ರಾಣೆಬೆನ್ನೂರ

ರೈತ ಪರ ನಿಲುವು ತಾಳಿ ಅಧಿವೇಶನದಲ್ಲಿ ಗಂಭೀರವಾಗಿ ಚರ್ಚಿಸಿದ ಕೋಳಿವಾಡ

ರೈತ ಪರ ನಿಲುವು ತಾಳಿ ಅಧಿವೇಶನದಲ್ಲಿ ಗಂಭೀರವಾಗಿ ಚರ್ಚಿಸಿದ ಕೋಳಿವಾಡ

ರಾಣೇಬೆನ್ನೂರು 09: ಬೆಳಗಾವಿ ಅಧಿವೇಶನದಲ್ಲಿ ಗಂಭೀರ ಹಾಗೂ ರೈತ ಪರ ನಿಲುವು ವ್ಯಕ್ತಪಡಿಸಿ ರಾಜ್ಯ ಸರ್ಕಾರದ ಗಮನ ಸೆಳೆದ ಶಾಸಕ ಪ್ರಕಾಶ್ ಕೋಳಿವಾಡ. ಹವಮಾನ ಇಲಾಖೆಯ ಮಾಹಿತಿ ಪ್ರಕಾರ ಮುಂದಿನ ನಾಲ್ಕು ದಿನಗಳು ರಾಜ್ಯದಲ್ಲಿ ಉತ್ತಮ ಮೋಡಗಳು ದೊರೆಯಲಿದ್ದು ಮೋಡ ಬಿತ್ತನೆಗೆ ಸಕಾಲವಾಗಿದೆ. ಭೀಕರ ಬರಗಾಲ ಆವರಿಸಿರುವ ಈ ಸಂದರ್ಭದಲ್ಲಿ ಮೋಡ ಬಿತ್ತನೆಗೆ ರಾಜ್ಯ ಸರ್ಕಾರ ವಿಳಂಬ ಮಾಡದೇ ಇಂದು ತಕ್ಷಣವೇ ಅನುಮತಿ ನೀಡಿದರೆ. ತಮ್ಮ ಸ್ವಂತ ಖರ್ಚಿನಲ್ಲಿ ಮೋಡ ಬಿತ್ತನೆ ಮಾಡಿ ಜನ ಜಾನುವಾರು ಹಾಗೂ ರೈತರ ರಕ್ಷಣೆಗೆ ಸಿದ್ದ ಎಂದು ಶುಕ್ರವಾರ ಅಧಿವೇಶನದ ಶೂನ್ಯ ವೇಳೆಯಲ್ಲಿ ರಾಣೆಬೆನ್ನೂರು ಶಾಸಕ ಪ್ರಕಾಶ್ ಕೋಳಿವಾಡ ಪ್ರಸ್ತಾಪ ಮಾಡಿದರು. 


ಸುದ್ದಿ ಓದಿ