ರಾಣೆಬೆನ್ನೂರಲ್ಲಿ ಪತ್ರಿಕಾ ದಿನಾಚರಣೆ : ಸಾಧಕ ಗಣ್ಯರ ಅಭಿನಂದನ ಸನ್ಮಾನ
ರಾಣೇಬೆನ್ನೂರು 27 : ಇಲ್ಲಿನ ಎಸ್‌ಜಿಎಂವ್ಹಿ ಕಾಲೇಜು, ಡಾ. ಶಿ. ಮು. ಶ. ಸಭಾಭವನದಲ್ಲಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾ ಘಟಕವು, 2024ನೇ ಸಾಲಿನ ಪತ್ರಿಕಾ ದಿನಾಚರಣೆ ಹಾಗೂ ವಿವಿಧ ಕ್ಷೇತ್ರ ಸಾಧಕ ಗಣ್ಯರ ಹಾಗೂ ಪತ್ರಕರ್ತರ ಅಭಿನಂದನಾ ಸಮಾರಂಭವು ಆಯೋಜಿಸಿತ್ತು. ಹುಬ್ಬಳ್ಳಿಯ ಹಿರಿಯ ಪತ್ರಕರ್ತ ಅರುಣಕುಮಾರ್ ಹಬ್ಬು, ಡಿ. ವೈ. ಎಸ್.ಪಿ, ಡಾ: ಗೀರೀಶ ಭೋಜಣ್ಣನವರ್, ಸಿಪಿಐ ಶಂಕರ, ಪಿ.ರಾಮಯ್ಯ ಪ್ರಶಸ್ತಿ ಪುರಸ್ಕೃತ, ಮನೋಹರ ಮಲ್ಲಾಡದ, ತಾಲೂಕ ಅಧ್ಯಕ್ಷ ಎಸ್.ಟಿ.ವೇದಮೂರ್ತಿ, ಹಾವೇರಿ ಜಿಲ್ಲಾ ಘಟಕದ ಅಧ್ಯಕ್ಷ ನಾಗರಾಜ ಕುರುವತ್ತೇರ, ಉಪಾಧ್ಯಕ್ಷ ಎಸ್.ಜಿ. ಮಹಾನಭಾವಿಮಠ, ರಾಜ್ಯ ಕಾರ್ಯದರ್ಶಿ ನಿಂಗಪ್ಪ ಚಾವಡಿ, ಜಿಲ್ಲಾ ಪ್ರ ಕಾರ್ಯದರ್ಶಿ ವೀರೇಶ ಮಡ್ಲೊರ, ಕಾರ್ಯದರ್ಶಿ ಸಂತೋಷ್ ಮಹಾಂತಶೆಟ್ಟರ ರಾಜ್ಯ ಸಮಿತಿ ಸದಸ್ಯ ಪರಸಪ್ಪ ಸತ್ಯಪ್ಪನವರ, ಕಾಲೇಜಿನ ಪ್ರಾಚಾರ್ಯ, ಡಾ:ಆರ್. ವಿ. ಹೆಗಡಾಳ, ಯೂನಿಯನ್ ಚೇರ್ಮನ್, ಡಾ: ಎಮ್. ರಾಜಶೇಖರ್ಪ, ಐ ಕ್ಯೂ ಎ ಸಿ, ಕೋ ಆರ್ಡಿನೇಟರ್, ಪ್ರೊ: ಬಿ. ಆರ್. ಡಮ್ಮಳ್ಳಿ, ಮತ್ತಿತರರನ್ನು, ಸಂಘಟನೆಯು ಸೇರಿದಂತೆ ನಗರದ ವಿವಿಧ ಸಂಘ ಸಂಸ್ಥೆಗಳು ಮತ್ತು ಮುಖಂಡರು ಹಾರ್ದಿಕವಾಗಿ ಅಭಿನಂದಿಸಿ ಸನ್ಮಾನಿಸಿದರು.
ಮಾಜಿ ಶಾಸಕ, ಅರುಣಕುಮಾರ ಪೂಜಾರ್, ರಾಜ್ಯ ಉಪಾಧ್ಯಕ್ಷ ಡಾ. ಬಸವರಾಜ ಕೇಲಗಾರ, ಯುವ ನಾಯಕ ಸಂತೋಷಕುಮಾರ ಪಾಟೀಲ್, ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ್, ತಾಲೂಕ ಪ್ರ.ಕಾರ್ಯದರ್ಶಿ ಮಂಜುನಾಥ ಹೊಸಪೇಟೆ, ಖಜಾಂಚಿ ಗುರುರಾಜ ನಾಡಗೇರ್, ಉಪಾಧ್ಯಕ್ಷ ಕರಿಯಪ್ಪ ಅರಳಿಕಟ್ಟಿ, ಬಸವರಾಜ ಸರೂರ, ಮುಕ್ತೇಶ ಕೂರಗುಂದಮಠ, ಎಂ. ಚಿರಂಜೀವಿ, ಮಾಣಿಕಲಾಲ್ ಮೇಹರವಾಡೆ, ಶಿವಕುಮಾರ್ ಓಲೇಕಾರ್, ಮಲ್ಲಿಕಾರ್ಜುನ ಕೆಂಚರೆಡ್ಡಿ, ಜಿ.ಹೆಚ್. ನೇಶ್ವಿ, ಸುಮಿತ್ ಮಳಿಯೇ, ಗೀರೀಶ್ ಅಮ್ಮನವರ, ಬಸವರಾಜ ಒಡೆರಹಳ್ಳಿ ವಿಶ್ವನಾಥ ಕುಂಬಳೂರ, ಹಾಲೇಶ ಶಿವಪ್ಪನವರ, ಕೆ.ಎಸ್.ನಾಗರಾಜ್ ಸೇರಿದಂತೆ ಸಂಘದ ಪದಾಧಿಕಾರಿಗಳು, ನಗರದ ಗಣ್ಯರು ಉಪಸ್ಥಿತರಿದ್ದರು.