ಕಾಗವಾಡ

ಪ್ರಕಾಶ ಹುಕ್ಕೇರಿ ಗೆಲುವು ನಿಶ್ವಿತ: ಉಮೇಶಗೌಡ

ಪ್ರಕಾಶ ಹುಕ್ಕೇರಿ ಗೆಲುವು ನಿಶ್ವಿತ: ಉಮೇಶಗೌಡ

ಕಾಗವಾಡ: ಮಾಜಿ ಸಂಸದರು ಹಾಗೂ ವಾಯುವ್ಯ ಶಿಕ್ಷಕರ ಮತಕ್ಷೇತ್ರದ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಗೆಲುವು ನಿಶ್ವಿತವೆಂದು ಕಾಗವಾಡ ಮತಕ್ಷೇತ್ರದ ಕಾಂಗ್ರೆಸ್ ಮುಖಂಡ ಉಮೇಶಗೌಡ ಪಾಟೀಲ ಹೇಳಿದರು. 

ಶನಿವಾರ ರಂದು ಕಾಗವಾಡ ತಾಲೂಕಿನ ಜುಗೂಳ, ಶಿರಗುಪ್ಪಿ, ಶೇಡಬಾಳ, ಮಂಗಸೂಳಿ, ಉಗಾರ, ಐನಾಪುರ ಪ್ರೌಢಶಾಲೆಗಳಿಗೆ ಭೇಟ್ಟಿನೀಡಿ ಶಿಕ್ಷಕರ ಜೊತೆ ಸಮಾಲೋಚನೆ ಮಾಡಿದ್ದು, ಪ್ರಕಾಶ ಹುಕ್ಕೇರಿ ಎಂದರೆ ಅವರೊಬ್ಬ ಕೆಲಸಗಾರ ಎಂದು ರಾಜ್ಯದ ತುಂಬೆಲ್ಲ ಹೆಸರುವಾಸಿಯಾಗಿದ್ದಾರೆ, ಅವರಿಗೆ ತಮ್ಮ ಬೆಂಬಲ ನೀಡುವುದಾಗಿ ಶಿಕ್ಷಕರು ಒಮ್ಮತನ ನಿರ್ಣಯ ಕೈಗೊಂಡಿರುವುದಾಗಿ ಹೇಳಿದರು. 

ಕಳೆದ ಎರಡು ಬಾರಿ ಆಯ್ಕೆಯಾಗಿ ಬಂದ ಅರುಣ ಶಹಾಪುರ ಅವರು ಶಿಕ್ಷಕರ ಹಾಗೂ ಅತಿಥಿ ಉಪನ್ಯಾಸಕರ ಬೇಡಿಕೆಗಳಿಗೆ ಸ್ಪಂದಿಸಿಲ್ಲ. ಇಂಥವರನ್ನು ಆಯ್ಕೆಮಾಡಿ ನಾವು ತಪ್ಪು ಮಾಡಿದ್ದೇವೆ. ಹಿಂದೆ ಆದ ತಪ್ಪನ್ನು ಮಾಡದೇ ಒಬ್ಬ ಚತುವ ರಾಜಕಾರಣಿ, ಯಾವತ್ತು ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವಂತ ಪ್ರಕಾಶ ಹುಕ್ಕೇರಿಯವರಿಗೆ ಮತ ಚಲಾಯಿಸುವುದಾಗಿ ಶಿಕ್ಷಕರು ಹುರುಪಿನಿಂದ ಹೇಳುತ್ತಿರುವುದನ್ನು ಕಂಡರೆ ಪ್ರಕಾಶ ಹುಕ್ಕೇರಿಯವರು ದಾಖಲೆ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಉಮೇಶಗೌಡ ಪಾಟೀಲ ಹೇಳಿದರು. 

ಪ್ರಕಾಶ ಹುಕ್ಕೇರಿಯವರು ಆಯ್ಕೆಯಾಗಿ ಬರುವುದು ನಕ್ಕಿ. ಅದಕ್ಕಾಗಿ ಆಯ್ಕೆಯಾಗಿ ಬರುವವರಿಗೆ ಮತ ಹಾಕುವಂತೆ ಉಮೇಶಗೌಡ ಪಾಟೀಲ ಶಿಕ್ಷಕರಲ್ಲಿ ಮನವಿ ಮಾಡಿದರು. ಈ ವೇಳೆ ವಿವೇಕಾನಂದ ಕೊಳೇಕರ, ವಿನೋದ ಕೋಳಿ, ಅಕ್ಷಯ ಪಾಟೀಲ, ಗಂಗಾಧರ ಹಿರೇಮಠ ಸೇರಿದಂತೆ ಅನೇಕರು ಪ್ರಚಾರದಲ್ಲಿ ಪಾಲ್ಗೊಂಡಿದ್ದರು. 


ಸುದ್ದಿ ಓದಿ