ಕನ್ನಡ ನಾಡು, ನುಡಿ ಸಂಸ್ಕೃತಿ ಉಳಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ: ಪ್ರಕಾಶ ಪೂಜಾರ
ರಾಣೇಬೆನ್ನೂರು 06: ಕನ್ನಡ ನಾಡು ನುಡಿಯನ್ನು ಉಳಿಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ. ಯುವ ಪೀಳಿಗೆ ಕನ್ನಡ ಕಲೆ ಸಂಸ್ಕೃತಿ ಉಳಿಸಿಕೊಳ್ಳುವಲ್ಲಿ ಇಂತಹ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರು ಭಾಗವಹಿಸಬೇಕು ಮತ್ತು ಕಲಾವಿದರನ್ನ ಪ್ರೋತ್ಸಾಹಿಸಬೇಕೆಂದು ನಗರಸಭಾ ಸದಸ್ಯರ ಪ್ರಕಾಶ ಪೂಜಾರ ಹೇಳಿದರು.
ಡಾ.ಬಿ. ಅಂಬೇಡ್ಕರ್ ನಗರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾವೇರಿ ಹಾಗೂ ಡಾ. ಪಂಡಿತ ಪುಟ್ಟರಾಜ ಗಾನ ಕಲಾ ವೇದಿಕೆ ಮತ್ತು ಡಾ. ಬಿ.ಆರ್.ಅಂಬೇಡ್ಕರ್ ಸೇವಾ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಕನ್ನಡ ನುಡಿ ಸಂಭ್ರಮ ವೇದಿಕೆಯಲ್ಲಿ ಸುಗಮ ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಲಾವಿದರಾದ ಜಯಶ್ರೀ ಎಸ್ ಕಾಳೆ ವಾಲ್ಮೀಕಿ ಕಲಾತಂಡ ಹಾಗೂ ಶ್ರೀಮತಿ ಮಮತಾ ಸಾವಕ್ಕನವರವರ ರಮಾಬಾಯಿ ಕಲಾತಂಡದಿಂದ ಮತ್ತು ಕಲಾವಿದರಾದ ಮುತ್ತುರಾಜ ಸಾವಕ್ಕನವರ, ಶಿಕ್ಷಕರಾದ ಇಸ್ಮಾಯಿಲ್ ರವರು ನಾಡು ನುಡಿಯ ಗೀತೆಗಳು ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಹಾಸ್ಯದ ಮೂಲಕ ನೆರೆದಿದ್ದ ಪ್ರೇಕ್ಷಕರನ್ನ ರಂಜಿಸಿದರು.ಕಾರ್ಯಕ್ರಮದಲ್ಲಿ ಬ್ರಹ್ಮಾನಂದ ಉಜ್ಜೆರ್, ಕ.ರ.ವೇ ಸದಸ್ಯರ ಭಾಷಾ ಹಂಪಾಪಟ್ಟಣ,ಚಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಮಲ್ಲೇಶಪ್ಪ ಮದ್ಲೇರ, ತಾಲ್ಲೂಕ ಅಧ್ಯಕ್ಷ ಬಸವರಾಜ್ ಸಾವಕ್ಕನವರ್, ನಿವೃತ್ತ ಅಬಕಾರಿ ಅಧಿಕಾರಿ ಭರಮಪ್ಪ ಸಾವಕ್ಕನವರ, ವೈದ್ಯ ರಾಜಶೇಖರ ಹೊಸಮನಿ, ಡಾ.ಬಿ.ಆರ್.ಅಂಬೇಡ್ಕರ್ ಸೇವಾ ಸಂಸ್ಥೆಯ ಸಂಸ್ಥಾಪಕ ಶ್ರೀಧರ್ ಸಿ, ಕಲಾವಿದರಾದ ಮಹೇಶ್, ರಮೇಶ ಕುಸಗೂರು, ವಿರೂಪಾಕ್ಷ ಕಿವುಡಣ್ಣನವರ ಹಾಗೂ ನಗರದ ಹಿರಿಯ ಮುಖಂಡರು ಮತ್ತು ಯುವಕರು ಉಪಸ್ಥಿತರಿದ್ದರು.