ರಾಣೆಬೆನ್ನೂರ

ಸಂಸ್ಕೃತಿ ಪ್ರತಿಪಂಬಿಸಿದ ವಿದ್ಯಾರ್ಥಿಗಳು ಪ್ರತಿಭೆಗೆ ಜಾತಿ, ಭೇದ,ಭಾವ : ಇಲ್ಲ ಎಂ.ಎಚ್‌. ಪಾಟೀಲ್

ಸಂಸ್ಕೃತಿ ಪ್ರತಿಪಂಬಿಸಿದ ವಿದ್ಯಾರ್ಥಿಗಳು ಪ್ರತಿಭೆಗೆ ಜಾತಿ, ಭೇದ,ಭಾವ : ಇಲ್ಲ ಎಂ.ಎಚ್‌. ಪಾಟೀಲ್

ಮೌನೇಶ್ವರ ಕಲ್ಯಾಣ ಮಂಟಪದಲ್ಲಿ ಪ್ರತಿಭಾ ಕಾರಂಜಿ  

ರಾಣೇಬೆನ್ನೂರು  12: ಸಾಂಸ್ಕೃತಿಕ ಕಲಾಪ್ರತಿಭೆ ಯಾರೊಬ್ಬರ ಸೊತ್ತಲ್ಲ, ಪ್ರತಿಭೆ ಎನ್ನುವುದು ಎಲ್ಲ ವಿದ್ಯಾರ್ಥಿಗಳಲ್ಲಿಯೂ ಅಡಕವಾಗಿರುತ್ತದೆ ಅವುಗಳು ಪ್ರದರ್ಶಿಸಲು ವೇದಿಕೆಗಳ ಅಗತ್ಯವಿದೆ ಸರ್ಕಾರ ಸಂಸ್ಕೃತಿಯನ್ನು ಪ್ರತಿ ಬಂಬಿಸುವ ನಿಟ್ಟಿನಲ್ಲಿ ಮಕ್ಕಳಿಗೆ ಪ್ರತಿಭಾ ಕಾರಂಜಿ ವೇದಿಕೆ ಕಲ್ಪಿಸಿಕೊಟ್ಟಿದೆ ಅವುಗಳನ್ನು ಬಳಸಿಕೊಂಡು ತಮ್ಮಲ್ಲಿರುವ ಆಂತರಿಕ ಪ್ರತಿಭೆಯನ್ನು ಯಾವುದೇ ಮಡಿವಂತಿಕೆ ಇಲ್ಲದೆ ಅಭಿವ್ಯಕ್ತಿಸಲು ಮುಂದಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಹೆಚ್‌. ಪಾಟೀಲ್ ಹೇಳಿದರು.  

ಅವರು ಮಂಗಳವಾರ ಮೌನೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಜಿ.ಪಂ ತಾಪಂ,ಶಾಲಾ ಶಿಕ್ಷಣ ಮತ್ತು ಸಾಕ್ಷರತಾ  ಇಲಾಖೆ, ಸಮೂಹ ಸಂಪನ್ಮೂಲ ಕೇಂದ್ರ 3 ಹಾಗೂ ಶ್ರೀ ಜಗದ್ಗುರು ಮೌನೇಶ್ವರ ಪ್ರೌಢಶಾಲೆ ಆಯೋಜಿಸಿದ್ದ 2023-24ನೇ ಸಾಲಿನ 3ನೇ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವ ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮದ ಅಧ್ಯಕ್ಷರ ವಹಿಸಿ ಮಾತನಾಡಿದರು. ಇಂದಿನ ಸಂದರ್ಭದಲ್ಲಿ ಮಕ್ಕಳು ಕೇವಲ ಪಠ್ಯಪುಸ್ತಕಕ್ಕೆ ಮಾತ್ರ ಸೀಮಿತವಾಗಬಾರದು ದೈವದತ್ತವಾಗಿ ಅಡಗಿರುವ ಕಲೆಯನ್ನು ಪ್ರತಿಬಿಂಬಿಸಲು ಪಟ್ಟೇತರ ಚಟುವಟಿಕೆಯಾಗಿ ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ ಎಂದರು. 

