ಕಾರ್ಮಿಕರು ಮತ್ತು ಬಡವರ ಮೇಲೆ ಖಾಸಗಿ ಫೈನಾನ್ಸ್ ಕಿರುಳಕುಳ
ರಾಣಿಬೆನ್ನೂರ:14 ತಾಲ್ಲೂಕಿನ ಗುಡ್ಡದ ಬೇವಿನಹಳ್ಳಿ ಗ್ರಾಮದ ರೈತ ಕಾರ್ಮಿಕರು, ಕೂಲಿ ಕಾರ್ಮಿಕರು ಮತ್ತು ಬಡವರ ಮೇಲೆ ಖಾಸಗಿ ಫೈನಾನ್ಸ್ ಕಿರುಳಕುಳ ನೀಡುವುದನ್ನು ತಡೆಯಬೇಕೆಂದು ನೊಂದ ಕುಟುಂಬಗಳು ಜೂ. 10 ರಂದು ನೊಂದ ಕುಟುಂಬದವರು ಮನವಿ ಮಾಡಿದರೂ ತಹಶೀಲ್ದಾರ ಯಾವುದೇ ಕ್ರಮ ಕೈಗೊಳ್ಳದೇ ಇರುವುದನ್ನು ವಿರೋಧಿಸಿ ಮಿನಿ ವಿಧಾನ ಸೌಧದ ಎದುರುಗಡೆ ಶುಕ್ರವಾರ ಕೂಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.
ರೈತ ಮುಖಂಡ ಹನುಮಂತಪ್ಪ ಕಬ್ಬಾರ ಮಾತನಾಡಿ, ಗುಡ್ಡದ ಬೇವಿನಹಳ್ಳಿ ಗ್ರಾಮದ ರೈತ ಕಾರ್ಮಿಕರು, ಕೂಲಿ ಕಾರ್ಮಿಕರು ಮತ್ತು ಬಡವರ ಮೇಲೆ ಖಾಸಗಿ ಫೈನಾನ್ಸ್ ಸಿಬ್ಬಂದಿ ಸಾಲ ವಸೂಲಾತಿಗೆ ದಿನಾಲು ಬೆಳಿಗ್ಗೆ ಯಿಂದ ರಾತ್ರಿ 11.30 ರವರೆಗೂ ಮನೆಯ ಮುಂದೆ ನಿಂತು ಸಾಲ ಕಟ್ಟಬೇಕೆಂದು ಕಿರುಕುಳ ನೀಡುತ್ತಿದ್ದಾರೆ. ನೀವು ಜಿಲ್ಲಾಧಿಕಾರಿ, ತಹಶೀಲ್ದಾರ ಅಲ್ಲ ಯಾರ ಬಳಿ ಹೋದರೂ ಏನೂ ನಡೆಯಲ್ಲ. ದುಡ್ಡು ಕಟ್ಟಬೇಕೆಂದು ಒತ್ತಾಯ ಮಾಡುತ್ತಿದ್ದಾರೆ ಎಂದು ದೂರಿದರು.
ಕಳೆದ ಎರಡು ವರ್ಷದಿಂದ ಅತಿವೃಷ್ಠಿ ಅನಾವೃಷ್ಟಿಯಿಂದ ಮಳೆಬೆಳೆ ಇಲ್ಲ. ಈ ಬಾರಿ ಬೀಕರ ಬರಗಾಲದಿಂದ ಜೀವನ ನಡೆಸುವುದು ಕಷ್ಟವಾಗಿದೆ. ಖಾಸಗಿ ಫೈನಾನ್ಸ್ ಕಿರುಕುಳದಿಂದ ಬೇಸತ್ತು ನಾವೆಲ್ಲರೂ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ. ದಯಾಳುಗಳಾದ ತಾವು ಖಾಸಗಿ ಫೈನಾನ್ಸ್ ಕಂಪನಿಯವರನ್ನು ಕರೆಸಿ ಸಾಲ ಕಟ್ಟಲು ಕಾಲಾವಕಾಶ ಕೊಡಿಸಬೇಕು ಮನವಿ ಮಾಡಿದರು.
ನೂರಅಹ್ಮದ ಬಡಗೇರ, ಚಂದ್ರ್ಪ ತಳವಾರ, ರಮೇಶ ಹೆಡಿಯಾಲ, ಜಗದೀಶ ತಳವಾರ, ಹುಸೇನಸಾಬ ಬಡಿಗೇರ, ಕರಬಸಪ್ಪ ಸೋಮಕ್ಕಳವರ, ಭರಮಪ್ಪ ತಳವಾರ, ಜಿಯಾವುಲ್ಲಾ ಬಡಿಗೇರ, ಮಾರುತೆಪ್ಪ ಜರಹಳ್ಳಿ, ಮಸ್ತಾಕ್ ಕಮ್ಮಾರ, ಮಾಲತೇಶ ಓಲೇಕಾರ, ಶಿವಪ್ಪ ಬೇವಿನಹಳ್ಳಿ, ಅಖಿಲಾಬಿ, ಜುಬೇದಾ ಪೇರಿಜಾನ ಪಿ.ಎಂ, ನಾಗವ್ವ, ತೇರವ್ವ, ಬಸವ್ವ, ರಹಿಯಾ, ಪರ್ಜಾನ್, ಬಸಿರಾಂಬಿ, ಹನುಮಕ್ಕ, ರತ್ನವ್ವ ಉಪಸ್ಥಿತರಿದ್ದರು.