ಕಾಗವಾಡ

ಪ್ರತಿಭಾ ಶಿರಹಟ್ಟಿ ಶಾಲೆಗೆ ಪ್ರಥಮ, ವಲಯಕ್ಕೆ ನಾಲ್ಕನೇ, ರಾಜ್ಯಕ್ಕೆ 7ನೇ ರಾ​‍್ಯಂಕ್

ಪ್ರತಿಭಾ ಶಿರಹಟ್ಟಿ ಶಾಲೆಗೆ ಪ್ರಥಮ, ವಲಯಕ್ಕೆ ನಾಲ್ಕನೇ, ರಾಜ್ಯಕ್ಕೆ 7ನೇ ರಾ​‍್ಯಂಕ್

ಶೇಡಬಾಳ 22: ಕಾಗವಾಡ ತಾಲೂಕಿನ ಶಿರಗುಪ್ಪಿಯ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಗೆ ಈ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೇಯಲ್ಲಿ ಶೇ. 96.22 ರಷ್ಟು ಫಲಿತಾಂಶ ದೊರಕಿದೆ. 

ಪ್ರತಿಭಾ ಶಿರಹಟ್ಟಿ 625 ರ ಪೈಕಿ 619 ಅಂಕ ಪಡೆದು ಶಾಲೆಗೆ ಪ್ರಥಮ, ಕಾಗವಾಡ ವಲಯಕ್ಕೆ ನಾಲ್ಕನೇ ರಾ​‍್ಯಂಕ್ ಹಾಗೂ ರಾಜ್ಯಕ್ಕೆ 7ನೇ ರಾ​‍್ಯಂಕ್ ಪಡೆದಿದ್ದಾಳೆ. ಸೃಷ್ಠಿ ಪಾಟೀಲ 625 ರ ಪೈಕಿ 617 ಅಂಕ ಪಡೆದು ಶಾಲೆಗೆ ದ್ವೀತಿಯ ಹಾಗೂ ಕುಮಾರ ನರಸಗೌಡಾ ಚೌಗುಲೆ 625 ಪೈಕಿ 614 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ. ಅದಲ್ಲದೇ ಶಿರಗುಪ್ಪಿ ವಲಯದ ಮೂರು ಕ್ರಮಾಂಕಗಳು ಶಾಲೆಗೆ ಲಭಿಸಿದ್ದು, ಕ್ರಮವಾಗಿ ಪ್ರತೀಭಾ ಶಿರಹಟ್ಟಿ, ಸೃಷ್ಠಿ ಪಾಟೀಲ ಮತ್ತು ನರಸಗೌಡಾ ಪಾಟೀಲ ಪ್ರಥಮ, ದ್ವೀತಿಯ ಹಾಗೂ ತೃತೀಯ ಸ್ಥಾನ ಪಡೆದು ಶಾಲೆಯ ಹಾಗೂ ಶಿರಗುಪ್ಪಿ ಗ್ರಾಮದ ಕೀರ್ತಿ ಹೆಚ್ಚಿಸಿದ್ದಾರೆ.  

ಫಲಿತಾಂಶಕ್ಕೆ ಕಠಿಣ ಪರಿಶ್ರಮ ಮಾಡಿರುವ ವಿದ್ಯಾರ್ಥಿಗಳಿಗೆ, ಶಾಲಾ ವಿಷಯ ಶಿಕ್ಷಕರಿಗೆ, ಪಾಲಕರಿಗೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ರಾಜು ಶೆಟ್ಟಿ ಹಾಗೂ ಮುಖ್ಯೋಪಾದ್ಯಾಪಕರು ಅಭಿನಂದಿಸಿದ್ದಾರೆ. 


ಸುದ್ದಿ ಓದಿ