ಕಾಗವಾಡ

ಕಳಪೆ ಕಾಮಗಾರಿ: ಹಳ್ಳ ಹಿಡಿದ ನೀರಾವರಿ ಯೋಜನೆ

ಕಳಪೆ ಕಾಮಗಾರಿ: ಹಳ್ಳ ಹಿಡಿದ ನೀರಾವರಿ ಯೋಜನೆ

ಲೋಕದರ್ಶನ ವರದಿ 


ಕಾಗವಾಡ 11: ತಾಲೂಕಿನ ಉತ್ತರ ಭಾಗಕ್ಕೆ ನೀರೊದಗಿಸುವ ಐನಾಪುರ ಏತ ನೀರಾವರಿ ಯೋಜನೆ ಸಂಪೂರ್ಣ ಕಳಪೆ ದರ್ಜೆಯಿಂದ ಕೂಡಿದ್ದು ಕಾಲುವೆಯ ನೀರು ಬಸಿಯುವಿಕೆಯಿಂದ ಐನಾಪುರದ ನೂರಾರು ಎಕ್ಕರೆ ಫಲವತ್ತಾದ ಭೂಮಿ ಹಾಳಾಗಿ ಹೋಗಿದ್ದು ಕಾಲುವೆ ರಿಪೇರಿ ಮಾಡುವಂತೆ ಆಗ್ರಹಿಸಿ ಐನಾಪುರದ ಕರ್ನಾಟಕ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದಾಗ ಹಾರಿಕೆ ಉತ್ತರ ನೀಡಿದ್ದರಿಂದ ಕಚೇರಿಗೆ ಸಾರ್ವಜನಿಕರು ಬೀಗ ಹಾಕಿ ಇಂಜನೀಯರುಗಳ  ಹೇಳಿಕೆಗೆ ಕೆಂಡಾಮಂಡಲರಾದ ಸಾರ್ವಜನಿಕರು ಅಧಿಕಾರಿಗಳ ಚಳಿ ಬಿಡಿಸಿರುವ ಪ್ರಸಂಗ ನಡೆಯಿತು.  

 ಸೋಮವಾರ ದಿನಾಂಕ 11 ರಂದು ಐನಾಪುರ ಏತ ನೀರಾವರಿ ಯೋಜನೆಯ ಕಚೇರಿಗೆ ಇಂದು ನೂರಾರು ರೈತರು ಬಂದು ಅಧಿಕಾರಿಗಳ ಜೊತೆ ಚರ್ಚಿಸಿದರು. ಅಧಿಕಾರಿಗಳು ತಮ್ಮ ಅಸಾಯಕತೆಯನ್ನು ತೋರಿರುವದರಿಂದ ರೊಚ್ಚಿಗೆದ್ದು ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು. 

 ತಾಲೂಕಿನ ಉತ್ತರ ಭಾಗದ ರೈತರ ಜಮೀನುಗಳಿಗೆ ನೀರೊದಗಿಸುವ ಯೋಜನೆ ಇದಾಗಿದ್ದು, ಕೃಷ್ಣಾ ನದಿಯಿಂದ ಸುಮಾರು 21 ಸಾವಿರ ಹೆಕ್ಟರ್ ಭೂ ಪ್ರದೇಶಕ್ಕೆ ನೀರು ಪೂರೈಸುವ ಯೋಜನೆ ಕಳೆದ 12 ವರ್ಷಗಳ ಹಿಂದೆ ಪೂರ್ಣಗೊಂಡಿದ್ದು, ಈ ಕಾಲುವೆಯು 27 ಕಿಮೀ ಉದ್ದವಾಗಿದ್ದು ನದಿಯಿಂದ ಹಾಯ್ದು ಹೋಗುವ ಮೇಲು ಕಾಲುವೆ ಸಂಪೂರ್ಣ ಕಳಪೆ ದರ್ಜೆಯಿಂದ ಕೂಡಿದ್ದು, ನೀರು ಬಸಿವಿಕೆಯು ಹೆಚ್ಚಾಗಿರುವದರಿಂದ ಸುಮಾರು 5 ಸಾವಿರ ಎಕ್ಕರ ಭೂಮಿ ಕಾಲುವೆಯ ಅಕ್ಕಪಕ್ಕದಲ್ಲಿರುವದರಿಂದ ಜಮೀನುಗಳಿಗೆ ನೀರು ಹೊಕ್ಕು ಸುಮಾರು 4 ರಿಂದ 5 ತಿಂಗಳುಗಳವರೆಗೆ ನೀರು ಇರುವದರಿಂದ ಬೆಳೆ ಬೆಳೆಯಲು ಆಗುತ್ತಿಲ್ಲ, ಅಲ್ಲದೆ ನೀರಂತರ ನೀರು ಬಸಿವಿಕೆಯಿಂದ ಫಲವಾತ್ತಾದ ಭೂಮಿ ಜವಳು ಹಿಡಿಯುತ್ತಿವೆ, ಈ ಕುರಿತು ನೂರಾರು ಬಾರಿ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ರೈತರು ಮನವಿ ಮಾಡಿಕೊಂಡರು ಪ್ರಯೋಜನವಾಗಿಲ್ಲ. ಆದ್ದರಿಂದ ರೊಚ್ಚಿಗೆದ್ದ ರೈರತು ಇಂದು ಕಚೇರಿಗೆ ಬೀಗ ಹಾಕಿ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ವಿರುದ್ದ ಧಿಕ್ಕಾರಗಳನ್ನು ಕೂಗಿ ಪ್ರತಿಭಟನೆ ನಡೆಸಿದರು. 

