ಸೆ.11ರಂದು ಪಂಚಮಸಾಲಿ ಸಮಾಜದ ಪೂರ್ವಭಾವಿ ಸಭೆ
ಸಿಂದಗಿ : ನಗರದ ಬಸವ ಮಂಟಪದಲ್ಲಿ ಸೆ.11ರಂದು ಮಧ್ಯಾಹ್ನ 2:30 ಗಂಟೆಗೆ ಪಂಚಮಸಾಲಿ ಸಮಾಜದ ವತಿಯಿಂದ ಮಹಾಮಾತೆ, ವೀರರಾಣಿ ಕಿತ್ತೂರ ಚನ್ನಮ್ಮ ತಾಯಿಯ ವೃತ್ ನಿರ್ಮಾಣ ಹಾಗೂ ಪ್ರಗತಿಯ ಕುರಿತು ಸಮಾಜದ ಮುಖಂಡ ಅಶೋಕ ಮನಗೂಳಿ ಅವರ ನೇತೃತ್ವದಲ್ಲಿ ಸಭೆ ಜರುಗಲಿದ್ದು, ಈ ಸಭೆಯಲ್ಲಿ ತಾಲೂಕಿನ ಹಿರಿಯರು, ಯುವಕರು, ಹಾಗೂ ಹಿತೈಷಿಗಳು ಪಾಲ್ಗೊಳ್ಳಬೇಕು ಎಂದು ಪಂಚಮಸಾಲಿ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಹಂಗರಗಿ ಹಾಗೂ ಪ್ರಧಾನ ಕಾರ್ಯದರ್ಶಿ ಆನಂದ ಶಾಬಾದಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.