ಅಥಣಿ

ಗುಣಮಟ್ಟದ ಕಬ್ಬು ಪೂರೈಕೆಗೆ ಆದ್ಯತೆ ನೀಡಿ: ಪರ​‍್ಪ ಸವದಿ

ಗುಣಮಟ್ಟದ ಕಬ್ಬು ಪೂರೈಕೆಗೆ ಆದ್ಯತೆ ನೀಡಿ: ಪರ​‍್ಪ ಸವದಿ

ಅಥಣಿ ಸೆ.21: ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ಗುಣಮಟ್ಟದ ಕಬ್ಬು ಪೂರೈಕೆ ಮಾಡಬೇಕು ಎಂದು ಕಾರ್ಖಾನೆ ಅಧ್ಯಕ್ಷ ಪರ​‍್ಪ ಸವದಿ ಕಬ್ಬು ಬೆಳೆಗಾರರಲ್ಲಿ ಮನವಿ ಮಾಡಿದರು.  ಕಾರ್ಖಾನೆಯ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ಹಂಗಾಮಿನಲ್ಲಿ 5,33,788 ಟನ್ ಕಬ್ಬು ನುರಿಸಿ 6,14,650 ಟನ್ ಸಕ್ಕರೆ ಉತ್ಪಾದಿಸಲಾಗಿದ್ದು, ಶೇ.11.51ರಷ್ಟು ಸಕ್ಕರೆ ಇಳುವರಿ ದಾಖಲಾಗಿದೆ. ಇದರೊಂದಿಗೆ 5,94,88,113 ಯೂನಿಟ್ ವಿದ್ಯುತ್ ಉತ್ಪಾದಿಸಲಾಗಿದೆ ಎಂದರು.  

ರಾಜ್ಯದಲ್ಲಿ 81 ಸಕ್ಕರೆ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿದ್ದು, ಲಾಭದಾಯಕವಾಗಿ ಮುನ್ನಡೆಯಲು ಕನಿಷ್ಠ 150 ದಿನಗಳ ಕಾಲ ಕಾರ್ಯನಿರ್ವಹಿಸಿ 7 ಲಕ್ಷ ಟನ್ ಕಬ್ಬು ನುರಿಸುವ ಗುರಿ ಹೊಂದಬೇಕು. ಕಳೆದ ವರ್ಷ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಸುಮಾರು 90 ದಿನ ಮಾತ್ರ ಕಾರ್ಯನಿರ್ವಹಿಸಿರುವುದನ್ನು ರೈತರು ಗಮನಿಸಬೇಕು ಎಂದರು.  

ವ್ಯವಸ್ಥಾಪಕ ನಿರ್ದೇಶಕ ಜಿ.ಎಂ. ಪಾಟೀಲ ಮಾತನಾಡಿ, ರಾಜ್ಯದಲ್ಲಿನ ಸಕ್ಕರೆ ಕಾರ್ಖಾನೆಗಳು ಕನಿಷ್ಠ 150 ದಿನ ಕಾರ್ಯನಿರ್ವಹಿಸುವ ಮೂಲಕ 7 ಲಕ್ಷ ಟನ್ ಕಬ್ಬು ನುರಿಸುವ ಗುರಿ ಹೊಂದಬೇಕು ಎಂದರು.  

ಸಭೆಯಲ್ಲಿ ಕಚೇರಿ ಅಧೀಕ್ಷಕ ಎಸ್‌.ಎ. ಠಕ್ಕಣ್ಣವರ ಠರಾವು ಮಂಡಿಸಿದರು. ಲೆಕ್ಕಪತ್ರ ವಿಭಾಗದ ಪ್ರಧಾನ ವ್ಯವಸ್ಥಾಪಕ ಎಸ್‌.ಬಿ. ಗೊಟಗಂಡಿ ಲೆಕ್ಕಪತ್ರ ಮಂಡಿಸಿದರು. ಕಾರ್ಖಾನೆ ಉಪಾಧ್ಯಕ್ಷ ಎಸ್‌.ಎ. ವಾಘಮೋಡೆ, ನಿರ್ದೇಶಕರಾದ ಜಿ.ಎಂ. ತೇವರಮನಿ, ಎಸ್‌.ಡಿ. ನಂದೇಶ್ವರ, ಜಿ.ಎಂ. ಜತ್ತಿ, ಎಸ್‌.ಜೆ. ಪಾಟೀಲ ಸೇರಿದಂತೆ ನಿರ್ದೇಶಕರು, ಸದಸ್ಯರು, ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ನಿರ್ದೇಶಕ ಜಿ.ಎಂ. ಜತ್ತಿ ಸ್ವಾಗತಿಸಿದರು. 


ಸುದ್ದಿ ಓದಿ