ಎಸ್ಎಸ್ಎಲ್ಸಿ ಪರೀಕ್ಷೆಗೆ ಸಕಲ ಸಿದ್ಧತೆ: ಬಿಇಓ ಮುಂಜೆ
ಕಾಗವಾಡ 15: ಸನ್ 2020-21ನೇ ವರ್ಷದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕಾಗವಾಡ ತಾಲೂಕಾ ಮಟ್ಟದಿಂದ 2301 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲಪ್ಪಾ ಮುಂಜೆ ಮಾಹಿತಿ ನೀಡಿದರು.ಸೋಮವಾರ ದಿ. 19 ಹಾಗೂ ಗುರುವಾರ ದಿ. 22 ರಂದು ಎರಡು ದಿನ ಪರೀಕ್ಷೆ ಜರುಗಲಿದ್ದು, ಕಾಗವಾಡ ತಾಲೂಕಿನ 9 ಪರೀಕ್ಷಾ ಕೇಂದ್ರಗಳಲ್ಲಿ 1320 ವಿದ್ಯಾರ್ಥಿ ಹಾಗೂ 981 ವಿದ್ಯಾರ್ಥಿನಿಯರು, ಹೀಗೆ ಒಟ್ಟು 2301 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.9 ಕೇಂದ್ರಗಳಲ್ಲಿ ಪರೀಕ್ಷಾ ಯಶಸ್ವಿಗೊಳಿಸಲು 442 ಸಿಬ್ಬಂದಿದವರು ಕಾರ್ಯನಿರ್ವಹಿಸಲಿದ್ದಾರೆ. ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಎಲ್ಲ ಕೇಂದ್ರಗಳಲ್ಲಿ ಆಸನದ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಹಾಗೂ ಆರೋಗ್ಯ ತಪಾಸಣೆ ಕೌಂಟರ್ ಮಾಡಲಾಗಿದೆ.ವಲಯದ ಎಲ್ಲ ವಿದ್ಯಾರ್ಥಿಗಳಿಗೆ ಹೊಸ ಪರೀಕ್ಷೆಯ ಸಂಪೂರ್ಣ ಮಾಹಿತಿ ನೀಡಲಾಗಿದೆ. ಎಲ್ಲ ವಿದ್ಯಾರ್ಥಿಗಳು ಸಂತೋಷದಿಂದ ಪರೀಕ್ಷಾ ಬರೆಯಲು ಸಿದ್ಧರಾಗಿದ್ದಾರೆ. ಕಾಗವಾಡ ತಾಲ್ಲೂಕಿನಲ್ಲಿ ನಡೆಯುವ ಎಸ್ಎಸ್ಎಲ್ಸಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ನೋಡಲ ಅಧಿಕಾರಿಗಳಾಗಿ ಎಸ್.ಬಿ.ಪಾಟೀಲ ಇವರನ್ನು ನೇಮಕಮಾಡಲಾಗಿದೆಯೆಂದು ಬಿಇಓ ಮಲ್ಲಪ್ಪಾ ಮುಂಜೆ ತಿಳಿಸಿದರು.