ರಾಣೆಬೆನ್ನೂರ

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ರಾಣಿಬೆನ್ನೂರು 18: ಬೆಳಕಿಲ್ಲದ ಹಾದಿಯಲ್ಲಿ ಸಾಗಬಹುದು ಆದರೆ ಕನಸಿಲ್ಲದೆ ಹಾದಿಯಲ್ಲಿ ಸಾಗಲು ಕಷ್ಟ ಎಂಬಂತೆ ಕನಸುಗಳನ್ನು ನನಸು ಮಾಡಿಕೊಳ್ಳಲು ಶ್ರಮ ಅಗತ್ಯ. ನಿಮ್ಮ ಕನಸುಗಳಿಗೆ ಪಾಲಕರು, ಸಮಾಜ ಬೆನ್ನೆಲಬಾಗಿರುತ್ತದೆ. ಕಳ್ಳರಿಂದ ಕದಿಯಲಾಗದ, ಅಣ್ಣ ತಮ್ಮಂದಿರಿಂದ ಹಂಚಲಾಗದ ಇನ್ನೊಬ್ಬರಿಗೆ ಹಂಚಿದಷ್ಟು ಹೆಚ್ಚಾಗುವ ವಿದ್ಯೆಯೇ ಸಂಪತ್ತು ಎಂದು ಡಾ. ಚಾಮರಾಜ ಕಮ್ಮಾರ ಹೇಳಿದರು.  

ಇಲ್ಲಿನ ಉಮಾಶಂಕರ ನಗರದಲ್ಲಿರುವ ವಿಶ್ವವಿಭು ರೇಕಿ ಧ್ಯಾನಪೀಠ (ಆಧ್ಯಾತ್ಮ ಶಕ್ತಿ ಉಪಚಾರ ಕೇಂದ್ರ) ದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವಕರ್ಮ ಬ್ರಾಹ್ಮಣ ಸಮಾಜದ 2024 ರ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.  

ಪ್ರತಿಭಾವಂತ ವಿದ್ಯಾರ್ಥಿಗಳು ಎಷ್ಟೇ ಕಷ್ಟ ಬಂದರೂ ಅವುಗಳನ್ನು ಎದುರಿಸಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಬೇಕು. ಉಚ್ಚ ಶಿಕ್ಷಣವನ್ನು ಪಡೆದುಕೊಂಡು ಉತ್ತಮ ಸ್ಥಾನಮಾನಗಳನ್ನು ಪಡೆದು ಸಮಾಜ ಮೇಲೆ ಕಳಕಳಿಯನ್ನಿಟ್ಟುಕೊಂಡು ಸೇವೆಯನ್ನು ಮಾಡುವಂತಹ ಗುಣಗಳನ್ನು ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಅತಿ ಹೆಚ್ಚು ಅಂಕಗಳಿಸಿ ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಆಚಾರ್ಯ ಮೌನೇಶ್ವರ ಗುರೂಜೀ ಯವರ ಕಾರ್ಯ ಶ್ಲ್ಯಾಘನೀಯ ಎಂದರು.  

ವಿಶ್ವವಿಭು ರೇಕಿ ಧ್ಯಾನಪೀಠದ ಆಚಾರ್ಯ ಮೌನೇಶ್ವರ ಗುರೂಜೀ ಮಾತನಾಡಿ, ವಿಶ್ವಕರ್ಮ ಪರಂಪರೆ ಎಂದರೆ ಕೇವಲ ಒಂದು ಜಾತಿಯ ಪರಂಪರೆಯಲ್ಲ. ಸ್ವಯಂಭೂ ವಿಶ್ವಕರ್ಮನ ಪರಂಪರೆ. ಮನ್ವಾದು ಪಂಚ ಬ್ರಹ್ಮರ್ಷಿಗಳ ಪರಂಪರೆ, ಪಂಚ ವಿಜ್ಞಾನಗಳ ಪರಂಪರೆ. ನಾವೇಲ್ಲರೂ ವಿಶ್ವಕರ್ಮನ ಆರಾಧಕರಾಗಿರುವುದರಿಂದ ವೈಶ್ವಕರ್ಮಣರು. ಸ್ವಯಂಭೂ ವಿಶ್ವಕರ್ಮನ ಮುಖೋದ್ಧವರಾದ ಪಂಚಬ್ರಹ್ಮರ್ಷಿಗಳು ಮತ್ತು ಪಂಚ ಶಿಲ್ಪರ್ಷಿಗಳಗೋತ್ರ ಪರಂಪಂರೆಯಲ್ಲಿ ಬಂದಿರುವುದರಿಂದ ನಾವು ಬ್ರಾಹ್ಮಣರು ಎಂದರು.  

