ಶಿಗ್ಗಾವ್

ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ

ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ

ಲೋಕದರ್ಶನ ವರದಿ 

ಶಿಗ್ಗಾವಿ 07:  ತಾಲೂಕಿನ ನೀರಲಗಿಕ್ಲಸ್ಟರ್ ವ್ಯಾಪ್ತಿಯ ಕಡಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಮೂಹ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಗೊಟಗೋಡಿಯ ಉತ್ಸವ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. 

ಪ್ರತಿಭಾಕಾರಂಜಿ ಸ್ಪರ್ಧೆಯಲ್ಲಿ ಧಾರ್ಮಿಕ ಪಠಣ (ಸಂಸ್ಕೃತ):ರಚನಾ ಅಳಗವಾಡಿ-7ನೇ ತರಗತಿ-(ದ್ವಿತೀಯ), ಕಥೆ ಹೇಳುವುದು: ಸ್ಪೂರ್ತಿ ಪಾಟೀಲ-7ನೇ ತರಗತಿ-(ದ್ವಿತೀಯ), ಕಂಠ ಪಾಠ: ಮನೋಜ ಸೂರಗೊಂಡ-4ನೇ ತರಗತಿ-(ಪ್ರಥಮ),ಲಘು ಸಂಗೀತ: ಮನೋಜ ಸೂರಗೊಂಡ-4ನೇತರಗತಿ (ತೃತೀಯ),ಧಾರ್ಮಿಕ ಪಠಣ(ಅರೇಬಿಕ್): ಇಸ್ಮಾಯಿಲ್ ಜೇಕನಕಟ್ಟಿ, 3ನೇತರಗತಿ (ಪ್ರಥಮ), ಭಕ್ತಿಗೀತೆ: ಐಶ್ವರ್ಯ ಅಣ್ಣಿಗೇರಿ-4ನೇ ತರಗತಿ(ದ್ವಿತೀಯ), ಆಶು ಭಾಷಣ: ಅನುರಾಧ ಗುಂಡಣ್ಣನವರ-4ನೇ ತರಗತಿ.(ದ್ವಿತೀಯ). 

ವಿದ್ಯಾರ್ಥಿಗಳ ಸಾಧನೆಗೆ ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದ ಹರ್ಷ ವ್ಯಕ್ತಪಡಿಸಿದ್ದಾರೆ. 


ಸುದ್ದಿ ಓದಿ