ಅಥಣಿ

ರಾಜ್ಯ ಬಜೆಟ್‌ನಲ್ಲಿ ಮೂಲಭೂತ ಸೌಲಭ್ಯಗಳಿಗೆ ಆದ್ಯತೆಯ ನೀರೀಕ್ಷೆ : ರಾಜ್ಯ ಬಿಜೆಪಿ ಉಪಾಧ್ಯಕ್ಷ ಲಕ್ಷ್ಮಣ ಸವದಿ ಹೇಳಿಕೆ: ಪಬ್ಲಿಕ್ ಶಾಲೆಯ ನೂತನ ಕಟ್ಟಡಕ್ಕೆ ಭೂಮಿ ಪೂಜೆ

ರಾಜ್ಯ ಬಜೆಟ್‌ನಲ್ಲಿ ಮೂಲಭೂತ ಸೌಲಭ್ಯಗಳಿಗೆ ಆದ್ಯತೆಯ ನೀರೀಕ್ಷೆ  : ರಾಜ್ಯ ಬಿಜೆಪಿ ಉಪಾಧ್ಯಕ್ಷ ಲಕ್ಷ್ಮಣ ಸವದಿ ಹೇಳಿಕೆ: ಪಬ್ಲಿಕ್ ಶಾಲೆಯ ನೂತನ ಕಟ್ಟಡಕ್ಕೆ ಭೂಮಿ ಪೂಜೆ

ಲೋಕದರ್ಶನ ವರದಿ 


ಅಥಣಿ 02: ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಲಿರುವ ಬಜೆಟ್‌ನಲ್ಲಿ ಕೃಷಿ, ನೀರಾವರಿ, ವಿದ್ಯುತ್, ರಸ್ತೆ ಸೇರಿದಂತೆ ಅನೇಕ ಮೂಲಭೂತ ಸೌಲಭ್ಯಗಳಿಗೆ ಆದ್ಯತೆ ನೀಡುವ ನೀರೀಕ್ಷೆ ಇದೆ ಎಂದು ಮಾಜಿ ಉಪಮುಖ್ಯಮಂತ್ರಿ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಲಕ್ಷ್ಮಣ ಸವದಿ ಹೇಳಿದರು.  

ಅವರು ತಾಲೂಕಿನ ನದಿ ಇಂಗಳಗಾಂವ ಗ್ರಾಮದಲ್ಲಿ ಪಬ್ಲಿಕ್ ಶಾಲೆಯ ನೂತನ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು. 

             ಕೃಷಿಯನ್ನು ಅತೀ ಹತ್ತಿರದಿಂದ ನೋಡಿರುವ ಸಿ ಎಂ ಬೊಮ್ಮಾಯಿ ಕೃಷಿಗೆ ಹೆಚ್ಚು ಒತ್ತು ನೀಡುವ ನೀರೀಕ್ಷೆ ಇದೆ ಹಾಗೂ ರೈತರ ಮಕ್ಕಳಿಗೆ ವಿಶೇಷ ಸ್ಕಾಲರ್ ಶಿಪ್ ಯೋಜನೆಯನ್ನು ಈಗಾಗಲೇ ಅನುಷ್ಠಾನ ಗೊಳಿಸಿದ್ದಾರೆ ಎಂದು ಹೇಳಿದರು.  

          ಅಥಣಿ ತಾಲೂಕಿನ ಅನೇಕ ವಿದ್ಯಾರ್ಥಿಗಳೂ ಕೂಡ ಉಕ್ರೇನ್ ದೇಶದಲ್ಲಿ ಸಿಲುಕಿಕೊಂಡಿದ್ದಾರೆ ಹೀಗಾಗಿ ಇಲ್ಲಿಯ ವಿದ್ಯಾರ್ಥಿಗಳ ಮಾಹಿತಿ ಪಡೆದುಕೊಂಡು ರಾಜ್ಯ ಸರಕಾರದ ಮೂಲಕ ಕೇಂದ್ರ ಸರಕಾರಕ್ಕೆ ಮಾಹಿತಿ ಒದಗಿಸಿದ್ದೇನೆ ಎಂದರು. 

          ನದಿ ಇಂಗಳಗಾಂವ ಗ್ರಾಮದಲ್ಲಿ ಈಗ ಸದ್ಯಕ್ಕೆ ಪಿಯುಸಿ ವರೆಗೆ ಶಿಕ್ಷಣದ ಸೌಲಭ್ಯವಿದೆ ಆದರೆ ಹೆಚ್ಚಿನ ಶಿಕ್ಷಣಕ್ಕಾಗಿ ಅಥಣಿ ಸೇರಿದಂತೆ ಬೇರೆ ಸ್ಥಳಗಳನ್ನೇ ಅವಲಂಬಿಸಬೇಕಿದೆ ಹೀಗಾಗಿ ಪದವಿ ಶಿಕ್ಷಣದ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದ ಅವರು ನದಿ ಇಂಗಳಗಾಂವ ಗ್ರಾಮದಲ್ಲಿ 1.70 ಕೋಟಿ ಅನುದಾನದಲ್ಲಿ ನೂತನ ಕಟ್ಟಡಕ್ಕೆ ಭೂಮಿ ಪೂಜೆ ನಾನು ಹಾಗೂ ಶಾಸಕರಾದ ಮಹೇಶ ಕುಮಠಳ್ಳಿ ಕೂಡಿ ನೆರವೇರಿಸಿರುವೆವು ಎಂದರು. 

          ಈ ಸಂದರ್ಭದಲ್ಲಿ ಶಾಸಕರಾದ ಮಹೇಶ ಕುಮಠಳ್ಳಿ, ಹಿರಿಯರಾದ ಗುರುಬಸು ತೇವರಮನಿ, ಸಂಗಪ್ಪಾ ಸಾವಂತ್ರಿ, ಬಸಗೌಡಾ ಚನಗೌಡರ, ಮಲ್ಲಪ್ಪಾ ಠಕ್ಕಣ್ಣವರ, ಸತೀಶ ಗುಂಡಕಲ್ಲಿ, ಉಮೇಶ ಯಳವಿ, ಗ್ರಾಮ ಪಂಚಾಯತ ಅಧ್ಯಕ್ಷ ಶಂಕರ ಠಕ್ಕಣ್ಣವರ, ಉಪಾಧ್ಯಕ್ಷ ಅಪ್ಪು ಮದಭಾವಿ, ವಿಠ್ಠಲ್ ಗುಡಣ್ಣವರ, ನಾಗಪ್ಪಾ ಘೂಳಪ್ಪನವರ, ಶಿವರುದ್ರ ಘೂಳಪ್ಪನವರ, ಸುರೇಶ ಠಕ್ಕಣ್ಣವರ, ಪ್ರಕಾಶ ಚನ್ನಣ್ಣವರ, ಲೋಕೋಪಯೋಗಿ ಇಲಾಖೆಯ ಜಯಾನಂದ ಹಿರೇಮಠ, ಗೌಡಪ್ಪ ಘೂಳಪ್ಪನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