ಬೈಲಹೊಂಗಲ

ಅಧಿಕಾರ ನಾಗರಿಕರ ಸೇವೆಗೆ ಪರಮಾತ್ಮ ಕೊಟ್ಟ ಕಾಣಿಕೆ: ಜನ್ಮಟ್ಟಿ

ಅಧಿಕಾರ ನಾಗರಿಕರ ಸೇವೆಗೆ ಪರಮಾತ್ಮ ಕೊಟ್ಟ ಕಾಣಿಕೆ: ಜನ್ಮಟ್ಟಿ

ಲೋಕದರ್ಶನ ವರದಿ 


ಬೈಲಹೊಂಗಲ 29: ನಾಗರಿಕರು ನನಗೆ ನೀಡಿದ ಅಧಿಕಾರದ ಕಾಲಾವಧಿಯಲ್ಲಿ ಪಟ್ಟಣದ ಮೂಲಭೂತ ಸಮಸ್ಯೆಗಳಿಗೆ ಸದಾ ಸ್ಪಂದಿಸಿ ಭವಿಷ್ಯದಲ್ಲಿ ಸುಂದರ ನಗರವನ್ನಾಗಿ ಮಾರಿ​‍್ಡಸಲು ಪ್ರಯತ್ನಿಸುತ್ತೇನೆ ಎಂದು ಪುರಸಭೆ ಅಧ್ಯಕ್ಷ ಬಸವರಾಜ ಜನ್ಮಟ್ಟಿ ಹೇಳಿದರು.  

  ಅವರು ಪಟ್ಟಣದ ಮುರಕೀಭಾಂವಿ ರಸ್ತೆಯಲ್ಲಿನ ಶ್ರೀ ಉಳವಿ ಚನ್ನಬಸವೇಶ್ವರ ಅಭಿವೃದ್ದಿ ಸಂಘ ಹಾಗೂ ಬಡಾವಣೆಯ ನಾಗರಿಕರು ಹಮ್ಮಿಕೊಂಡ ಸತ್ಕಾರ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಮನುಷ್ಯ ಪರೋಪಕಾರಿಯಾಗಿ ಬದುಕು ನಡೆಸಿದಾಗ ಸಮಾಜ ಆತನಿಗೆ ಉನ್ನತ ಸ್ಥಾನ-ಮಾನ ನೀಡಿ ಗೌರವಿಸಲ್ಪಡುತ್ತದೆ. ಈಗಾಗಿ ನನಗೆ ಮತ್ತೊಮ್ಮೆ ಅಧ್ಯಕ್ಷ ಸ್ಥಾನ ದೊರೆತ್ತಿದ್ದು ನಾಗರಿಕರ ಸೇವೆಗೆ ಪರಮಾತ್ಮ ಕೊಟ್ಟ ಕಾಣಿಕೆಯಾಗಿದ್ದು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಭರವಸೆ ನೀಡಿದರು.  

   ಮುಖ್ಯ ಅತಿಥಿಯಾಗಿ ಚಿತ್ರನಟ ಶಿವರಂಜನ ಬೋಳಣ್ಣವರ ಮಾತನಾಡಿ, ಅಧಿಕಾರದ ಅವಕಾಶ ದೊರೆತಾಗ ಜನರ ಸುಖ: ದುಖ;ಗಳಲ್ಲಿ ಬಾಗಿಯಾಗಿ ಪರಿಹಾರ ಕಂಡು ಕೊಂಡಾಗ ಸುದೈವ ಅನ್ನುವದು ಬೆನ್ನತ್ತಿ ಬರುತ್ತದೆ. ರಾಜಕೀಯದ ಮುಲಾಜಿಗೆ ಒಳಗಾಗದೇ ಪಕ್ಷಾತೀತವಾಗಿ ನಾಗರಿಕರಿಗೆ ಸೌಲಭ್ಯ ಒದಗಿಸುವಲ್ಲಿ ಪುರ ಸೇವಕರು ಮುಂದಾಗಬೇಕೆಂದರು.  

  ಎಸ್‌.ಬಿ. ಅಡಕಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಸದಸ್ಯೆ ಶಶಿಕಲಾ ಕಲ್ಲೊಳ್ಳಿ, ನಿವೃತ ಶಿಕ್ಷಕ ಬಿ.ಕೆ.ತಲ್ಲೂರ ವೇದಿಕೆ ಮೇಲಿದ್ದರು. 

  ಎಲ್‌.ಎಸ್‌.ಅಂಚಿ, ಎಸ್‌.ಎಂ.ಕಗ್ಗೋಡಿ, ಸದಾನಂದ ನಂಜಪ್ಪನವರ, ಶ್ರೀಕಾಂತ ಮಾಳಕ್ಕನವರ, ಶಿಕ್ಷಕ ಬಿ.ಎಂ.ಕೊಳವಿ,  ಚಂದ್ರಶೇಖರ ಕೊಪ್ಪದ, ಪ್ರಕಾಶ ಮಾಸ್ತಿ, ಮಡಿವಾಳಪ್ಪ ವಾರದ, ಸಿ.ಡಿ.ಶಿವನಾಯ್ಕರ, ಬಸವರಾಜ ಅಣ್ಣಿಗೇರಿ, ಡಿ.ಎನ್‌.ಗೋಣಿ,  ಮಹಾಂತೇಶ ರಾಜಗೋಳಿ, ಉಳವಿ ಚನ್ನಬಸವೇಶ್ವರ ಅಭಿವೃದ್ದಿ ಸಂಘದ ಪದಾಧಿಕಾರಿಗಳು ಬಡಾವಣೆಯ ನಾಗರಿಕರು ಉಪಸ್ಥಿತರಿದ್ದರು.  

ಕು. ಸಾಹಿತ್ಯ ಅಂಚಿ ಪ್ರಾರ್ಥಿಸಿದಳು. ಶಿಕ್ಷಕ ಎಸ್‌.ಬಿ. ನಂದಿಮಠ ಸ್ವಾಗತಿಸಿದರು. ಶಿಕ್ಷಕ ಎಂ.ಆರ್‌.ಪಾಟೀಲ ನಿರೂಪಿಸಿದರು. ಎಸ್‌.ಬಿ.ಅಳಗುಂಡಿ ವಂದಿಸಿದರು.  

  ಶಿಕ್ಷಕ ಕಲಾವಿದರಾದ ಕೆ.ಜಿ.ಗಡಾದ ಹಾಗೂ ಕೆ.ಬಿ.ಕಡೇಮನಿ ಅವರಿಂದ ರಸಮಂಜರಿ ಕಾರ್ಯಕ್ರಮ ಜರುಗಿತು. 


ಸುದ್ದಿ ಓದಿ