ಇಂಡಿ

...ತಾಲೂಕಾಚರಣೆ ಜಿಲ್ಲಾ ಮಟ್ಟದ ಆಚರಣೆಯನ್ನು ಮೀರಿಸುವಂತಿರಲಿ ; ಶಾಸಕ ಯಶವಂತರಾಯಗೌಡ ಪಾಟೀಲ ಕರೆ: ತಾಲೂಕಾ ಮಟ್ಟದ ಅಧಿಕಾರಿಗಳ ಪೂರ್ವಭಾವಿ ಸಭೆ .,.;

...ತಾಲೂಕಾಚರಣೆ ಜಿಲ್ಲಾ ಮಟ್ಟದ ಆಚರಣೆಯನ್ನು ಮೀರಿಸುವಂತಿರಲಿ ; ಶಾಸಕ ಯಶವಂತರಾಯಗೌಡ ಪಾಟೀಲ ಕರೆ: ತಾಲೂಕಾ ಮಟ್ಟದ ಅಧಿಕಾರಿಗಳ ಪೂರ್ವಭಾವಿ ಸಭೆ .,.;

ಲೋಕದರ್ಶನ ವರದಿ 


ಇಂಡಿ 07: ನಾವು ಇಂದು 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹೊಸ್ತಿಲಲ್ಲಿದ್ದು ಅದಕ್ಕಾಗಿ ತಾಲೂಕಾ ಆಡಳಿತ ಇದೇ ಅ.13 ರಿಂದ ಅ.15ರವರೆಗೆ 75ನೆ ಅಮೃತ ಮಹೋತ್ಸವ ಕಾರ್ಯಕ್ರಮವು ವಿಭಿನ ರೀತಿಯಲ್ಲಿ ಆಚರಿಸುವ ಮೂಲಕ ಜಿಲ್ಲಾ ಮಟ್ಟದಲ್ಲಿ ಆಚರಣೆ ಮಾಡುವ ಕಾರ್ಯಕ್ರಮ ಮೀರಿಸುವಂತಾಗಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.  

ಶನಿವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ 75ನೇ ಸ್ವಾತಂತ್ರೊತ್ಸವದ ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಏರಿ​‍್ಡಸಿದ ತಾಲೂಕಾ ಮಟ್ಟದ ಅಧಿಕಾರಿಗಳ ಪೂರ್ವಭಾವಿ ಸಭೆಯ ಅಧ್ಯಕ್ಷೆತೆವಹಿಸಿ ಅವರು ಮಾತನಾಡಿದರು. 

ಈ  ದೇಶದ ಸ್ವಾತಂತ್ರಸ್ವಾತಂತ್ರಕ್ಕಾಗಿ ಎಷ್ಟೋ ಜನ ನಮ್ಮ ಮಹಾನ ನಾಯಕರ ತ್ಯಾಗ ಬಲಿದಾನದ ಫಲದಿಂದಾಗಿ ದೇಶಕ್ಕೆ ಸ್ವಾತಂತ್ರ್ಯ ದೊರಕಿದೆ. ಮೊದಲಿಗೆ ಅ.13 ರಂದು ನಗರದಲ್ಲಿ ಜಾತಾ ಹಮ್ಮಿಕೊಳ್ಳುವ ಮೂಲಕ ಸ್ವಾತಂತ್ರಕ್ಕಾಗಿ ಹೊರಾಡಿದ ನಮ್ಮ ಪುರ್ವಾಜರನ್ನು ನೆನಪಿಸುವಂತಾದಾಗ ಮಾತ್ರ ಇದಕ್ಕೆ ಒಂದು ಬೆಲೆ ಬರುತ್ತದೆ. ಈ ಮೂರು ದಿನಗಳ ಕಾಲ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಅಯ್ಯೋಜನೆ ಮಾಡಬೇಕು. ಆ ನಿಟ್ಟಿನಲ್ಲಿ ತಾಲೂಕಾ ಆಡಳಿತ ಸ್ಥಳಿಯ ಎಲ್ಲ ಸಂಘ, ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಿನೂತನವಾಗಿ ಕಾರ್ಯಕ್ರಮ ರೂಪಿಸಬೇಕು. ಅಮೃತಮಹೋತ್ಸವ ಕಾರ್ಯಕ್ರಮವು ಜಿಲ್ಲಾಮಟ್ಟಕ್ಕೆ ಹೊಲಿಕೆಯಾಗುವ ರೀತಿಯಲ್ಲಿ ಆಚರಣೆ ಮಾಡೋಣ. ಜಿಲ್ಲೆಯಲ್ಲಿ ಇಂಡಿ ತಾಲೂಕಿನಲ್ಲಿ ಅಯ್ಯೋಜನೆ ಮಾಡಿರುವ ಅಮೃತಮಹೋತ್ಸವ ಕಾರ್ಯಕ್ರಮ ಮಾದರಿಯಾಗಿರಬೇಕು. ಈ ಸಂಭ್ರಮಾಚರಣೆಯಲ್ಲಿ ತಾಲೂಕಿನ ಪ್ರತಿಯೊಬ್ಬರು ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಯಶಶ್ವಿಯಾಗಿ ವಿನೂತನ ರೀತಿಯಲ್ಲಿ ಸಂಭ್ರಮ ಸಡಗರದಿಂದ ಆಚರಿಸುವಂತಾಗಬೇಕು ಎಂದು ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡಿದರು. 

ತಹಶೀಲ್ದಾರ ನಾಗಯ್ಯ ಹಿರೇಮಠ ಮಾತನಾಡಿದರು, ಇಇ ಮನೋಜಕುಮಾರ ಗಡಬಳ್ಳಿ, ತಾಪಂ ಇಒ ಸುನೀಲ ಮದ್ದಿನ, ಎಇಇ ಎಸ್‌.ಆರ್‌. ರುದ್ರವಾಡಿ, ದಯಾನಂದ ಮಠ, ಬಿ.ಜೆ.ಇಂಡಿ, ಸಿಡಿಪಿಒ ಸುಮಂಗಲಾ ಹಿರೇಮನಿ, ಡಾ.ಅರ್ಚನಾ ಕುಲಕರ್ಣಿ,ಶಸಾಪ ಅಧ್ಯಕ್ಷ ಆರ್‌.ವಿ.ಪಾಟೀಲ, ರಾಮಸಿಂಗ ಕನ್ನೊಳ್ಳಿ, ಬಿಇಒ ವಸಂತ ರಾಠೋಡ, ಪುರಸಭೆ ಮುಖ್ಯಾಧಿಕಾರಿ ಲಕ್ಷಿ-್ಮಶ, ಬಸವರಾಜ ಗೊರನಾಳ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಸಂಘ, ಸಂಸ್ಥೆಯ ಮುಖ್ಯಸ್ಥರು ಸಭೆಯಲ್ಲಿ ಇದ್ದರು. 


ಸುದ್ದಿ ಓದಿ