಲಿ ಅಂಜುಮನ್ ಇಸ್ಲಾಂ ಸಂಸ್ಥೆಯ ಆಡಳಿತ ವರ್ಗದವರಾದ ಜನಾಬ್ ಖೈರುದ್ದೀನ್ ಶೇಕ್, ಯಾಸಿನ್ ಹಾವೇರಿ ಪೇಟ್ ,ನಜೀರ್ ಬಲಬಟ್ಟಿ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ರಾಣಿ ಚೆನ್ನಮ್ಮಳ ಪೌರಾಣಿಕ ಕಿರು ನಾಟಕದ ಮೂಲಕ ಕಾರ್ಯಕ್ರಮ ಪ್ರಾರಂಭಿಸಲಾಯಿತು .ಕುಮಾರಿ ಸ್ವಾಲೆಹ.   ಕುರಾನ್  ಪಠಿಸಿದರು ಹಾಗೂ ಕುಮಾರ್ ಪ್ರವೀಣ್ ಲಮಾಣಿ ಭಗವದ್ಗೀತೆಯ ಶ್ಲೋಕವನ್ನು ಪಠಿಸಿದರು.ಇಂಗ್ಲಿಷ್ ವಿಭಾಗದ ಡಾ. ಆಸ್ಮಾನಾಜ್ ಬಳ್ಳಾರಿ ಅತಿಥಿಗಳ ಪರಿಚಯಿಸಿದರು ಹಾಗೂ ಸರ್ವರನ್ನು ಸ್ವಾಗತಿಸಿದರು. ಅರ್ಥಶಾಸ್ತ್ರ ವಿಭಾಗದ ಪ್ರೊ.  ಆಸ್ಮಾ ನದಾಫ್ ವಂದನಾರೆ​‍್ಣಯ ಕಾರ್ಯಕ್ರಮವನ್ನು ನೆರವೇರಿಸಿದರು. ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ಸೈಯದ್ ತಾಜುನ್ ನೀಸಾ ಕಾರ್ಯಕ್ರಮವನ್ನು ನಿರೂಪಿಸಿದರು. 


ಸುದ್ದಿ ಓದಿ