ಭಾರತ ಐಕ್ಯತಾ ಪಾದಯಾತ್ರೆಯ ಪೂರ್ವಭಾವಿ ಸಭೆ
ಸಿಂದಗಿ: ರಾಷ್ಟ್ರಿಯ ಕಾಂಗ್ರೆಸ ಪಕ್ಷದ ನಾಯಕ ರಾಹುಲ್ಗಾಂಧಿ ನೇತೃತ್ವದಲ್ಲಿ ನಡೆಯಲ್ಲಿರುವ ಭಾರತ ಐಕ್ಯತಾ ಪಾದಯಾತ್ರೆಯ ಪೂರ್ವಭಾವಿ ಸಭೆಯನ್ನು ಪಟ್ಟಣದ ಬ್ಲಾಕ ಕಾಂಗ್ರೆಸ ಸಮಿತಿ ಕಾರ್ಯಾಲಯದಲ್ಲಿ ಕೆಪಿಸಿಸಿ ಪ್ರದಾನ ಕಾರ್ಯದರ್ಶಿಗಳು ಹಾಗೂ ಸಿಂದಗಿ ವಿಧಾನಸಭಾ ಮತಕ್ಷೇತ್ರದ ಉಸ್ತುವಾರಿ ವಿಜಯಸಿಂಗ್ ಧರ್ಮಸಿಂಗ್ ರವರ ನೇತೃತ್ವದಲ್ಲಿ ನಡೆಸಲಾಯಿತು.
ನಗರದ ಕೆಪಿಸಿಸಿ ಕಾರ್ಯಾಲಯದಲ್ಲಿ ಹಮ್ಮಿಕೊಂಡ ರಾಹುಲ ಗಾಂಧಿಯವರ ಕನಸಿನ ಭಾರತದ ಭಾರತ ಐಕ್ಯತಾ ಪಾದಯಾತ್ರೆಯನ್ನು ಸೆ.7 ರಂದು ಕನ್ಯಾಕುಮಾರಿಯಿಂದ ಪ್ರಾರಂಭಿಸಿದ್ದಾರೆ. ಈ ಪಾದಯಾತ್ರೆಯು ಕಾಶ್ಮೀರದವರೆಗೆ ಇರುತ್ತದೆ. ಆದ್ದರಿಂದ ಸೆ.30 ನಮ್ಮ ರಾಜ್ಯದ ಗುಂಡ್ಲುಪೇಟೆಗೆ ಭಾರತ ಐಕ್ಯತಾ ಪಾದಯಾತ್ರೆ ತಲುಪುವದು. ಅಲ್ಲಿಂದ ರಾಯಚೂರ ಜಿಲ್ಲೆಯವರೆಗೆ ಭಾರತ ಐಕ್ಯತಾ ಪಾದಯಾತ್ರೆಯ ಕಾಯಕ್ರಮ ಜರಗುವದು. ನಮ್ಮ ರಾಜ್ಯದಲ್ಲಿ ಸುಮಾರು 550 ಕಿ.ಮೀ ರಾಹುಲಗಾಂಧಿಜೀ ರವರು ಹೆಜ್ಜೆ ಹಾಕುತ್ತಾ ನಮ್ಮ ರಾಜ್ಯದ ಮುಖಂಡರು, ಕಾರ್ಯಕರ್ತರೊಂದಿಗೆ ಪಕ್ಷದ ಸಂಘಟನೆ ಕುರಿತು ಸಮಾಲೋಚನೆ ಮಾಡುವರು. ಆದ್ದರಿಂದ ಸಿಂದಗಿ ವಿಧಾನಸಭಾ ಮತಕ್ಷೇತ್ರದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ರಾಯಚೂರ ಜಿಲ್ಲೆಗೆ ಭಾಗವಹಿಸಿ ರಾಹುಲಗಾಂಧಿ ರವರನ್ನು ಸ್ವಾಗತಿಸಿ ಈ ಪಾದಯಾತ್ರೆಗೆ ಶೋಬೆ ತಂದುಕೊಡಬೇಕೆಂದು ಈ ಸಭೆಯಲ್ಲಿ ನೇತೃತ್ವ ವಹಿಸಿದಂತ ವಿಜಯಸಿಂಗ ಧರ್ಮಸಿಂಗ ರವರು ಸಿಂದಗಿ ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಸಿಂದಗಿ ವಿಧಾನಸಭಾ ಮತಕ್ಷೇತ್ರದಿಂದ ಸುಮಾರು 5000 