ಎಸ್ಎಸ್ಎಲ್ಸಿ ಮತ್ತು ಪಿಯುಸಿ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ರಾಣಿಬೆನ್ನೂರ 02: ದಿ. ದೇವರಾಜ ಅರಸು ಅವರ 109 ಹುಟ್ಟು ಹಬ್ಬದ ಪ್ರಯುಕ್ತ ಗಂಗಾ ವಿವಿಧ ಉದ್ದೇಶಗಳ ಸಹಕಾರ ಸಂಘದ ವತಿಯಿಂದ ಪ್ರಸಕ್ತ ಸಾಲಿನಲ್ಲಿ 90 ಕ್ಕಿಂತ ಅಧಿಕ ಅಂಕಗಳನ್ನು ಪಡೆದ, ಎಸ್ಎಸ್ಎಲ್ಸಿ ಮತ್ತು ಪಿಯುಸಿ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ದಾನಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ನಗರದ ಕರಾವಳಿ ಸಭಾಭವನದಲ್ಲಿ ಅ. 15 ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ರತ್ನಾಕರ ಕುಂದಾಪುರ ಹೇಳಿದರು.
ನಗರದ ಶ್ರೀ ಗಂಗಾ ವಿವಿಧ ಉದ್ದೇಶಗಳ ಸಹಕಾರ ಸಂಘದ ಸಭಾಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 90 ಕ್ಕಿಂತ ಅಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ಅ. 5 ರೊಳಗಾಗಿ ಅಂಕಪಟ್ಟಿಯ ನಕಲು ಪ್ರತಿಯೊಂದಿಗೆ ಗಂಗಾ ವಿವಿಧ ಉದ್ದೇಶಗಳ ಸಹಕಾರ ಸಂಘದ ಕಾರ್ಯಾಲಯದಲ್ಲಿ ಅರ್ಜಿ ಸಲ್ಲಿಸಬೇಕು ಎಂದರು.
95 ಕ್ಕಿಂತ ಅಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ಮತ್ತು ಪಾಲಕರನ್ನು ಮತ್ತು ಪ್ರತಿಭಾ ಪುರಸ್ಕಾರಕ್ಕೆ ಸಹಾಯ ಮಾಡಿದ ದಾನಿಗಳನ್ನು ಸನ್ಮಾಸಿ ಗೌರವಿಸಲಾಗುವುದು. ಅಂದು ಸಂಜೆ 8 ಗಂಟೆಗೆ ಕರಾವಳಿ ಬಳಗದ ವತಿಯಿಂದ ನಡೂರ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಇವರಿಂದ ಸದಾಶಿವ ಅಮಿನ್ ಭಾವತ ನಿರ್ದೇಶನದ ಶ್ರೀ ಮಹಿಷ ಮರ್ದಿನಿ ಪುರಾಣ ಪುಣ್ಯ ಕಥಾ ಪ್ರಸಂಗವನ್ನು ಪ್ರದರ್ಶಿಸಲಾಗುವುದು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಗಂಗಾ ವಿವಿಧ ಉದ್ದೇಶಗಳ ಸಹಕಾರ ಸಂಘದ ಅಧ್ಯಕ್ಷ ರತ್ನಾಕರ ಕುಂದಾಪುರ ವಹಿಸುವರು. ಡಾಽ ನಾಗರಾಜ ದೊಡ್ಮನಿ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಪ್ರಕಾಶ ಕೋಳಿವಾಡ, ಮಾಜಿ ಸಚಿವ ಆರ್. ಶಂಕರ, ಡಾಽ ಕಾಂತೇಶ ಅಂಬಿಗೇರ, ಪ್ರೊ. ಬಿ.ಬಿ. ನಂದ್ಯಾಲ ಮುಖ್ಯ ಅತಿಥಿಗಳಾಗಿ ಆಗಮಿಸುವರು ಎಂದರು.
ಗೋಷ್ಠಿಯಲ್ಲಿ ಕೃಷ್ಣಮೂರ್ತಿ ಸುಣಗಾರ, ಗಣೇಶ ಜಡಮಲಿ, ರಾಜೇಂದ್ರ ಅಂಬಿಗೇರ, ಲಕ್ಷ್ಮಣ ಸುಣಗಾರ, ಹನುಮಂತಪ್ಪ ಕುರವತ್ತಿ, ನಾಗೇಶ ಕುಂದಾಪುರ, ಲಕ್ಷ್ಮಣ ದಾಸರ, ಸುರೇಶ ಜಡಮಲಿ, ಅನ್ನಪೂರ್ಣ ಬಾರ್ಕಿ, ಆಂಜನೇಯ ಬಾಳಿಕಾಯಿ ಮತ್ತಿತರರು ಇದ್ದರು.