ಒಪ್ಪತ್ತೇಶ್ವರ ಶ್ರೀಗಳ ಭಾವಚಿತ್ರ ಮೆರವಣಿಗೆ
ಗುಳೇದಗುಡ್ಡ 13: ಪಟ್ಟಣದ ಗುರು ಒಪ್ಪತ್ತೇಶ್ವರ ಮಠದ ನವೀಕೃತ ಕಟ್ಟಡದ ಉದ್ಘಾಟನೆ ಶ್ರೀಗಳ ಪಟ್ಟಾಧಿಕಾರದ 25ನೇ ರಜತ ಮಹೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ಶ್ರೀಗಳ ಭಾವಚಿತ್ರ ಮೆರವಣಿಗೆ ಹಾಗೂ ಮಹಿಳೆಯರಿಂದ ಕುಂಭ ಮೇಳ ಸಕಲ ವಾದ್ಯಗಳೊಂದಿಗೆ ಸೋಮವಾರ ಅದ್ಧೂರಿಯಾಗಿ ನಡೆಯಿತು.
ಒಪತ್ತೇಶ್ವರ ಮಠದಿಂದ ಹೊರಟ ಮೆರವಣಿಗೆಯು ಚೌಬಜಾರ, ಅರಳಿಕಟ್ಟಿ, ಪುರಸಭೆ ಎದುರಿನ ರಸ್ತೆ ಸರಾಫ ಬಜಾರ, ಕಂಠಿಪೇಟೆ ಮುಖಾಂತರ ಸಂಚರಿಸಿ ಶ್ರೀಮಠಕ್ಕೆ ಬಂದು ತಲುಪಿತು. ಮೆರವಣಿಗೆಯುದ್ದಕ್ಕೂ ಒಪ್ಪತ್ತೇಶ್ವರ ಶ್ರೀಗಳ ಜಯಘೋಷ ಮೊಳಗಿದವು. ದಾರಿಯುದ್ದಕ್ಕು ನೂರಾರು ಸುಮಂಗಲೆಯರಿಂದ ಕುಂಭದ ಮೆರವಣಿಗೆ ನಡೆಯಿತು. ನಂದಿಕೋಲು ಕುಣಿತ ನೋಡುಗರ ಕಣ್ಮನ ಸೆಳೆಯಿತು.
ಹುಬ್ಬಳ್ಳಿ ರುದ್ರಾಕ್ಷಿ ಮಠದ ಬಸವಲಿಂಗ ಸ್ವಾಮಿಗಳು, ಎರೆಡೆತ್ತಿನ ಮಠದ ಸಿದ್ದಲಿಂಗ ಶ್ರೀಗಳು, ನವಲಗುಂದ ಗವಿಮಠದ ಬಸವಲಿಂಗ ಶ್ರೀಗಳು, ಕೈಲಾಸಪತಿ ಸ್ವಾಮಿಗಳು, ಗುರಗುಂಟಾದ ಸದಾನಂದ ಶಿವಾಚಾರ್ಯ ಶ್ರೀಗಳು, ಮುರುಘಾಮಠದ ಕಾಶಿನಾಥ ಮಹಾಸ್ವಾಮಿಗಳು, ಕೆಳದಿಯ ಮೃತ್ಯುಂಜಯ ದೇಶಿಕೇಂದ್ರ ಸ್ವಾಮಿಗಳು, ಜಿಗೇರಿ ಹಿರೇಮಠದ ಗುರುಸಿದ್ದೇಶ್ವರ ಶ್ರೀಗಳು, ಮಹಾಂತೇಶ ಹಿರೇಮಠ, ಶಿವು ಹಿರೇಮಠ, ಶಿವಯ್ಯ ಹೊದ್ಲೂರಮಠ, ಗಣೇಶ ಶಾಸ್ತ್ರೀಗಳು ಮೆರವಣಿಗೆಯಲ್ಲಿ ಪಾಲ್ಗೊಡಿದ್ದರು.