ಮನರಂಜನೆ

‘ರಾಜತಂತ್ರ’ ಪೋಸ್ಟರ್ ಅನಾವರಣಗೊಳಿಸಿದ ಪವರ್ ಸ್ಟಾರ್

‘ರಾಜತಂತ್ರ’ ಪೋಸ್ಟರ್ ಅನಾವರಣಗೊಳಿಸಿದ ಪವರ್ ಸ್ಟಾರ್

ಬೆಂಗಳೂರು, ಆಗಸ್ಟ್ 31: ರಾಘವೇಂದ್ರ ರಾಜಕುಮಾರ್  ಅಭಿನಯದ ‘ರಾಜತಂತ್ರ’ ಚಿತ್ರದ ಮೋಷನ್ ಪೋಸ್ಟರ್ ಅನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್      ಅನಾವರಣಗೊಳಿಸಿದ್ದಾರೆ.

ವಿಶ್ವಂ ಡಿಜಿಟಲ್ ಮೀಡಿಯಾ ಸಂಸ್ಥೆ ನಿರ್ಮಾಣವಾಗುತ್ತಿರುವ  ರಾಜತಂತ್ರ’ ಚಿತ್ರದಲ್ಲಿ,  ಸಮಾಜಕ್ಕೆ ಕಂಟಕವಾಗಿರುವ ದುಷ್ಟಶಕ್ತಿಗಳನ್ನು ತನ್ನ ಬುದ್ಧಿಶಕ್ತಿ ಹಾಗೂ ತಂತ್ರಗಾರಿಕೆಯಿಂದ ಮಣಿಸುವ ವಿಶಿಷ್ಟ ಪಾತ್ರದಲ್ಲಿ ರಾಘವೇಂದ್ರ ರಾಜ್ ಕುಮಾರ್‍ ಕಾಣಿಸಿಕೊಳ್ಳಲಿದ್ದಾರೆ.

ರಾಘವೇಂದ್ರ ರಾಜ್ ಕುಮಾರ್ ಸ್ವಗೃಹದಲ್ಲಿ ಪೋಸ್ಟರ್ಬಿ ಡುಗಡೆಗೊಳಿಸಿ ಮಾತನಾಡಿದ ಪುನೀತ್, ಚಿತ್ರಕ್ಕೆ ಶುಭವಾಗಲಿ ಎಂದರು.  ಹಾಗೂ ಪೋಸ್ಟರ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಚಿತ್ರೀಕರಣಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಮುಂದಿನ ತಿಂಗಳಿನಿಂದ ‘ರಾಜತಂತ್ರ’ ಚಿತ್ರೀಕರಣ ಆರಂಭವಾಗುತ್ತಿದೆ.  ಪಿ.ವಿ. ಆರ್ ಸ್ವಾಮಿ ನಿರ್ದೇಶನ ಮತ್ತು ಛಾಯಾಗ್ರಹಣದ ಹೊಣೆ ಹೊತ್ತಿದ್ದಾರೆ.  

ಸುದ್ದಿ ಓದಿ