ಇಂಡಿ

ಬಿಜೆಪಿ ಪದಾಧಿಕಾರಿ, ಕಾರ್ಯಕರ್ತರ ಪೂರ್ವಭಾವಿ ಸಭೆ

ಬಿಜೆಪಿ ಪದಾಧಿಕಾರಿ, ಕಾರ್ಯಕರ್ತರ ಪೂರ್ವಭಾವಿ ಸಭೆ

ಇಂಡಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನ ಹಿನ್ನೆಲೆಯಲ್ಲಿ ಇಂದಿನಿಂದ (ಸೆ.17)ಅ.2ರವರೆಗೆ ಬಿಜೆಪಿ ಸೇವಾ ಪಾಕ್ಷಿಕ ಕಾರ್ಯಕ್ರಮವನ್ನು ತಾಲೂಕಿನಲ್ಲಿ ಹಮ್ಮಿಕೊಳ್ಳಲು ತಿರ್ಮಾನಿಸಲಾಗಿದೆ ಎಂದು ಇಂಡಿ ಮಂಡಲ ಪ್ರಧಾನ ಮಲ್ಲಿಕಾರ್ಜುನ ಕಿವಡೆ ಹೇಳಿದರು.  

ಗುರುವಾರ ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಬಿಜೆಪಿ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. 

ಜಿಲ್ಲೆಯ ಮಂಡಲ ಪ್ರಭಾರಿ ರಾಜು ಪೂಜಾರಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರಕಾರಗಳ ಬಗ್ಗೆ ಜನರಿಗೆ ಕಾರ್ಯಕರ್ತರು ತಿಳಿ ಹೇಳ ಬೇಕೆಂದು ಕೇಳಿಕೊಂಡರು.  

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ದಯಾಸಾಗರ ಪಾಟೀಲ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ  ಮಾತನಾಡಿ, ಆರೋಗ್ಯ ಶಿಬಿರ, ಗಿಡನೆಡುವ ಕಾರ್ಯಕ್ರಮ, ಸ್ಚಚ್ಛತಾ ಕಾರ್ಯಕ್ರಮ, ಜೀವ ಲಸಿಕಾ ಅಭಿಯಾನ, ಮೋದಿ ಅವರ ಜೀವನ ಚರಿತ್ರೆ, ರಕ್ತದಾನ ಶಿಬಿರ, ಕಮಲೋತ್ಸವ  ಕಾರ್ಯಕ್ರಮ, ಫಲಾನುಭವಿಗಳ ಸಭೆ, ಅರಳಿಮರ ನೆಡುವುದು, ಅಮೃತ ಸರೋವರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.  

ಸಿದ್ದಲಿಂಗ ಹಂಜಗಿ, ರಾಜ್ಯ ಓಬಿಸಿ ಸದಸ್ಯ ಶೀಲವಂತ ಉಮರಾಣಿ, ಅನೀಲ ಜಮಾದಾರ, ಮುತ್ತು ದೇಸಾಯಿ, ಪುಟ್ಟುಗೌಡ ಪಾಟೀಲ, ಶಂಕರಗೌಡ ಪಾಟೀಲ, ಅನೀಲಗೌಡ ಬಿರಾದಾರ, ರಮೇಶ ಧರೆಣ್ಣನವರ, ಬುದ್ದುಗೌಡ ಪಾಟೀಲ, ಶ್ರೀನಿವಾಸ ಕಂದಗಲ್ಲ, ರಾಜಶೇಖರ ಯರಗಲ್ಲ, ಧರ್ಮು ಮದರಖಂಡಿ, ವಿಜಯಲಕ್ಷ್ಮೀ ರೂಗಿಮಠ, ಸುನಂದಾ ವಾಲಿಕಾರ, ಸುನಂದ ಗಿರಣಿವಡ್ಡರ ಮತ್ತಿತರಿದ್ದರು.  


ಸುದ್ದಿ ಓದಿ