ಪ್ರಿಯಾಂಕಾ ಶಂ. ಲಮಾಣಿ ಮಹಿಳೆ ಕಾಣೆ
ರಾಣೆಬೆನ್ನೂರು 16: ತಾಲೂಕಿನ ಬಸಲಿಕಟ್ಟಿ ತಾಂಡೆಯ ಮಹಿಳೆಯೂರ್ವಳು, ಕಾಣೆಯಾಗಿರುವ ಕುರಿತು ರಾಣೆಬೆನ್ನೂರು ಗ್ರಾಮೀಣ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ. ತಾಂಡೆಯ ಪ್ರಿಯಾಂಕಾ ಶಂ. ಲಮಾಣಿ (25) ಕಾಣೆಯಾದ ಮಹಿಳೆ. ಈ ಕುರಿತಂತೆ ತಾಯಿ ಲಕ್ಷ್ಮಿ ಶಂ. ಲಮಾಣಿ, ಅವರು ಠಾಣೇಗೆ ಹಾಜರಾಗಿ, ತಮ್ಮ ಮಗಳನ್ನು ಹುಡುಕಿ ಕೊಡುವಂತೆ ದೂರು ನೀಡಿದ್ದಾರೆ. ಕಳೆದ 9-9-2024 ರಂದು ಬೆಳಗಿನ ಜಾವ 2:ರ ಸಮಯದಲ್ಲಿ, ಯಾರಿಗೂ ಹೇಳದೆ ಕೇಳದೆ ಮನೆ ಬಿಟ್ಟು ಹೋಗಿರುವ ಕುರಿತು 10 -09-2024 ರಂದು ಪ್ರಕರಣ ದಾಖಲಿಸಿದ್ದಾರೆ.
ಚಹರೆ ಪಟ್ಟಿ:- ಜಾತಿ ಹಿಂದೂ ಲಮಾಣಿ. ವೃತ್ತಿ ಮನೆ ಕೆಲಸ. ವಯಸ್ಸು-25. ಎತ್ತರ,5 -2, ಸಿಮೆಂಟ್ ಕಲರಿನ ಟಾಪ್, ಪಿಂಕ್ ಪ್ಯಾಂಟ್ ಧರಿಸಿದ್ದು, ಲಂಬಾಣಿ, ಕನ್ನಡ ಭಾಷೆ ಮಾತನಾಡುತ್ತಾಳೆ. ಕೆಂಪು ಮೈಬಣ್ಣ, ದುಂಡು ಮುಖ, ದಪ್ಪ ಮೈಕಟ್ಟು. ಈ ಮಹಿಳೆ ಕಂಡು ಬಂದಲ್ಲಿ ಕೂಡಲೇ, ಗ್ರಾಮಾಂತರ ಠಾಣೇಗೆ ಮಾಹಿತಿ ನೀಡಲು, ಪಿಎಸ್ಐ, ಪಿ.ಡಿ. ಪಡಿವಳಕರ ಅವರು, ಪ್ರಕಟಣೇಯಲ್ಲಿ ಕೋರಿದ್ದಾರೆ.