 ಅಸಾಯಕತೆ ತೋರಿದ ಇಂಜನೀಯರ;- ತಾವು ಕೂಡ ಹಲವಾರು ಬಾರಿ ಮನವಿ ಮಾಡಿಕೊಂಡಿದ್ದೀರಿ ಆ ಪ್ರಕಾರ ನಾವು ನಮ್ಮ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಈಗಲೂ ಕೂಡ ಅಧಿಕಾರಿಗಳ ಜೊತೆ ದೂರವಾಣಿಯ ಮೂಲಕ ಮಾತನಾಡುತ್ತೇನೆ. ಅನುದಾನವಿಲ್ಲ, ಬಂದ ನಂತರ ಬರುವ ಜೂನ ಒಳಗಾಗಿ ರಿಪೇರಿ ಮಾಡಿಸುವ ಪ್ರಯತ್ನ ಮಾಡುವುದಾಗಿ ತಮ್ಮ ಅಸಾಯಕತೆಯನ್ನು ತೋರಿದ ಹಿನ್ನೆಲೆ ರೈತರು ಧಿಕ್ಕಾರಗಳನ್ನು ಕೂಗುತ್ತ ಅಧಿಕಾರಿಗಳನ್ನು ಕಚೇರಿಯಿಂದ ಹೊರ ಹಾಕಿ ಬೀಗ ಜಡಿದು ಪ್ರತಿಭಟನೆಗಿಳಿದರು. ನೀವು ಕಾಲುವೆ ರಿಪೇರಿ ಮಾಡಿ ಆ ಮೇಲೆ ಕಚೇರಿಗೆ ಬನ್ನಿ ಅಲ್ಲಿಯವರೆಗೆ ಕಚೇರಿ ತೆರೆಯಬೇಡಿ ಎಂದು ರೈತರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. 

ನಾಳೆ ಪರೀಶೀಲನೆ:  

ಈ ಕುರಿತಂತೆ ನೀರಾವರಿ ಇಲಾಖೆಯ ಸುಪರಿಡೆಂಟ್ ಇಂಜನೀಯರ ಬಿ.ಆರ್‌.ರಾಠೋಡ, ಕೆ.ಕೆ.ಜಾಲಿಬೇರಿಯವರು ಮಂಗಳವಾರ ಭೇಟ್ಟಿ ನೀಡಿ ಕಾಲುವೆಗಳನ್ನು ಪರೀಶೀಲಿಸುವುದಾಗಿ ಹೇಳಿದರು.  

 ಮುಖಂಡರಾದ ಪ್ರವೀಣ ಗಾಣಿಗೇರ, ಅರುಣ ಗಾಣಿಗೇರ, ಕುಮಾರ ಅಪರಾಜ, ಸಂಜಯ ಭೀರಡಿ, ಆದಿನಾಥ ದಾನೊಳ್ಳಿ,ಗೋಪಾಲ ಮಾನಗಾಂವೆ, ಸುರೇಶ ಗಾಣಿಗೇರ, ಹಣಮಂತ ಗುರವ, ಸುರೇಶ ಅಡಿಸೇರಿ, ಅಪ್ಪಾಸಾಬ ಅಪರಾಜ,ಅನೀಲ ಸಾವಳಿ, ಸುಭಾಷ ಪಾಟೀಲ, ಪಮ್ಮು ಕುಸನಾಳೆ,ನರಸು ಕೋರ್ಬು, ರಾಜು ವಡಿಯರ, ಬಾಹುಬಲಿ ಮಲ್ಲೇವಾಡಿ, ರಾಜು ಪೋತದಾರ ಸೇರಿದಂತೆ ನೂರಾರು ರೈತರು ಪಾಲಗೊಂಡಿದ್ದರು. 


ಸುದ್ದಿ ಓದಿ