ಇಂದು ಕಾಂಗ್ರೆಸ್ ಪಕ್ಷದಿಂದ ಪ್ರಜಾಧ್ವನಿ ಕಾರ್ಯಕ್ರಮ
ಜಮಖಂಡಿ : 26: ಫೆ.27 ರಂದು ಕಡಪಟ್ಟಿ ಬಸವೇಶ್ವರ ಮೈದಾನದಲ್ಲಿ 11 ಗಂಟೆಗೆ ಕಾಂಗ್ರೆಸ್ ಪಕ್ಷದಿಂದ ಪ್ರಜಾಧ್ವನಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು. ಮಾಜಿ ಸಿಎಂ,ಸಿದ್ದರಾಮಯ್ಯನವರು, ಮಾಜಿ ಸಚಿವರಾದ ಎಚ್,ಸಿ,ಮಾದೇವಪ್ಪ, ಜಮೀರ ಅಹ್ಮದಖಾನ, ಸತೀಶ ಜಾರಕಿಹೊಳೆ, ಎಂ,ಬಿ,ಪಾಟೀಲ ಸೇರಿದಂತೆ ಅನೇಕ ನಾಯಕರು ಆಗಮಿಸಲಿದ್ದಾರೆಂದು ಶಾಸಕ ಆನಂದ ನ್ಯಾಮಗೌಡ ತಿಳಿಸಿದರು.
ನಗರದ ರಮಾ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರಕಾರದ ದುರಾಡಳಿತದ ಬಗ್ಗೆ ಜನತೆ ಬೇಸರ ವ್ಯಕ್ತ ಪಡಿಸುತ್ತಿದ್ದಾರೆ. ಲಿಂಗಾಯತ ಸಮಾಜಕ್ಕೆ ಮೀಸಲಾತಿ ನೀಡುವಲಿ ವಿಫಲವಾದ ಸರಕಾರ. ಬಡವರಿಗೆ ಹಂಚಿಕೆಯಲ್ಲಿನ ಅಕ್ಕಿ ವಿತರಣೆಯನ್ನು ಕಡಿತಗೊಳಿಸಿದೆ. ರೈತರ ಬೆಲೆದ ಕಬ್ಬಿನ ಬೆಂಬಲ ಬೆಲೆ ನೀಡದೆ. ದಿನ ನಿತ್ಯದ ವಸ್ತುಗಳ ಬೆಲೆ ಏರಿಕೆ. ದ್ರಾಕ್ಷಿ ಬೆಳೆಗಾರರಿಗೆ ಹಾಗೂ ರೈತರಿಗೆ 1ಲಕ್ಷ ರೂ, ಸಾಲಮನ್ನಾ ಮಾಡುತ್ತೇವೆ ಎಂದು ಸುಳ್ಳಿನ ಭರವಸೆಯನ್ನು ನೀಡಿದೆ. ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡುತ್ತಿಲ್ಲ. ಸರಕಾರಿ ನೌಕರರಿಗೆ 7 ವೇತನ, ಶಿಕ್ಷಕರಿಗೆ ಹಳೆ ಪಿಂಚನೆ ನೀಡುತ್ತೀಲ್ಲ, ಲಿಂಗಾಯತ ಸಮಾಜದ ಶ್ರೀಗಳು ಮೀಸಲಾತಿ ಬಗ್ಗೆ ಹೋರಾಟ ಮಾಡಿದರು ಸಹ ಮೀಸಲಾತಿ ನೀಡುತ್ತಿಲ್ಲ. ಮರಾಠಾ ಸಮಾಜಕ್ಕೆ ಸಹ ಮೀಸಲಾತಿ ನೀಡದ ಸರಕಾರ ರಾಜ್ಯದ ಜನತೆಗೆ ಸುಳ್ಳಿನ ಭರವಸೆಯನ್ನು ನೀಡಿ ಮೋಸ ಮಾಡುತ್ತಿರುವ ರಾಜ್ಯ ಸರಕಾರದ ವಿರುದ್ದ ಜನತೆ ಬೇಸರ ವ್ಯಕ್ತ ಪಡಿಸುತ್ತಿದ್ದಾರೆಂದು ಆರೋಪಿಸಿದರು.
