ಪ್ರತಿಭಾ ಉತ್ಸವ ಚಟುವಟಿಕೆ ಕಾರ್ಯಕ್ರಮ
ರಾಣಿಬೆನ್ನೂರ 12: ಉಡುಗೆ ತೊಡಿಗೆಗಳು ಭಾರತೀಯ ಸಂಸ್ಕೃತಿ ಪ್ರತೀಕವಾಗಿವೆ. ಆಧುನಿಕ ಭರಾಟೆಯಲ್ಲಿ ನಮ್ಮ ತನವನ್ನು ಮರೆಯಬಾರದು. ಮರೆತರೆ ಅದು ನಮ್ಮ ಸಂಸ್ಸೃತಿಗೆ ಮಾರಕವಾಗಲಿದೆ ಎಂದು ಅಮೃತ ವರ್ಷಿಣಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪಿ.ಕೆ. ಪ್ರಕಾಶರಾವ ಹೇಳಿದರು. ತಾಲೂಕಿನ ಕೊಡಿಯಾಲ ಗ್ರಾಮದ ಅಮೃತ ವರ್ಷಿಣಿ ವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ವಿದ್ಯಾರ್ಥಿಗಳಿಗೆ ಪ್ರತಿಭಾ ಉತ್ಸವ ಚಟುವಟಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಮಕ್ಕಳಲ್ಲಿ ಅಡಗಿದ ಪ್ರತಿಭೆಯನ್ನು ಗುರುತಿಸಿ ಪ್ರದರ್ಶಿಸುವಂತೆ ಪ್ರೋತ್ಸಾಹಿಸಲಾಗಿದೆ ಇದರ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು.
ಮಕ್ಕಳು, ಸಂಗೀತ, ನೃತ್ಯ, ಏಕಪಾತ್ರಾಭಿನಯ, ರಂಗೋಲಿ, ಲಘು ಆಹಾರತಯಾರಿ, ಕರಕುಶಲತೆ, ಭರತನಾಟ್ಯ, ಹಿರಣ್ಯಕಷಿಪು ಮತ್ತು ಭಕ್ತಪ್ರಹ್ಲಾದ ಪಾತ್ರಾಭಿನಯ ಹೀಗೆ ಹಲವು ಪ್ರತಿಭೆಗಳನ್ನು ಪ್ರದರ್ಶಿಸಿರುವುದು ನಮಗೆ ಸಂತೃಪ್ತಿ ತಂದಿದೆ ಎಂದರು. ಪ್ರಾಂಶುಪಾಲೆ ಚೇತನಾ ರಾವ್, ಮುಖ್ಯಶಿಕ್ಷಕಿ ಫೌಜಿಯಾ ಬಾನು ಹಾಗೂ ಸಹಶಿಕ್ಷಕಿಯರು, ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.