ರಾಣೆಬೆನ್ನೂರ

ಕಾರ್ಯಾಂಗ ನ್ಯಾಯಾಂಗ ಶಾಸಕಾಂಗ ದಾರಿ ತಪ್ಪಿದರೆ ಎಚ್ಚರಿಸುವ ಅಂಗ ಪತ್ರಿಕಾ ರಂಗ - ಭೋಜಣ್ಣನವರ

ಕಾರ್ಯಾಂಗ ನ್ಯಾಯಾಂಗ ಶಾಸಕಾಂಗ ದಾರಿ ತಪ್ಪಿದರೆ ಎಚ್ಚರಿಸುವ ಅಂಗ ಪತ್ರಿಕಾ ರಂಗ - ಭೋಜಣ್ಣನವರ

ರಾಣೇಬೆನ್ನೂರು :26: ಆಧುನಿಕ ತಂತ್ರಜ್ಞಾನದಲ್ಲಿ ಎಷ್ಟೇ  ಬದಲಾವಣೆಯಾದರೂ ಸಹ ಮುದ್ರಣ ಮಾಧ್ಯಮಕ್ಕೆ ಇರುವಷ್ಟು ಗಟ್ಟಿತನ ಬೇರೆ ಯಾವುದೇ ಮಾಧ್ಯಮಕ್ಕೆ ಬರಲಾರದು ಎಂದು ಉಪ ವಿಭಾಗದ ಡಿವೈಎಸ್ಪಿ ಡಾ: ಗೀರೀಶ್ ಭೋಜಣ್ಣನವರ ಹೇಳಿದರು.  

ಅವರು ಶುಕ್ರವಾರ, ಇಲ್ಲಿನ ಎಸ್‌. ಜೆ.ಎಂ ಕಾಲೇಜು, ಡಾ : ಶಿ. ಮು. ಶ. ಸಭಾಭವನದಲ್ಲಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕ ಘಟಕವು ಆಯೋಜಿಸಿದ್ದ 2024-ನೇ ಸಾಲಿನ ಪತ್ರಿಕಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.   

ಮಾನವೀಯತೆ ಮನುಷ್ಯನ ಬಹುದೊಡ್ಡಗುಣ ಕ್ಷೇತ್ರ ಯಾವುದೇ ಇರಲಿ, ಅವರವರ ಕರ್ತವ್ಯಗಳನ್ನು  ನಿಷ್ಠೆ, ಪ್ರಾಮಾಣಿಕತೆ, ಮತ್ತು ವಿಮರ್ಶಾತ್ಮಕ ದೃಷ್ಟಿ ಕೋನದಲ್ಲಿ ನಡೆಸುವುದರ ಮೂಲಕ, ಸಮಾಜ, ಸಂಘಟನೆ, ಉದ್ಯಮ, ಆರ್ಥಿಕತೆ ಪ್ರಗತಿ ಸಾಧಿಸಲು ಸಾಧ್ಯವಾಗಲಿದೆ. ಅದಕ್ಕೆ ಪೂರಕವಾಗಿ ಪತ್ರಕರ್ತರು, ಸಾರ್ವಜನಿಕರ ರುವಾರಿಗಳಾಗಿ ತಮ್ಮ ಕರ್ತವ್ಯಗಳನ್ನು  ನಿಭಾಯಿಸಲು ಮುಂದಾಗಬೇಕಾದ ಇಂದಿನ ಅಗತ್ಯವಿದೆ ಎಂದರು.     

ವಿದ್ಯಾರ್ಥಿ ಜೀವನ, ಕಷ್ಟಕರವಲ್ಲ ವಿದ್ಯಾರ್ಥಿಗಳು, ಬಳಸುವ ಸಾಧನೆಗಳು ಹಿತ ಮಿತವಾಗಿ ಅಗತ್ಯವಿರುವಷ್ಟು, ತಂತ್ರಜ್ಞಾನ ಮಾಹಿತಿ ಪಡೆಯಬೇಕು ಮತ್ತು ಯಾವುದೇ ಕಾರಣಕ್ಕೂ ಮೋಸಕ್ಕೆ ಒಳಗಾಗದೆ ತಂದೆ ತಾಯಿಗಳ ವಿಧೇಯರಾಗಿ, ಗುರು ಹಿರಿಯರಿಗೆ  ಗೌರವ ನೀಡಿ, ಸಮಾಜದಲ್ಲಿ ಸತ್ಪ್ರಜೆಯಾಗಿ ಬೆಳೆಯಬೇಕು ಎಂದು ಕರೆ ನೀಡಿದರು.     

