ಸ್ಪಂದನ ನಿಧನ: ಕುಟುಂಬಸ್ಥರಿಗೆ ಪ್ರಣವಾನಂದ ಶ್ರೀಗಳು ಸಾಂತ್ವನ
ರಾಣೇಬೆನ್ನೂರು 09: ಥೈಲ್ಯಾಂಡ್ ದೇಶದಲ್ಲಿ ಸೋಮವಾರ ನಿಧನರಾದ ಚಲನಚಿತ್ರ ನಟ, ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರ ಆಕಸ್ಮಿಕ ನಿಧನದಿಂದ ದು:ಖಿತರಾಗಿರುವ, ಆರೇಮಲ್ಲಾಪುರ ಗ್ರಾಮದ ಶ್ರೀ ಮಠದ ಪ್ರಣವಾನಂದ ಸ್ವಾಮೀಜಿಯವರು, ತಮ್ಮ ಈಡಿಗ ಸಮುದಾಯದ ಮುಖಂಡರೊಂದಿಗೆ ಮಲ್ಲೇಶ್ವರಂನ ಬಿ.ಕೆ. ಹರಿಪ್ರಸಾದ್ ಅವರ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ನೀಡಿದ್ದಾರೆ. ಅಲ್ಲದೆ ಅಗಲಿದ ಆತ್ಮಕ್ಕೆ ಶಾಂತಿ,ಸದ್ಗತಿ ಪ್ರಾಪ್ತಿಯಾಗಲೆಂದು ಮತ್ತು ಕುಟುಂಬದವರಿಗೆ ದುಃಖ ಭರಿಸುವ ಶಕ್ತಿಯನ್ನು, ಬ್ರಹ್ಮಶ್ರೀ ನಾರಾಯಣ ಗುರುಗಳು ನೀಡಲೆಂದು ಪ್ರಾರ್ಥಿಸಿದ್ದಾರೆ. ಈ ಸಂದರ್ಭದಲ್ಲಿ ರಾಷ್ಟ್ರೀಯ ಮಹಾಮಂಡಳಿಯ ರಾಷ್ಟ್ರೀಯ ಕಾರ್ಯದರ್ಶಿ, ಡಾ : ಮಂಚೇಗೌಡ ಬಿ. ಹೆಚ್. ರಾಜ್ಯ ಖಜಾಂಚಿ ಹಾವೇರಿಯ ಮಂಜಣ್ಣ ಹೊಸರಿತ್ತಿ, ಈಡಿಗ ಸಮುದಾಯದ ಮುಖಂಡರಾದ ರಾಮಣ್ಣ ದೊಡ್ಡಬಳ್ಳಾಪುರ, ಅವರುಗಳು, ಬಿ.ಕೆ. ಹರಿಪ್ರಸಾದ್ ಮತ್ತು ರಕ್ಷಿತ್ ಶಿವರಾಂ ಅವರೊಂದಿಗೆ ಮುಂದಿನ ಕಾರ್ಯ ಕರ್ತವ್ಯ ಕುರಿತು ಮಾತನಾಡಿದರು.