ಸೂಪ್ತ ಜ್ಞಾನದ ಮೂಲವೇ ಅಂತರ್ಮನಸ್ಸು. ಅದನ್ನು ಪ್ರಕಟ ಪಡಿಸಲು ಸೂಕ್ತವಾದ ಪರಿಸರ, ಪ್ರಚೋದನೆ ಮತ್ತು ಪ್ರೋತ್ಸಾಹಗಳು ಲಭಿಸಿದಾಗ ವಿವಿಧ ಮಾಧ್ಯಮಗಳ ಮೂಲಕ ಪ್ರಕಟವಾಗಬಲ್ಲವು. ವ್ಯಕ್ತಿತ್ವದಲ್ಲಿ ವಿಕಾಸ ಮತ್ತೆ ಕೆಲವರಿಗೆ ಸಾಹಿತ್ಯದಲ್ಲಿ.ಮತ್ತೆ ಕೆಲವರಿಗೆ ಚಿತ್ರಕಲೆಯಲ್ಲಿ ಮತ್ತೆ ಕೆಲವರಿಗೆ ತಾಳವಾಧ್ಯಗಳನ್ನು ನುಡಿಸುವುದರಲ್ಲಿ ಮತ್ತೆ ಕೆಲವರಿಗೆ ಸಂಶೋಧನೆಯಲ್ಲಿ ಮತ್ತೆ ಕೆಲವರಿಗೆ ವಿಜ್ಞಾನದಲ್ಲಿ ಆಸಕ್ತಿಗಳಿರುತ್ತವೆ.ಆಯಾ ವಿಷಚಿುದಲ್ಲಿ ನಿರಂತರವಾಗಿ ಚಿಂತನೆ ಮಾಡಿ ಸಾಧನೆಗಳ ಮೂಲಕ ತಮ್ಮಲ್ಲಿರುವ ಜ್ಞಾನ ಶಕ್ತಿಗೆ ತಮಗೆ ಇಷ್ಟವಿರುವ ಮಾಧ್ಯಮಗಳ ಮೂಲಕ ಅಭಿವ್ಯಕ್ತಿಗೊಳಿಸಿ ಜನತೆಯ ಹೃನ್ಮನಗಳಲ್ಲಿ ಆಳವಾಗಿ ಇಳಿದು ಪ್ರತಿಭಾ ಪ್ರದರ್ಶನ ಮಾಡಿ ಆತ್ಮಾನಂದವನ್ನೋ ಕೊಡಬಲ್ಲರೋ ಅಂತಹವರನ್ನು ಪ್ರತಿಭಾವಂತರೆಂದು ಕರೆಯಲಾಗುತ್ತದೆ ಎಂದರು.  

