ಸಿಂಧಗಿ

ಪಾಠಬೋಧನೆ ಪೂರ್ವದಲ್ಲಿ ಪ್ರಶಿಕ್ಷಣಾರ್ಥಿಗಳು ಪಾಠಯೋಜನೆ ಸಿದ್ಧಪಡೆಸಿಕೊಳ್ಳಿ: ಯಡ್ರಾಮಿ

ಪಾಠಬೋಧನೆ ಪೂರ್ವದಲ್ಲಿ ಪ್ರಶಿಕ್ಷಣಾರ್ಥಿಗಳು ಪಾಠಯೋಜನೆ ಸಿದ್ಧಪಡೆಸಿಕೊಳ್ಳಿ: ಯಡ್ರಾಮಿ
ಸಿಂದಗಿ: ಗಬಸಾವಳಗಿ ಗ್ರಾಮದ ಸರಕಾರಿ ಪ್ರೌಢಶಾಲೆಗೆ ಸಿಂದಗಿ ಪದ್ಮರಾಜ ಬಿ.ಈಡಿ. ಕಾಲೇಜಿನ ಪ್ರಶಿಕ್ಷಣಾರ್ಥಿಗಳು ಕಾಣಿಕೆ ನ

ಸಿಂದಗಿ: ವಿದ್ಯಾರ್ಥಿಗಳ ಮಾನಸಿಕ ಸಾಮರ್ಥಕ್ಕೆ ತಕ್ಕಂತೆ ಬೋಧನೆ ಮಾಡುವ ಕೌಶಲ್ಯವನ್ನು ಪ್ರಶಿಕ್ಷಣಾರ್ಥಿಗಳು ಅಳವಡಿಸಿಕೊಳ್ಳಬೇಕು. ಪಾಠಬೋಧನೆ ಪೂರ್ವದಲ್ಲಿ ಪಾಠ ಯೋಜನೆ ಸಿದ್ಧಪಡೆಸಿಕೊಳ್ಳ ಬೇಕು. ಮಕ್ಕಳ ಆಸಕ್ತಿಯನ್ನು ಪಾಠದ ಕಡೆ ಕೇಂದ್ರೀಕರಿಸುವುದಕ್ಕೂ ಸಹಕಾರ ನೀಡುತ್ತದೆ ಎಂದು ಸರಕಾರಿ ಪ್ರೌಢಶಾಲೆಯ ಗಣಿತ ವಿಷಯ ಶಿಕ್ಷಕ, ಸಂಪನ್ಮೂಲ ವ್ಯಕ್ತಿ ಎಂ.ಬಿ. ಯಡ್ರಾಮಿ ಹೇಳಿದರು. 

ತಾಲೂಕಿನ ಗಬಸಾವಳಗಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಸಿಂದಗಿಯ ಪದ್ಮರಾಜ ಬಿ.ಈಡಿ. ಕಾಲೇಜಿನ ಪ್ರಶಿಕ್ಷಣಾರ್ಥಿಗಳು ಆಯೋಜಿಸಿದ ಪಾಠ ಯೋಜನೆಯ ಮುಕ್ತಾಯ ಸಮಾರಂಭದಲ್ಲಿ ಅವರು ಮಾತನಾಡಿದರು. 

ವಿದ್ಯಾರ್ಥಿಗಳ ಪಠ್ಯ ಹಾಗೂ ಪಠ್ಯಪೂರಕ ಚಟುವಟಿಕೆಗಳಲ್ಲಿ ಅವರ ಸಾಮರ್ಥಯವನ್ನು ಗುರುತಿಸುವಲ್ಲಿ ಪಾಠ ಯೋಜನೆ ಮಾನದಂಡವಾಗುತ್ತದೆ. ಹೀಗಾಗಿ ಪ್ರಶಿಕ್ಷಣಾರ್ಥಿಗಳು ಪಾಠಯೋಜನೆ ಸಿದ್ಧಪಡೆಸಿಕೊಂಡು ಪಾಠ ಬೋಧನೆ ಮಾಡಬೇಕು ಎಂದು ಹೇಳಿದರು. 

ಮಕ್ಕಳ ವಯೋಮಾನಕ್ಕಿಳಿದು ಪಾಠಬೋಧನೆ ಮಾಡಬೇಕು. ಆಗ ಪರಿಣಾಮಕಾರಿ ಬೋಧನೆಯಾಗುತ್ತದೆ. ಮಕ್ಕಳಲ್ಲಿ ಕಲಿಕಾ ಮಟ್ಟ ಅಭಿವೃದ್ಧಿಯಾಗುತ್ತದೆ. ಮಕ್ಕಳಿಗೆ ಸಾಂಪ್ರದಾಯಿಕ ಶಿಕ್ಷಣ ನೀಡುವ ಜೊತೆಗೆ ಮೌಲಾಧಾರಿತ ಶಿಕ್ಷಣ ನೀಡುವ ಮೂಲಕ ಅವರಿಗೆ ಮೌಲ್ಯಗಳನ್ನು ತಿಳಿಸಿಕೊಡಬೇಕು. ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಮಾರ್ಗದರ್ಶನ ನೀಡಬೇಕು. ಸರಕಾರಿ ನೌಕರಿ ಸಿಗುತ್ತದೆ ಎಂದು ಶಿಕ್ಷಕ ವೃತ್ತಿ ಆಯ್ಕೆ ಮಾಡಿಕೊಳ್ಳ ಬಾರದು. ಶಿಕ್ಷಕ ವೃತ್ತಿ ಸೇರಿದ ನಂತರ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕ್ರೀಯಾಶೀಲರಾಗಿ ಶಿಕ್ಷಕ ವೃತ್ತಿ ನಿರ್ವಹಿಸಬೇಕು ಎಂದು ಹೇಳಿದರು. 