ಲಯನ್ಸ್‌ ಮಾಜಿ ಅಧ್ಯಕ್ಷ ಬಸವರಾಜ ಬಡಿಗೇರ್, ಮತ್ತು ಮಾರ್ತಾಂಡಪ್ಪ ಕಮ್ಮಾರ್ ಅವರು ಪ್ರತಿಭಾ ಕಾರಂಜಿ ಕಲೋತ್ಸವ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಚಾಲನೆ ನೀಡಿದರು ಮುಖ್ಯ ಅತಿಥಿಗಳಾಗಿ ಶಿಕ್ಷಣ ಸಂಸ್ಥೆಯ ಮುಖಂಡರಾದ ಕೃಷ್ಣಾಚಾರ್ ಅರ್ಕಾಚಾರಿ, ಇಸಿಓ ಸುನೀತಾ, ನಾಗರಾಜ್ ಎನ್‌ಬಿಆರ್‌ಸಿ ಗಂಗಪ್ಪ ನಾಯಕ್, ಸಿ. ಆರಿ​‍್ಪ, ತುಳಜಾಭವಾನಿ, ಹೇಳಿದಂತೆ ಮತ್ತಿತರ ಗಣ್ಯರು ಪಾಲ್ಗೊಂಡು ಮಾತನಾಡಿದರು.  

ವೇದಿಕೆಯಲ್ಲಿ ಸಮಾಜದ ಗಣ್ಯರಾದ, ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳು ಓಂಕಾರ​‍್ಪ ಅರ್ಕಾಚಾರಿ, ರಾಘವೇಂದ್ರ ಅರ್ಕಾಜಾರಿ, ಕಾಳಪ್ಪ ಹುಲ್ಲತ್ತಿ, ಸಿದ್ದಪ್ಪ ಬಡಿಗೇರ್, ಮಲ್ಲಪ್ಪ ಕಮ್ಮಾರ್, ನಾಗೇಂದ್ರ​‍್ಪ ಅರ್ಕಾಚಾರಿ, ಹಾಲೇಶ ಸಿ,ಬಿ, ಅಶೋಕ್ ಮಾಯಾಚಾರಿ, ಶಿವಪ್ಪ ಹೆಚ್, ಮತ್ತಿತರರು ಉಪಸ್ಥಿತರಿದ್ದರು.  

ರಮ್ಯಾ ಸಂಗಡಿಗರು ಪ್ರಾರ್ಥಿಸಿದರು, ಶಿಕ್ಷಕ ಎ.ಕೆ. ಅಂಗಡಿ, ಸ್ವಾಗತಿಸಿದರು. ಶಿಕ್ಷಕ ಜಿ.ಎಸ್‌. ಬಡಿಗೇರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಕೆ.ಎನ್‌. ಕಾಟೇನಹಳ್ಳಿ ನಿರೂಪಿಸಿ, ಶಿಕ್ಷಕಿ  ಸುಂಕಾಪುರ ವಂದಿಸಿದರು. ನಂತರ ಸಂಜೆಯವರೆಗೂ  ನಡೆದ ಮಕ್ಕಳ ಪ್ರತಿಭಾ ಕಾರಂಜಿ ಕಲೋತ್ಸವ ಸಾಂಸ್ಕೃತಿಕ ಸ್ಪರ್ಧ ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ 300 ನೂರಕ್ಕೂ ಹೆಚ್ಚು  ಮಕ್ಕಳು ಪಾಲ್ಗೊಂಡು ವೈವಿಧ್ಯಮಯ ಸಾಂಸ್ಕೃತಿಕ ಕಲೆಗಳ ಮೂಲಕ ಸ್ಪರ್ಧಾತ್ಮಕವಾಗಿ ತಮ್ಮ ಪ್ರತಿಭೆ ಮೆರೆದು ಸಾರ್ವಜನಿಕರ ಗಮನ ಸೆಳೆದರು. 


ಸುದ್ದಿ ಓದಿ