ಕಾಂಗ್ರೇಸ್ ಸರಕಾರದ ಸಮಯದಲ್ಲಿ ಶೇ.90ರಷ್ಟು ರಾಜ್ಯದ ಜನತೆಗೆ ಭರವಸೆಗಳನ್ನು ನೀಡಿದಾಗ ಎಲ್ಲ ಭರವಸೆಗಳನ್ನು ಈಡೇರಿಸುವ ಕೆಲಸ ಮಾಡಿದೆ. ಆದರಿಂದ ಪ್ರಾಮಾಣಿಕೆವಾಗಿ ಭರವಸೆಗಳನ್ನು ನೀಡಿ, ಸ್ವಚ್ಚ ಸರಕಾರವನ್ನು ನೀಡಿರುವ ಕಾಂಗ್ರೇಸ್ ಸರಕಾರದ ಕುರಿತು ಜನರಲ್ಲಿ ಜಾಗೃತಿಯನ್ನು ಮೂಡಿಸುವ ಬಗ್ಗೆ ಪ್ರಜಾಧ್ವನಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅದರಂತೆ ಜಮಖಂಡಿ ಕ್ಷೇತ್ರದಲ್ಲಿ ಕೈಗೆ ಕೈ ಜೋಡಿಸಿ ಎಂದು ಪಾದಯಾತ್ರೆಯನ್ನು ಮಾಡಲಾಗಿದೆ. ಕ್ಷೇತ್ರದ ತುಂಬ ಹಾಗೂ ಪ್ರತಿ ವಾರ್ಡಗಳಲ್ಲಿ ಮಹಿಳೆಯರು ಆರತಿಯನ್ನು ಮಾಡುವ ಮೂಲಕ ಅದ್ದೂರಿಯಾಗಿ ಸ್ವಾಗತಿಸಿ ಬೆಂಬಲ ನೀಡುವ ಜೊತೆಗೆ ಆರ್ಶೀವಾದವನ್ನು ಸಹ ನೀಡಿದ್ದಾರೆ. ಫೆ.27 ರಂದು 11 ಗಂಟೆಗೆ ನಡೆಯುವ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಸುಮಾರು 15ರಿಂದ 20 ಸಾವಿರ ಜನ ಸೇರುವ ನೀರಿಕ್ಷೇ ಇದೆ ಎಂದರು.
ಮಾಜಿ ಜವಳಿ ನಿಗಮ ಉಪಾಧ್ಯಕ್ಷ ನಜೀರ ಕಂಗನೊಳಿ, ನಗರಸಭೆ ಅಧ್ಯಕ್ಷ ದಾನೇಶ ಘಾಟಗೆ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವರ್ಧಮಾನ ನ್ಯಾಮಗೌಡ, ಮಾಜಿ ನಗರಸಭೆ ಅಧ್ಯಕ್ಷ ಸಿದ್ದು ಮೀಶಿ, ಮಹೇಶ ಕೋಳಿ, ಈಶ್ವರ ವಾಳೇನ್ನವರ, ರವಿ ಯಡಳ್ಳಿ, ಪ್ರಕಾಶ ಕನಬೂರ, ಬಸವರಾಜ ನ್ಯಾಮಗೌಡ,ಪರಮಾನಂದ ಗೌರೋಜಿ, ಸುನೀಲ ಶಿಂಧೆ, ಎ,ಆರ್,ಶಿಂಧೆ, ರಫೀಕ ಬಾರಿಗಡ್ಡಿ, ಈಶ್ವರ ಕರಬಸನ್ನವರ ಸೇರಿದಂತೆ ಅನೇಕರು ಸುದ್ದಿಗೋಷ್ಠಿಯಲ್ಲಿ ಇದ್ದರು,