ರಾಣೇಬೆನ್ನೂರು ಶಹರ ವೃತ್ತಾಧಿಕಾರಿ ಶಂಕರ ಅವರು, ತಂತ್ರಜ್ಞಾನ ಬೆಳವಣಿಗೆಯಲ್ಲಿ, ಸಾಕಷ್ಟು ಮೋಸವಾಗುತ್ತಲ್ಲಿದ್ದು, ಯಾವುದೇ ಕಾರಣಕ್ಕೂ, ಪ್ರತ್ಯೇಕವಾಗಿ ತಮ್ಮ ಖಾತೆಯನ್ನು ತೆರೆಯಬಾರದು. ಇದರಿಂದ, ಸೈಬರ್ ಜಾಗದಲ್ಲಿ ಸಿಲುಕಿ, ಮಾನ, ಮರ್ಯಾದೆ, ಆರ್ಥಿಕತೆ, ಹಾಗೂ ಜೀವನವನ್ನೇ ಹಾಳು ಮಾಡಿಕೊಳ್ಳಲು ಸಾಧ್ಯವಾಗಲಿದೆ ನಕಲಿ ದೂರವಾಣಿ ಕ್ರಮ ಸಂಖ್ಯೆ ಕರೆ ಬಂದರೆ ತಕ್ಷಣವೇ, ಪೊಲೀಸರಿಗೆ  ಮಾಹಿತಿ ನೀಡಿ ದೂರು ದಾಖಲಿಸಬೇಕು ಎಂದು ಸಮಗ್ರವಾಗಿ ಮಾತನಾಡಿದರು.    

ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮಾಜಿ ಶಾಸಕ, ಬಿಜೆಪಿ ಜಿಲ್ಲಾಧ್ಯಕ್ಷ  ಅರುಣಕುಮಾರ್ ಪೂಜಾರ್, ರಾಜ್ಯ ಉಪಾಧ್ಯಕ್ಷ ಡಾ: ಬಸವರಾಜ ಕೇಲಗಾರ, ಜಿಪಂ ಮಾಜಿ ಸದಸ್ಯ ಸಂತೋಷ್ ಕುಮಾರ್ ಪಾಟೀಲ್, ಕಾಲೇಜು ಪ್ರಾಚಾರ್ಯ, ಡಾ: ಆರ್‌. ವಿ.ಹೆಗಡಾಳ,ಅವರು, ರಾಜಕೀಯ, ಸಮಾಜ, ಮತ್ತು ದೇಶದ ಆಡಳಿತ  ಸುಧಾರಣೆಯಲ್ಲಿ, ಪತ್ರಿಕಾ ರಂಗವು  ಮಾಡುತ್ತಿರುವ ಸೇವಾಕಾರ್ಯ ಕುರಿತಂತೆ ಮಾತನಾಡಿದರು.      

ವೇದಿಕೆಯಲ್ಲಿ ಉಪಸ್ಥಿತರಿದ್ದ ಕಾನಿಪ ಜಿಲ್ಲಾಧ್ಯಕ್ಷ, ನಾಗರಾಜ ಕುರುವತ್ತೇರ, ರಾಜ್ಯ ಕಾರ್ಯದರ್ಶಿ ನಿಂಗಪ್ಪ ಚಾವಡಿ, ರಾಜ್ಯ ಸಮಿತಿ ಸದಸ್ಯ ಪರಸಪ್ಪ ಸತ್ಯಪ್ಪನವರ, ಜಿಲ್ಲಾ ಕಾರ್ಯದರ್ಶಿ ವೀರೇಶ ಮಡ್ಲೊರ, ಕಾಲೇಜು ಒಕ್ಕೂಟದ ಅಧ್ಯಕ್ಷ ಡಾ: ಎಂ. ರಾಜಶೇಖರ​‍್ಪ, ಐಕ್ಯೂ ಎಸಿ ಪ್ರೊ: ಬಿ. ಆರ್‌. ಡಮಳ್ಳಿ, ಸೇರಿದಂತೆ ಮತ್ತಿತರರನ್ನು ಸಂಘದ ಪರವಾಗಿ ಅಭಿನಂದಿಸಿ ಗೌರವಿಸಿ ಸನ್ಮಾನಿಸಲಾಯಿತು.    

ವೇದಿಕೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಮಹಾಂತ ಶೆಟ್ಟರ್, ಜಿಲ್ಲಾ ಉಪಾಧ್ಯಕ್ಷ ಎಸ್‌. ಜಿ. ಮಹಾನುಭಾವಿ ಮಠ, ಪ್ರಧಾನ ಕಾರ್ಯದರ್ಶಿ ಮಂಜುನಾಥ ಹೊಸಪೇಟೆ, ಕೋಶಾಧ್ಯಕ್ಷ ಗುರುರಾಜ ನಾಡಗೇರ್, ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕುಮಾರಿ, ಗಂಗಾ ಅಗಸನಹಳ್ಳಿ  ಪ್ರಾರ್ಥಿಸಿದರು, ಕರಿಯಪ್ಪ ಅರಳಿಕಟ್ಟೆ ಸ್ವಾಗತಿಸಿದರು. ಕೆ.ಎಸ್‌. ನಾಗರಾಜ್ ಪ್ರಾಸ್ತಾನಿಕವಾಗಿ ಮಾತನಾಡಿದರು ಮಂಜುನಾಥ ಕುಂಬಳೂರು, ಜಿ.ವಿ. ದೀಪಾವಳಿ ನಿರೂಪಿಸಿ, ಎಂ ಚಿರಂಜೀವಿ ವಂದಿಸಿದರು. 


ಸುದ್ದಿ ಓದಿ