ಇದೇ ಸಂದರ್ಭದಲ್ಲಿ ಪ್ರತಿಭಾವಂತ  ವಿದ್ಯಾರ್ಥಿಗಳಾದ ಚೈತ್ರಾ ಕಮ್ಮಾರ (ಕಲಾವಿಭಾಗ), ರಶ್ಮಿ ಅರ್ಕಾಚಾರಿ (ವಿಜ್ಞಾನ),ನಿಖಿಲಕುಮಾರ ಕಮ್ಮಾರ (ವಾಣಿಜ್ಯ), ಸಹನಾ ಬಡಿಗೇರ (ವಿಜ್ಞಾನ), ದರ್ಶನ ಬಿ.ಎಸ್, (ವಾಣಿಜ್ಯ), ಮನೋಜ ಎಚ್‌.ಜೆ(ವಿಜ್ಞಾನ), ಸೃಷ್ಠಿ ಎಸ್‌.ಬಿ. (ಕಲಾ ವಿಭಾಗ) ಇವರನ್ನು ಮೌನೇಶ್ವರ ಗುರೂಜೀ ಹಾಗೂ ಲಕ್ಷ್ಮೀದೇವಿ ದಂಪತಿಗಳು ಪುರಸ್ಕಾರ ನೀಡಿ ಸನ್ಮಾನಿಸಿದರು. 

ನಿವೃತ್ತ ಪ್ರಾಚಾರ್ಯ ಡಾಽಉಮೇಶ ದೈವಜ್ಞ, ಶಿವಣ್ಣ ಬಡಿಗೇರ, ನಿವೃತ್ತ ಶಿಕ್ಷಕ ಗದ್ದಿಗಾಚಾರ್ಯ ಬಿ, ಲಕ್ಷ್ಮೀದೇವಿ ಅಮ್ಮನವರು, ಮಲ್ಲಿಕಾರ್ಜುನ ಗುರೂಜೀ, ಶಿವಕುಮಾರ ಬಡಿಗೇರ, ಶಿವಾನಂದ ಅರ್ಕಾಚಾರಿ, ವೀರಾಚಾರಿ ಕಮ್ಮಾರ, ಉಮಾಕಾಂತ ಬಿ.ಜಿ, ಮಾಲತೇಶಾಚಾರ್ಯ, ಶಿವಾನಂದಾಚಾರಿ, ಹೇಮಾತಿ, ಉಮಾದೇವಿ, ಸೌಮ್ಯಾ ಕಮ್ಮಾರ, ದೇವಕೆಮ್ಮ ಬಿ ಎಸ್, ಸೌಭಾಗ್ಯಮ್ಮ ಬಿ.ಬಿ,ವಿಶ್ವಾಸ, ಸುವರ್ಣ ಬಡಿಗೇರ, ತಾರಾ ಬಡಿಗೇರ, ಅನ್ನಪೂರ್ಣಮ್ಮ ಬಿ, ಜ್ಞಾನೇಶ್ವರಿ ಬಿ, ಗೀತಾ ಬಡಿಗೇರ, ಸುನೀತಾ ಬಡಿಗೇರ, ಸಂಜನಾ ಬಡಿಗೇರ, ಲಲಿತಕುಮಾರ ಸಿ.ಕೆ, ಪ್ರದೀಪ ಬಿ.ಜಿ, ಗಂಗಾಧರಚಾರ್ಯ ಬಿ, ಸಂಪತಕುಮಾರ ಎಸ್ ಬಡಿಗೇರ, ಎಸ್‌.ಕೆ.ಗೀತಾ, ಸಹನಾ ಎಸ್ ಬಡಿಗೇರ, ರಶ್ಮಿ ಎಸ್ ಅರ್ಕಾಚಾರಿ, ಮನೋಜ ಹೆಚ್‌.ಬಿ, ಸೃಷ್ಟಿ ಎಸ್ ಬಿ, ಚೈತ್ರಾ ಕಮ್ಮಾರ, ನಿಖಿಲಕುಮಾರ ಕಮ್ಮಾರ ಸ್ಭೆರಿದಂತೆ ಮತ್ತಿತರರು ಇದ್ದರು. 

ವಿಶ್ವರೂಪ ಲಲಿತಕಲಾ ನಿಕೇತನಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಕೃಷ್ಣ ಬಡಿಗೇರ ನಿರೂಪಿಸಿ ವಂದಿಸಿದರು. 


ಸುದ್ದಿ ಓದಿ