ಜನಸಂಖ್ಯೆ ರಾಹುಲ್ ಗಾಂಧಿರವರ ಭಾರತ ಐಕ್ಯತಾ ಪಾದಯಾತ್ರೆಗೆ ಬಾಗವಹಿಸಲಾಗುವದೆಂದು ಮುಖಂಡರು ಕಾರ್ಯಕರ್ತರೊಂದಿಗೆ ಚರ್ಚಿಸಿ ತಿರ್ಮಾನಿಸಲಾಗಿದೆಂದು ಅಧ್ಯಕ್ಷತೆ ವಹಿಸಿದ ವಿಠ್ಠಲ ಜಿ ಕೊಳ್ಳುರ ರವರು ಮಾತನಾಡಿದರು. ನಂತರ ಮಾಜಿ ಶಾಸಕ ಶರಣಪ್ಪ ಟಿ ಸುಣಗಾರ, ಅಶೋಕ ಮನಗೂಳಿ, ಮಲ್ಲಣ ಸಾಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಆಲಮೇಲ ಬ್ಲಾಕ್ ಕಾಂಗ್ರೆಸ ಸಮತಿ ಅಧ್ಯಕ್ಷರಾದ ಅಯುಬ ದೇವರಮನಿ, ಮಹಿಳಾ ಅಧ್ಯಕ್ಷರಾದ ಶಾರದಾ ಬೆಟಗೇರಿ, ಕೆಪಿಸಿಸಿ ಸದಸ್ಯ ಮುಸ್ತಾಕ ಮುಲ್ಲಾ, ಶಿವನಗೌಡ ಬಿರಾದಾರ, ಸಿದ್ದಣ್ಣ ಹಿರೇಕುರಬರ, ಹಾಸೀಮ್ಪೀರ ಆಳಂದ, ಎನ್.ಆರ್.ತಿವಾರಿ, ರಾಜಶೇಖರ ಕುಚಬಾಳ, ನಿಂಗಣ್ಣ ಚಟ್ಟಿ, ಯಲ್ಲು ಕೆರಕಿ, ಭೀಮು ವಾಲಿಕಾರ, ಕೆಂಚಪ್ಪ ಕತ್ನಳ್ಳಿ, ದೇವಿಂದ್ರ ಪೂಜಾರಿ, ಸಾದಿಕ ಸುಬಂಡ, ಜೈಭೀಮ್ ನಾಯ್ಕೋಡಿ, ಬಂದೆನಮಾಜ ಸೌದಾಗಾರ, ಮಹಿಬೂಬ ಕಣ್ಣಿ, ರಾಮಚಂದ್ರ ಕಲ್ಬುರ್ಗಿ, ಸಂತೋಷ ಹರನಾಳ, ಶಫೀಅಹ್ಮದ ಬಿಜಾಪೂರ, ಎಸ್.ಬಿ.ಪಾಟೀಲ, ಶರಣಪ್ಪವಾರದ, ಚನ್ನುವಾರದ, ಸುರೇಶಪುಜಾರಿ, ಎನ್.ಬಿ.ಆಲಗೂರ, ಎಮ್.ಎಸ್.ಬಿರಾದಾರ, ಎಸ್.ಕೆ.ಪೂಜಾರಿ, ಮಹೇಶ ಮನಗೂಳಿ, ಸಾಯಬಣ್ಣ ಪೂರದಾಳ, ರಾಜಶೇಖರ ಅಮಗೋಳ, ಸಂಗನಬಸ್ಸು ಯಾಳವಾರ, ವಾಯ್.ಸಿ.ಮಯೂರ, ಚಂದ್ರಕಾಂತ ಸಿಂಗೆ, ಮಡ್ಡೆಪ್ಪ ಸೊನ್ನದ, ಪರಸುರಾಮ ಕಾಂಬಳೆ, ರಮೇಶ ಗುಬ್ಬೇವಾಡ, ಮಲ್ಲು ಸಾವಳಸಂಗ, ರಾಮಚಂದ್ರ ರಾಠೋಡ, ಖಾದಿರ ಬಂಕಲಗಿ, ಅಮಿತ್ ಚವ್ಹಾಣ, ವಿಠೋಲ ಸೊಂಪುರ, ಸಂಗನಗೌಡ ಪಾಟೀಲ, ಜಯಶ್ರೀ ಹದ್ನೊರ, ಅಂಬಿಕಾ ಯಾಳವಾರ, ರಾಮಗೊಂಡ ಖೆಡಗಿ, ಮಾಳು ಸೊನ್ನದ, ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.