ರಾಣೆಬೆನ್ನೂರ

ಅಂಚೆ ವಿಮಾ ಯೋಜನೆ ಜನ ಸಂಪರ್ಕ ಅಭಿಯಾನ ಕಾರ್ಯ ಕ್ರಮ

ಅಂಚೆ ವಿಮಾ ಯೋಜನೆ ಜನ ಸಂಪರ್ಕ ಅಭಿಯಾನ ಕಾರ್ಯ ಕ್ರಮ

ರಾಣಿಬೆನ್ನೂರು 24: ಅಂಗೈಯಲ್ಲಿ ಇಂದು ಜಗತ್ತು ಇದ್ದು, ಅದರ ಪೂರಕವಾಗಿ ಇಂದಿನ ತಂತ್ರಜ್ಞಾನ ಯುಗದಲ್ಲಿ ಅಂಚೆ ಇಲಾಖೆಯು ತನ್ನದೇ ಆದ ಛಾಪು ಮೂಡಿಸುತ್ತಿದೆ. ಅದರಲ್ಲೂ ಗ್ರಾಮೀಣ ಭಾಗದ ಜನರ ಸೇವೆಯನ್ನು ಮನೆ ಮನೆಗೆ ತಲುಪಿಸುವ ಸೇವೆ ಶ್ಲಾಘನೀಯವಾದದು ಎಂದು ಗ್ರಾಪಂ ಅಧ್ಯಕ್ಷೆ ಸವಿತಾ ಬಜಾರಿ ಹೇಳಿದರು.  

ಸೋಮವಾರ ತಾಲೂಕಿನ ನದಿಹರಳಳ್ಳಿ ಗ್ರಾಮದಲ್ಲಿ ಅಂಚೇ ಕಛೇರಿ ವತಿಯಿಂದ ಏರ್ಪಡಿಸಿದ್ದ ಸೂರೊಂದು ಸೇವೆ ನೂರು ಅದರ ಅಡಿಯಲ್ಲಿ ಅಂಚೇ ವಿಮಾ ಯೋಜನೆ ಜನ ಸಂಪರ್ಕ ಅಭಿಯಾನ ಕಾರ‌್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮದ ಸರ್ವಜನರು ಅನೇಕ ಸೇವೆಗಳನ್ನು ಅಂಚೆ ಕಚೇರಿಗಳಲ್ಲಿ ಪಡೆದುಕೊಳ್ಳಲು ಮುಂದಾಗಬೇಕು ಎಂದರು.  

ಹಾವೇರಿ ವಿಭಾಗದ ಅಂಚೆ ಅಧೀಕ್ಷಕ ಬಿ. ನಾರಾಯಣ ಮಾತನಾಡಿ, ಕುಟುಂದ ಯಾವುದೆ ಸದಸ್ಯರು ಅಕಾಲಿಕ ಮರಣ ಹೊಂದಿದರೆ ಆತನ ಗಳಿಕೆ ನಿಂತು ಕುಟುಂದ ಆಥಿಕತೆಗೆ ಹಿನ್ನಡೆಯಾಗಲಿದೆ. ಅಂಚೆ ವಿಮಾ ಯೋಜನೆಯ ಭದ್ರತೆ ಪಡೆದಲ್ಲಿ ಆಗುವ ನಷ್ಠವನ್ನು ತುಂಬಿಕೊಳ್ಳಲು ಸಾಧ್ಯ, ಸಣ್ಣ ಪ್ರಮಾಣದ ವಿಮಾ ಕಂತು ತುಂಬುವುದರಿಂದ ಅವಧಿ ಪೂರ್ಣಗೊಂಡಾಗ ದೊರೆಯುವಷ್ಟು ಮೊತ್ತ ಅಕಾಲಿಕ ಮರಣ ಹೊಂದಿದ ವಿಮಾದಾರನ ಕುಟುಂಬದ ನಾಮಿನಿಗೆ ಸಿಗುವುದರಿಂದ ಕುಟುಂಬ ಆರ್ಥಿಕವಾಗಿ ಸುಭದ್ರವಾಗುತ್ತದೆ ಎಂದರು. 

ಹಿಂದಿನ ಕಾಲದಲ್ಲಿ ಅವಿಭಕ್ತ ಕುಟುಂಬಗಳು ಇರುವುದರಿಂದ ಆರ್ಥಿಕ ಭದ್ರತೆ ಇರುತ್ತಿತ್ತು. ಇಂದು ವಿಭಕ್ತ ಕುಟುಂಬಗಳಾಗಿ ಮಾರ​‍್ಾಡು ಆಗುತ್ತಿರುವುದರಿಂದ ಆರ್ಥಿಕ ಭದ್ರತೆ ಇಲ್ಲದಂತಾಗಿದೆ. ಆದಕಾರಣ ಕುಟುಂಬದ ಆರ್ಥಿಕ ಸುಭದ್ರತೆಗೆ ವಿಮೆಯ ಅವಶ್ಯಕತೆ ಇದೆ ಎಂದು ಬಿ. ನಾರಾಯಣ ತಿಳಿಸಿದರು. 

ಗ್ರಾಪಂ ಉಪಾಧ್ಯಕ್ಷೆ ಶಶಿಕಲಾ ಕೋಟೆಗೌಡ್ರ, ಸದಸ್ಯ ಹನುಮಂತಪ್ಪ ಪವಾರ, ಗ್ರಾಮದ ಮುಖಂಡರಾದ ಚಂದ್ರಣ್ಣ ಬೇಡರ, ಜಗದೀಶ, ಮಂಜುನಾಥ ಬಜಾರಿ, ಬೀರಪ್ಪ ಕುರಬರ, ರಾಮಪ್ಪ ಬೆನ್ನೂರ,  ರಾಣಬೆನ್ನೂರು ವಿಭಾಗದ ಅಂಚೆ ನೀರೀಕ್ಷಕ  ಬಿ.ಹೆಚ್‌. ನಾಯಕ, ವೀಕ್ಷಕರಾದ ಸಿ.ಎಸ್‌. ಮತ್ತಿಹಳ್ಳಿ,  ಬಸವರಾಜ, ಪೋಷ್ಟ್‌ ಮಾಷ್ಟರ್ ಚಂದ್ರಶೇಖರ ಕುಂಬಳೂರ, ಅಂಚೆ ಸಿಬ್ಬಂದಿಗಳಾದ ಉಷಾ ಬಜಂತ್ರಿ, ಕುಮಾರ ಪಾಟೀಲ, ಪ್ರವೀಣ ಸಾಗರ, ರಮೇಶ ರಂಗಣ್ಣನವರ ಸೇರಿದಂತೆ ಮತ್ತಿತರರು ಇದ್ದರು. 


ಸುದ್ದಿ ಓದಿ