ಇಂಡಿ

ವಿದ್ಯುತ್ ಪರಿವರ್ತಕಗಳ ನಿರ್ವಹಣಾ ಅಭಿಯಾನ

ವಿದ್ಯುತ್ ಪರಿವರ್ತಕಗಳ ನಿರ್ವಹಣಾ ಅಭಿಯಾನ

ಇಂಡಿ 11: ಮಳೆಗಾಲ ಸಮೀಪುಸುತ್ತಿರುವ ಹಿನ್ನೆಲೆಯಲ್ಲಿ ವಿದ್ಯುತ್ ಸಂಬಂಧಿ ಅವಘಡ ತಪ್ಪಿಸಲು ಹೆಸ್ಕಾಂನಿಂದ ಮೇ 5 ರಿಂದ 20 ರ ವರೆಗೆ ತಾಲೂಕಿನಾದ್ಯಂತ 8600 ವಿದ್ಯುತ್ ಪರಿವರ್ತಕಗಳ ನಿರ್ವಹಣಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಹೆಸ್ಕಾಂ ಕಾರ್ಯ ನಿರ್ವಾಹಕ ಅಭಿಯಂತರ ಎಸ್‌.ಎ. ಬಿರಾದಾರ ತಿಳಿಸಿದರು.  

ಅವರು ಬುಧವಾರ ಪಟ್ಟಣದ ತಾಪಂ ಆವರಣದಲ್ಲಿ ಟಿ.ಸಿ ನಿರ್ವಹಣಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.8600 ಟಿಸಿ ಗಳಲ್ಲಿ 650 ಪಟ್ಟಣ ಮತ್ತು ಗ್ರಾಮಗಳಲ್ಲಿ ಇದ್ದು 8100 ಕೃಷಿ ನೀರಾವರಿಗಾಗಿ ಇವೆ ಎಂದರು. 

ಬೇಸಿಗೆಯಲ್ಲಿ ಟಿಸಿ ಗಳ ಮೇಲೆ ಅಧಿಕ ಒತ್ತಡ ಉಂಟಾಗುತ್ತದೆ. ಮಳೆಗಾಲದಲ್ಲಿ ಗಾಳಿ, ಮಳೆ, ಗುಡುಗು, ಸಿಡಿಲಿನಿಂದ ವಿದ್ಯುತ್ ಪರಿವರ್ತಕಗಳು ದುರಸ್ತಿಗೆ ಒಳಗಾಗುತ್ತವೆ. ಈ ಹಿನ್ನೆಲೆ ಪರಿವರ್ತಕಗಳ ಪರೀಶೀಲನೆ ನಡೆಸಲು ಅಭಿಯಾನ ಹಮ್ಮಿಕೊಳ್ಳಲಾಗಿದೆ. 

ಅಭಿಯಾನದಲ್ಲಿ  ಪರಿವರ್ತಕಗಳ ಗುಣಮಟ್ಟ, ಸಂರಕ್ಷಣೆ, ವಿದ್ಯುತ್ ಅಡಚಣೆ ಕಡಿಮೆಗೊಳಿಸುವದು ಅವಶ್ಯಕ ನಿರ್ವಹಣೆ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ವಿದ್ಯುತ್ ಅವಘಡಗಳನ್ನು ತಪ್ಪಿಸಬಹುದಾಗಿದೆ. ಈ ಅಭಿಯಾನದಲ್ಲಿ ಎಲ್ಲ 7 ಶಾಖಾ ಕಚೇರಿಗಳಿದ್ದು  ಪ್ರತಿ ಶಾಖಾ ಕಚೇರಿಯಲ್ಲಿ  4 ಗುಂಪುಗಳಿವೆ.  ಪ್ರತಿದಿನ ಪ್ರತಿ ಒಂದು ಗುಂಪು 5 ರಿಂದ 6 ಪರಿವರ್ತಕಗಳನ್ನು ರಿಪೇರಿ ಮಾಡಬಹುದು. 

ಈ ಅಭಿಯಾನದಲ್ಲಿ ಎಲ್ಲ ಹಂತದ ಅಧಿಕಾರಿಗಳು ನಿರ್ವಹಣಾ ಸಿಬ್ಬಂದಿ ನಿತ್ಯ ಪರಿವರ್ತಕಗಳನ್ನು ಪರೀಶೀಲಿಸಿ ದೋಷ  ಪಟ್ಟಿದ್ದರೆ ಪರಿವರ್ತಕಗಳ ರಿಪೇರಿಗೆ ಹೆಸ್ಕಾಂ ಪ್ರತಿವರ್ಷ ಸಾಕಷ್ಟು ಹಣ ವೆಚ್ಚ ಮಾಡುತ್ತಿದ್ದು ಕಾಲ ಕಾಲಕ್ಕೆ ನಿರ್ವಹಣೆ ಮಾಡಿದರೆ ರಿಪೇರಿ ವೆಚ್ಚ ತಗ್ಗಿಸಬಹುದು ಎಂದರು.    

ಇನ್ನು ಟಿ.ಸಿಗಳಿಗೆ ತಂತಿ ಬೇಲಿ ಇದ್ದು ಕೆಲವರು ಅದರಲ್ಲಿ ಕಸ ಒಗೆಯುತ್ತಾರೆ. ಪುರಸಭೆ ಅಥವಾ ಗ್ರಾ.ಪಂ ಸಿಬ್ಬಂದಿ ಅದನ್ನು ತೆಗೆಯಲು ಹೆದರುತ್ತಾರೆ. ಹೀಗಾಗಿ ಅವು ತಿಪ್ಪೆಗುಂಡಿಗಳಾಗುತ್ತಿವೆ. ಬಿಲ್ಲ ವಸೂಲಾತಿ ಫೋನ್ ಪೇ ಅಥವಾ ಗೂಗಲ ಪೇ ಮೂಲಕ ಮಾಡಿದರೆ ಸಿಬ್ಬಂದಿಗೆ ಕೆಲಸ ಮಾಡಲು ಅನುಕೂಲವಾಗುತ್ತದೆ ಎಂದರು.  

ಈ ಸಂದರ್ಭದಲ್ಲಿ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತ ಎಸ್‌.ಆರ್‌. ಮೆಂಡೆಗಾರ, ಸಹಾಯಕ ಅಭಿಯಂತರ ನಗರ ಶಾಖೆ ಡಿ.ಎಂ. ಮೂಲಿಮನಿ, ಆನಂದ ಚಾಂದಕವಟೆ, ಮಲ್ಲಿಕಾರ್ಜುನ ಬೆಲ್ಲಿಹಾಳ, ಗುರುರಾಜ ಹಂಡಿ, ಸಂದೀಪ ಅಥಣಿ, ತಿಪ್ಪಣ್ಣ ಕುರಿ, ಎ.ಜೆ.ಮರಡಿ, ಸತೀಶ ರಾಠೋಡ ಮತ್ತಿತರಿದ್ದರು.  


ಸುದ್ದಿ ಓದಿ