ಹೂವಿನ ಹಡಗಲಿ

ಪಂಚಮಸಾಲಿ ನೌಕರರ ಸಂಘದಿಂದ ಪ್ರತಿಭಾ ಪುರಸ್ಕಾರ

ಪಂಚಮಸಾಲಿ ನೌಕರರ ಸಂಘದಿಂದ ಪ್ರತಿಭಾ ಪುರಸ್ಕಾರ

ಹೂವಿನಹಡಗಲಿ 22: ’ಪ್ರತಿಭಾವಂತರನ್ನುಗುರುತಿಸಿ ಪುರಸ್ಕಾರ ನೀಡುವುದರಿಂದ ವಿದ್ಯಾರ್ಥಿಗಳ ಸಾಧನೆಗೆ ಪ್ರೇರಣೆಯಾಗುತ್ತದೆ’ ಎಂದು ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ನೌಕರರ ಬ್ಯಾಂಕ್ ಅಧ್ಯಕ್ಷ ಎ.ವೀರಣ್ಣ ಹೇಳಿದರು. ಪಟ್ಟಣದ ಜಿಬಿಆರ್  ಕಾಲೇಜಿನ ಹಾನಗಲ್ ಕುಮಾರೇಶ ಸಭಾಂಗಣದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ನೌಕರರ ಸಂಘ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.’ಪಂಚಮಸಾಲಿ ಸಮಾಜದ ಸಾಧಕ ವಿದ್ಯಾರ್ಥಿಗಳನ್ನು ನೌಕರ ವರ್ಗದವರು ಬೆನ್ನು ತಟ್ಟಿ ಪ್ರೋತ್ಸಾಹಿಸಿರುವುದು ಶ್ಲಾಘನೀಯ. - ಹರಿಹರದಲ್ಲಿರುವ ನೌಕರರ ಬ್ಯಾಂಕ್ ನ ಶಾಖೆಗಳನ್ನು ನಾನಾ ಕಡೆ ವಿಸ್ತರಿಸಿ ಯುವಕರಿಗೆಉದ್ಯೋಗ ನೀಡುತ್ತಿದ್ದೇವೆ’ ಎಂದು ತಿಳಿಸಿದರು.ಪಂಚಮಸಾಲಿ ನೌಕರರ ಸಂಘದ ಅಧ್ಯಕ್ಷ ವಿ.ಬಿ.ಜಗದೀಶ ಮಾತನಾಡಿ, ಸಮಾಜದ ವಿದ್ಯಾರ್ಥಿಗಳಿಗೆ ಮೀಸಲಾತಿಯ ಅನುಕೂಲಗಳು ಇಲ್ಲದಿರುವುದರಿಂದ ಕಠಿಣ ಪರಿಶ್ರಮದಿಂದ ಅಭ್ಯಾಸ ಮಾಡಿ ಭವಿಷ್ಯ ರೂಪಿಸಿಕೊಳ್ಳಬೇಕು.  

ಸಮಾಜದ ಬಡ ವಿದ್ಯಾರ್ಥಿಗಳಿಗೆ ತಾಲ್ಲೂಕು ಕೇಂದ್ರದಲ್ಲಿ ಹಾಸ್ಟೆಲ್ ತೆರೆಯುವ ಚಿಂತನೆ ಇದೆ. ಉನ್ನತ ವ್ಯಾಸಂಗ ಮಾಡುವವಿದ್ಯಾರ್ಥಿಗಳಿಗೆ ನೌಕರರ ಬ್ಯಾಂಕ್ ನಿಂದ ?2 ಲಕ್ಷ ಸಾಲ ನೀಡಲಾಗುತ್ತಿದೆ. ಇದರ ಪ್ರಯೋಜನ ಪಡೆಯಬೇಕು ಎಂದು ಹೇಳಿದರು. 

ಸಿಂಗಟಾಲೂರು ಏತ ನೀರಾವರಿ ಯೋಜನೆ ಮುಂಡರಗಿ ವಿಭಾಗದ ಕಾರ್ಯಪಾಲಕ  ಎಂಜಿನಿಯರ್ ಐಗೋಳ ಪ್ರಕಾಶ್, ಸಹಾಯಕ ಪ್ರಾಧ್ಯಾಪಕ ಕೆ. ಸತೀಶ, ಪಂಚಮಸಾಲಿ ನೌಕರರ ಸಂಘದ ರಾಜ್ಯ ಸಮಿತಿ ಸದಸ್ಯ ಎಚ್‌.ಜಿ.ಪಾಟೀಲ್ ಮಾತನಾಡಿದರು. ನೌಕರರ ಸಂಘದಪದಾಧಿಕಾರಿಗಳಾದ ಬಸೆಟ್ಟಿ ಪ್ರಕಾಶ್, ಎ.ಕೊಟ್ರಗೌಡ, ಯು.ಆನಂದ, ಗಡ್ಡಿ ಶಿವಕುಮಾರ್, ಬಿ.ಬಿ. ಅಸುಂಡಿ, ಟಿ.ಪಿ.ವೀರೇಂದ್ರ, ಎಚ್‌.ಕೆ.ಮಹೇಶ, ಹೊಂಬಳಗಟ್ಟಿ ಪ್ರಕಾಶ್, ಸೊಪ್ಪಿನ ವೀರಣ್ಣ ಇದ್ದರು.ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿಯಲ್ಲಿ ಶೈಕ್ಷಣಿಕ ಸಾಧನೆ ಮಾಡಿರುವ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು. 


ಸುದ್ದಿ ಓದಿ