ಮುಂಜಾಗೃತ ಕ್ರಮಕ್ಕೆ ತಾಲೂಕಾಡಳಿತ ಸಿದ್ಧತೆ ಮಾಡಿಕೊಳ್ಳಿ: ಪಾಟೀಲ
ಇಂಡಿ03: ಕೋವಿಡ್ 3 ನೇ ಅಲೆ ಮತ್ತೆ ವೇಗವಾಗಿ ಹರಡುತ್ತಿದ್ದು ಮುಂಜಾಗೃತವಾಗಿ ತಾಲೂಕಾಡಳಿತ ಸಿದ್ಧತೆ ಮಾಡಿಕೊಳ್ಳಿ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ತಾಲೂಕಾ ಅಧಿಕಾರಿಗಳಿಗೆ ಸೂಚಿಸಿದರು.
ಸೋಮವಾರ ಪಟ್ಟಣದ ಆಡಳಿತ ಸೌಧದಲ್ಲಿ ಕೋವಿಡ್ ಕುರಿತು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಚೆಕ್‌ಪೋಸ್ಟಗಳಲ್ಲಿ ಕಠಿಣ ನಿರ್ಭಂಧ ಹೇರಬೇಕು. ಕಡ್ಡಾಯವಾಗಿ ಎರಡೂ ಲಸಿಕೆ ಪಡೆದ ಮತ್ತು ಕೋವಿಡ್ ಇಲ್ಲ ಎಂಬ ಪ್ರಮಾಣ ಪತ್ರವನ್ನು ಪರೀಶೀಲಿಸಿ ತಾಲೂಕಿನ ಒಳಗಡೆ ಬಿಡಬೇಕು. ಮಹಾರಾಷ್ಟ್ರದಲ್ಲಿ ಕೋವಿಡ್ ವೇಗವಾಗಿ ಹರಡುತ್ತಿದ್ದು, ಅದಕ್ಕೆ ಹೊಂದಿಕೊಂಡೇ ನಾವಿರುವುದರಿಂದ ಆರೋಗ್ಯ ಇಲಾಖೆ ಮತ್ತು ಪೊಲೀಸ್ ಸೇರಿದಂತೆ ಸಂಭಂಧಿಸಿದ ಇಲಾಖೆಯವರು ಕಟ್ಟು ನಿಟ್ಟಾಗಿ ಕಾರ್ಯ ಮಾಡಬೇಕು ಎಂದರು.
ಆರೋಗ್ಯ ಇಲಾಖೆಯ ಅಧಿಕಾರಿ ಡಾ. ಅರ್ಚನಾ ಕುಲಕರ್ಣಿ ಮಾತನಾಡಿ ಈಗಾಗಲೆ ಧೂಳಖೇಡ ಚೆಕ್‌ಪೋಸ್ಟನಲ್ಲಿ 5 ಟೀಂ ಹಾಗೂ ಶಿರಾಡೋಣ ಚೆಕ್‌ಪೋಸ್ಟ ಮತ್ತು ಹಿಂಗಣಿ ಚೆಕ್‌ಪೋಸ್ಟಗಳಲ್ಲಿ ತಲಾ ಎರಡು ಟೀಂ ಮಾಡಿ ಆರ್.ಟಿ.ಪಿ.ಸಿ.ಆರ್. ಚೆಕ್ ಮಾಡಲಾಗುತ್ತಿದೆ ಎಂದು ವಿವರಣೆ ನೀಡಿದರು.
ಡಾ. ರಾಜೇಶ ಕೋಳೆಕರ್ ಮಾತನಾಡಿ ಈಗಾಗಲೆ ನಮ್ಮ ಆಸ್ಪತ್ರ್ರೆಯಲ್ಲಿ ಆಕ್ಸಿಜನ್ ಘಟಕ ಸ್ಥಾಪನೆಯಾಗಿದೆ. ಕೋವಿಡ್‌ಗಾಗಿಯೇ 50 ಆಕ್ಸಿಜನ್ ಬೆಡ್ ಮತ್ತು 10 ಜನರಲ್ ಬೆಡ್ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ತಹಸೀಲ್ದಾರ ಬಸವರಾಜ ಐ.ಈ ಮಾತನಾಡಿ ಅಗತ್ಯವಿರುವ ಲಸಿಕೆ ಮತ್ತು ಡ್ರಗ್ಸಗಳನ್ನು ಈಗಲೆ ತರೆಸಿ ಇಟ್ಟುಕೊಳ್ಳಿ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ತಾಪಂ ಇಓ ಸುನೀಲ ಮದ್ದಿನ್ ಸೇರಿದಂತೆ ಇನ್ನಿತರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.