ಪಾಠ ಬೋಧನೆ ಮಾಡುವ ಜೊತೆಗೆ ಮಕ್ಕಳನ್ನು ವಿಜ್ಞಾನ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸುವಂತೆ ಪ್ರೋತ್ಸಾಹಿಸಿ ಅವರಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸಬೇಕು. ಶಾಲೆಯೆಂಬುದು ಕೇವಲ ಮಗುವಿನ ಅಧ್ಯಯನ ಕೇಂದ್ರ ಮಾತ್ರವಲ್ಲ. ಆತನ ಸಮಗ್ರ ವ್ಯಕ್ತಿತ್ವ ರೂಪಿಸುವ ಕೇಂದ್ರ ಎಂಬುದನ್ನು ಪ್ರಶಿಕ್ಷಣಾರ್ಥಿಗಳು ಅರಿತಿರಬೇಕು. ಕಲಿಕೆಯಲ್ಲಿ ಸ್ವಲ್ಪ ಮಂದಗತಿಯಲ್ಲಿರುವ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಅವರಿಗೆ ಹೆಚ್ಚು ಸಮಯಾವಕಾಶ ನೀಡಿ ಅವರ ಕಲಿಕೆಯ ಮಟ್ಟ ಸುಧಾರಣೆಗೆ ಪ್ರಯತ್ನಗಳು ನಿರಂತರವಾಗಿ ನಡೆಯಬೇಕು. ಮಕ್ಕಳಲ್ಲಿ ಹುದುಗಿರುವ ಪ್ರತಿಭೆಗೆ ಸಾಣೆ ಹಿಡಿಯುವ ಅಥವಾ ಅದಕ್ಕೆ ಸೂಕ್ತ ವೇದಿಕೆ ಕಲ್ಪಿಸಿ ಅವರ ಸಾಧನೆಗೆ ಏಣಿಯಾಗುವ ಅವಕಾಶಗಳು ಕಲ್ಪಿಸಿಕೊಡುವಲ್ಲಿ ಶಿಕ್ಷಕರು ಕಾರ್ಯ ನಿರ್ವಹಿಸಿದಾಗ ಮಾತ್ರ ಮಗುವಿನ ಸರ್ವತೋಮುಖ ಬೆಳವಣಿಗೆಗೆ ಸಾಧ್ಯ ಎಂದು ಹೇಳಿದರು. 

ಮಕ್ಕಳು ಅನುಕರಣಾಶೀಲರು. ಆದ್ದರಿಂದ ಶಿಕ್ಷಕರು ಆದರ್ಶ ಜೀವನ ಅಳವಡಿಸಿಕೊಳ್ಳಬೇಕು. ಉಡುಗೆ ತೊಡುಗೆ, ನಡೆ ನುಡಿಯಲ್ಲಿ ಮೌಲ್ಯಗಳನ್ನು ಅಳವಡಿಸಿಕೊಳ್ಳ ಬೇಕು. ಆಗ ಮಕ್ಕಳಿಗೆ ಮೌಲ್ಯಗಳನ್ನು ಹೇಳಿಕೊಳ್ಳಲು ಸಾಧ್ಯ. ಆಗ ಆದರ್ಶ ಶಿಕ್ಷಕರಾಗಲು ಸಾಧ್ಯ ಎಂದು ಸಲಹೆ ನೀಡಿದರು. 

ಮುಖ್ಯೋಪಾಧ್ಯಾಯಿನಿ ಸುಜಾತಾ ನಾಯಕ, ಶಿಕ್ಷಕರಾದ ಸಂಗಮೇಶ ಪಟ್ಟಣಶೆಟ್ಟಿ, ಮೀನಾಕ್ಷಿ ವಾಘಮೋರೆ, ಶಾಂತಿಲಾಲ ರಾಠೋಡ, ಮಲ್ಲಮ್ಮ ಬಿರಾದಾರ, ಐ.ಎ. ಮಕಾಂದಾರ, ಅಟೆಂಡರ್ ಕೆ.ಎಸ್‌. ತಳವಾರ ಸೇರಿದಂತೆ ವಿದ್ಯಾರ್ಥಿಗಳು, ಸಿಂದಗಿಯ ಪದ್ಮರಾಜ ಬಿ.ಈಡಿ. ಕಾಲೇಜಿನ ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು. 

ಸುದ್ದಿ ಓದಿ