ಕಾಗವಾಡ

19ರಂದು ಬಂಜೆತನ ನಿವಾರಣೆ ಉಚಿತ ತಪಾಸಣೆ ಶಿಬಿರ

19ರಂದು ಬಂಜೆತನ ನಿವಾರಣೆ ಉಚಿತ ತಪಾಸಣೆ ಶಿಬಿರ

ಶೇಡಬಾಳ 13: ಮಿರಜದ ಸಚಿನ ಆಸ್ಪತ್ರೆಯಲ್ಲಿ ಬರುವ ರವಿವಾರ  ದಿ. 19 ರಂದು ಉಚಿತ ಮಹಿಳೆಯರ ಲೈಂಗಿಕ ರೋಗಗಳು ಹಾಗೂ ಬಂಜೆತನ ನಿವಾರಣೆ ಹಾಗೂ ಉಪಚಾರ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು ಇದರ ಲಾಭವನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ಮಿರಜದ ಖ್ಯಾತ ಸ್ತ್ರೀರೋಗ ತಜ್ಞ ಡಾ. ಸಚಿನ ಸುಗಣ್ಣವರ ತಿಳಿಸಿದ್ದಾರೆ. 

ಸಚಿನ ಆಸ್ಪತ್ರೆಯು ಬಂಜೆತನ ನಿವಾರಣೆ ಹಾಗೂ ಮಹಿಳೆಯರ ಲೈಂಗಿಕ ರೋಗಗಳ ನಿವಾರಣೆ ಕುರಿತು ಕಳೆದ ಹಲವಾರು ವರ್ಷಗಳಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರಗಳನ್ನು ಏರ್ಪಡಿಸಿ ತನ್ನದೇ ಆದ ರೀತಿಯಲ್ಲಿ ಸಾಮಾಜಿಕ ಕಾರ್ಯವನ್ನು ಕೈಗೊಳ್ಳುತ್ತಿದೆ.  

ರವಿವಾರ ದಿ. 19 ರಂದು ಬೆಳಗ್ಗೆ 9 ರಿಂದ ಸಂಜೆ 4 ರವರೆಗೆ ಜರುಗುವ ಶಿಬಿರದಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ಉಪಚಾರ ಮತ್ತು ಕಡಿಮೆ ಖರ್ಚಿನಲ್ಲಿ ಶಸ್ತ್ರಕ್ರೀಯೆ ಮಾಡಲಾಗುವುದು. ಇದರ ಲಾಭವನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ಡಾ. ಸಚಿನ ಸುಗಣ್ಣವರ ಕರೆ ನೀಡಿದ್ದಾರೆ. 


ಸುದ್ದಿ ಓದಿ